ಬೆಂಗಳೂರು: ಗೋಪಾ ಟ್ರಿಪ್ ಗೆ ತೆರಳಿದ್ದಂತ ವೇಳೆಯಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕರ ನಡುವೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಸ್ಪೂನ್ ನಿಂದ ನಿರ್ಮಾಪಕ ಸತೀಶ್ ಸಿಕ್ಕ ಸಿಕ್ಕವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸ್ವಲ್ಪ ಕೆಳಗೆ ಬಿದ್ದಿದ್ದರೇ ನನ್ನ ಕಣ್ಣೇ ಹೋಗುತ್ತಿತ್ತು ಅಂತ ಎ.ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ.
ನಿರ್ಮಾಪಕ ಎ.ಗಣೇಶ್ ಮತ್ತು ರಥಾವರ ಮಂಜುನಾಥ್ ಮೇಲೆ ಸತೀಶ್ ಆರ್ಯ ಎಂಬುವರು ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಗಣೇಶ್ ಮೂಗು ಹರಿದಿದ್ದು, 15 ಸ್ಟಿಚ್ ಹಾಕಲಾಗಿದೆ.
ಸ್ಪೂನ್ ನಿಂದ ಸತೀಶ್ ಚುಚ್ಚಿದ್ದರಿಂದ ತನ್ನ ಕಣ್ಣಿಗೆ ಗಾಯವಾಗಿದೆ. ನನ್ನ ಮೇಲೆ ಅಲ್ಲದೇ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ತಲೆಗೆ ಪೆಟ್ಟು ಬಿದ್ದಿದೆ ಅಂತ ಹೇಳಿದ್ದಾರೆ.
ಇನ್ನೂ ಗೋವಾ ಗಲಾಟೆ ಸಂಬಂಧ ನಾಳೆ ಫಿಲ್ಮ್ ಚೇಂಬರ್ನಲ್ಲಿ ಮೀಟಿಂಗ್ ಕರೆಯಲಾಗಿದೆ. ಈ ಘಟನೆ ಸಂಬಂಧ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಿದ್ದೇನೆ ಎಂದು ನಿರ್ಮಾಪಕ ಎ ಗಣೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
BREAKING: ಅಶ್ಲೀಲ ವೀಡಿಯೋ ಕೇಸ್: ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಕೋರ್ಟ್ ಗೆ ಅರ್ಜಿ ಸಲ್ಲಿಕೆ
ಮೇ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ: ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಸೂಚನೆ