ಬೆಂಗಳೂರು: ಕನ್ನಡದ ಹಲವು ಸಿನಿಮಾಗಳಲ್ಲಿ ತನ್ನ ವಿಶಿಷ್ಟ ನಟನೆಯ ಮೂಲಕ ಗುರ್ತಿಸಿಕೊಂಡಿದ್ದಂತ ಸ್ಯಾಂಡಲ್ ವುಡ್ ನಟ ಪ್ರಕಾಶ್ ಹೆಗ್ಗೋಡು ಇಂದು ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ.
ರಂಗಭೂಮಿ ಕಲಾವಿದ, ಚಿತ್ರ ನಟ , ಸಂಘಟಕ, ಸಾಮಾಜಿಕ ಹೋರಾಟಗಾರ ಏಸು ಪ್ರಕಾಶ್ ಕಲ್ಲುಕೊಪ್ಪ ( ಪ್ರಕಾಶ್ ಹೆಗ್ಗೋಡು) ಇನ್ನಿಲ್ಲ. 58 ವರ್ಷ ವಯಸ್ಸಿನ ಪ್ರಕಾಶ್ ಅಲ್ಪಕಾಲದ ಅನಾರೋಗ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ.
ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಂತ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಅವರು ಚಿಕಿತ್ಸೆ ಫಲಿಸದೇ ಅವರ ಇಂದು ನಿಧನರಾಗಿದ್ದಾರೆ.
ಇಬ್ಬರು ಪುತ್ರಿಯರು, ಹಾಗೂ ಓರ್ವ ಪುತ್ರ, ಪತ್ನಿಯನ್ನು ನಟ ಪ್ರಕಾಶ್ ಹೆಗ್ಗೋಡು ಅಗಲಿದ್ದಾರೆ.
ಇಂದು ನಿಧನರಾದಂತ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಭಾನುವಾರದ ನಾಳೆ ಬೆಳಗ್ಗೆ 9 ಗಂಟೆಯಿಂದ ಕಲ್ಲುಕೊಪ್ಪದ (ಪುರಪ್ಪೇಮನೆ) ಅವರ ಸ್ವಗೃಹದಲ್ಲಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆ ಬಳಿಕ ನಾಳೆ ಕುಟುಂಬಸ್ಥರಿಂದ ಸ್ವಗ್ರಾಹಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಅಂದಹಾಗೆ ಕನ್ನಡದ ಯಶ್ ನಟನೆಯ ಕಿರಾತಕ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಪ್ರಕಾಶ್ ಹೆಗ್ಗೋಡು ಅಭಿನಯಿಸಿದ್ದಾರೆ. ಸಾಗರ ತಾಲೂಕಿನ ಹೆಗ್ಗೋಡಿನ ನಿನಾಸಂ ನ ಖ್ಯಾತ ಚಲನಚಿತ್ರ ನಟ ಹಲವಾರು ಯಶಸ್ವಿ ಚಿತ್ರಗಳಲ್ಲಿ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡು ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.
SSLC ಪರೀಕ್ಷೆ: ಇಂದು ‘8.41 ಲಕ್ಷ ವಿದ್ಯಾರ್ಥಿ’ಗಳು ಹಾಜರ್, ಓರ್ವ ಡಿಬಾರ್ | SSLC Exam
ಬಿಜೆಪಿ ಕಚೇರಿ ಆವರಣದಲ್ಲೇ ಇ.ಡಿ, ಸಿಬಿಐಗಳಿಗೆ ಜಾಗ ನೀಡಿ – ಮಾಜಿ MLC ರಮೇಶ್ ಬಾಬು ವಾಗ್ಧಾಳಿ