ಸಿಯಲ್:‌ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್(Samsung Electronics) ಇದೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯನ್ನು ನೇಮಿಸಲು ಮುಂದಾಗಿದ್ದು, ಲೀ ಯಂಗ್-ಹೀ (Lee Young-hee) ಅವರನ್ನು ಅಧ್ಯಕ್ಷೆಯಾಗಿ ನೇಮಕ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಕಂಪನಿ ಮೊದಲ ಹೆಜ್ಜೆಯಲ್ಲಿ ಮಹಿಳಾ ಪ್ರತಿಭೆಯನ್ನು ಉನ್ನತ ಹುದ್ದೆಗೇರಿಸಿದೆ. ಲೀ ಯಂಗ್-ಹೀ ತನ್ನ ಮೊಬೈಲ್ ವ್ಯವಹಾರವನ್ನು ನೋಡಿಕೊಳ್ಳುವ ಸ್ಯಾಮ್‌ಸಂಗ್‌ನ ಡಿವೈಸ್ ಎಕ್ಸ್‌ಪೀರಿಯೆನ್ಸ್ (ಡಿಎಕ್ಸ್) ವಿಭಾಗದ ಜಾಗತಿಕ ಮಾರ್ಕೆಟಿಂಗ್ ಸೆಂಟರ್‌ನ ಅಧ್ಯಕ್ಷೆಯಾಗಿ ಬಡ್ತಿ ಪಡೆದರು.

ದಿವಂಗತ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಲೀ ಕುನ್-ಹೀ ಅವರ ಮೊದಲ ಪುತ್ರಿ ಲೀ ಬೂ-ಜಿನ್ ಪ್ರಸ್ತುತ ಸ್ಯಾಮ್‌ಸಂಗ್ ಅಂಗಸಂಸ್ಥೆಯಾದ ಹೋಟೆಲ್ ಶಿಲ್ಲಾದ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲೀ ಯಂಗ್-ಹೀ ಅವರು 2007 ರಲ್ಲಿ ಟೆಕ್ ದೈತ್ಯಕ್ಕೆ ಸೇರಿದ್ದು, 2012 ರಲ್ಲಿ ಉಪಾಧ್ಯಕ್ಷರಾಗಿ ಬಡ್ತಿ ಪಡೆದರು. ಈ ಹಿಂದೆ ಲೋರಿಯಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು Samsung ನ Galaxy ಮೊಬೈಲ್ ಫೋನ್‌ಗಳ ಇಮೇಜ್ ಮತ್ತು ಬ್ರ್ಯಾಂಡ್ ಅನ್ನು ಯಶಸ್ವಿಯಾಗಿ ಪ್ರಚಾರ ಮಾಡಿದ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ.

ಸ್ಯಾಂಡಲ್‌ವುಡ್‌ ಹಿರಿಯ ನಟ ನಟ ಮನ್​ದೀಪ್​ ರಾಯ್​ಗೆ ಹೃದಯಾಘಾತ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

Karnataka Politics: ಬಿಜೆಪಿ ಸರ್ಕಾರ 40% ಹಣ ಖರ್ಚು ಮಾಡಿ, 60% ಜೇಬಿಗೆ ಇಳಿಸಿದೆ – ಮಾಜಿ ಸಿಎಂ HDK ಗಂಭೀರ ಆರೋಪ

ಗಮನಿಸಿ : ಇನ್ಮುಂದೆ ಮನೆಯಲ್ಲೇ ಕುಳಿತು `ರೇಷನ್ ಕಾರ್ಡ್’ ಗೆ ಅರ್ಜಿ ಸಲ್ಲಿಸಬಹುದು! ಹೇಗೆ ಗೊತ್ತಾ?New Ration Card

ಸ್ಯಾಂಡಲ್‌ವುಡ್‌ ಹಿರಿಯ ನಟ ನಟ ಮನ್​ದೀಪ್​ ರಾಯ್​ಗೆ ಹೃದಯಾಘಾತ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

Share.
Exit mobile version