ನವದೆಹಲಿ : ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಅವರನ್ನ ತರಾಟೆಗೆ ತೆಗೆದುಕೊಂಡ ಕೆಲವು ದಿನಗಳ ನಂತ್ರ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಮದ್ರಾಸ್ ಹೈಕೋರ್ಟ್ ಇಂದು ಸ್ವಲ್ಪ ಪರಿಹಾರ ನೀಡಿದೆ. ಸ್ಟಾಲಿನ್ ಮತ್ತು ಇತರ ಇಬ್ಬರು ಡಿಎಂಕೆ ನಾಯಕರು ಶಾಸಕರಾಗಿ ಮುಂದುವರಿಯುವುದನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಾಲಯ ಇಂದು ವಜಾಗೊಳಿಸಿದೆ.
ಸ್ಟಾಲಿನ್ ಅವರ ಹೇಳಿಕೆಗಳು “ತಪ್ಪು” ಎಂದು ಹೈಕೋರ್ಟ್ ಗಮನಿಸಿದೆ. ಆದ್ರೆ, ಅವರನ್ನ ಇನ್ನೂ ಯಾವುದೇ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿಲ್ಲ ಎಂದು ಗಮನಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರರಾಗಿರುವ 46 ವರ್ಷದ ಡಿಎಂಕೆ ನಾಯಕ ಕಳೆದ ಸೆಪ್ಟೆಂಬರ್ನಲ್ಲಿ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ಸನಾತನವು ಮಲೇರಿಯಾ ಮತ್ತು ಡೆಂಗ್ಯೂ ಇದ್ದಂತೆ, ಅದನ್ನ ನಿರ್ಮೂಲನೆ ಮಾಡಬೇಕು” ಎಂದು ಹೇಳಿಕೆಗಳು ಭಾರಿ ವಿವಾದವನ್ನ ಹುಟ್ಟುಹಾಕಿದ್ದವು.
“ದುಷ್ಕರ್ಮಿಗಳನ್ನ ರಕ್ಷಿಸಲು ಟಿಎಂಸಿ ಪ್ರಯತ್ನಿಸ್ತಿದೆ” : ಸಂದೇಶ್ಖಾಲಿ ವಿವಾದದ ನಡುವೆ ‘ಪ್ರಧಾನಿ ಮೋದಿ’
BREAKING: ನೆಲಮಂಗಲ ಆಸರೆ ಆಸ್ಪತ್ರೆಯಲ್ಲಿ 74 ಭ್ರೂಣ ಹತ್ಯೆ ಕೇಸ್: ಮಾಲೀಕ ಡಾ.ರವಿಕುಮಾರ್ ನಾಪತ್ತೆ
BREKING : ಲೋಕಸಭೆಗೆ ರಾಯ್ಬರೇಲಿಯಿಂದ ‘ಪ್ರಿಯಾಂಕಾ’, ಅಮೇಥಿ, ವಯನಾಡ್ ಎರಡರಿಂದ ‘ರಾಹುಲ್ ಗಾಂಧಿ’ ಸ್ಪರ್ಧೆ : ವರದಿ