ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಹಾಗೂ ಪತ್ನಿ ಸಪ್ನಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ನಟ ಅಜಯ್ ರಾವ್ ಅವರಿಂದ ವಿಚ್ಛೇದನ ಕೋರಿ ಪತ್ನಿ ಸಪ್ನಾ ಅರ್ಜಿ ಸಲ್ಲಿಸಿದ್ದಾರೆ.
ಡಿಸೆಂಬರ್.18, 2014ರಂದು ನಟ ಅಜಯ್ ರಾವ್ ಹಾಗೂ ಸಪ್ನಾ ಪ್ರೀತಿಸಿ ಮದುವೆಯಾಗಿದದರು. ಹೊಸಪೇಟೆಯಲ್ಲಿ ಸರಳವಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲದೇ ಹೊಸ ಮನೆಗೆ ಗೃಹ ಪ್ರವೇಶ ಕೂಡ ಮಾಡಲಾಗಿತ್ತು.
ಇಂತಹ ನಟನ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ನಟ ಅಜಯ್ ರಾವ್ ಅವರಿಂದ ವಿಚ್ಛೇದನ ಕೋರಿ ಪತ್ನಿ ಸಪ್ನಾ ರಾವ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ನಟ ಅಜಯ್ ರಾವ್ ಅವರಿಂದ ದೂರಾಗಲು ಮುಂದಾಗಿದ್ದಾರೆ.
ಅಂದಹಾಗೇ ನಟ ಅಜಯ್ ರಾವ್ ಹಾಗೂ ಪತ್ನಿ ಸಪ್ನಾ ರಾವ್ ದಂಪತಿಗಳಿಗೆ ಓರ್ವ ಪುತ್ರಿ ಕೂಡ ಇದ್ದಾರೆ. ತಾಯಿ ಸಪ್ನಾ ಜೊತೆಗೆ ಪುತ್ರಿ ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.
Good News: ‘ಕ್ಯಾನ್ಸರ್ ಕೋಶ’ಗಳನ್ನು ಸಾಮಾನ್ಯ ಸ್ಥಿತಿಗೆ ತರುವ ‘ಆಣ್ವಿಕ ಸ್ವಿಚ್’ ಕಂಡುಹಿಡಿದ ವಿಜ್ಞಾನಿಗಳು