ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಕೆಲವು ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಗೆಲುವಿಗಾಗಿ ಜಿಲ್ಲಾ ಉಸ್ತುವಾರಿಗಳು, ರಾಜ್ಯ ಉಸ್ತುವಾರಿಗಳನ್ನು ನೇಮಕಗೊಳಿಸಿದ್ದಾವೆ. ಇದರ ನಡುವೆ ಸಮಾಜವಾದಿ ಪಕ್ಷದಿಂದ ಒಂದು ಹೆಚ್ಚು ಮುಂದೆ ಎನ್ನುವಂತೆ ಲೋಕಸಭಾ ಚುನಾವಣೆಗೆ 16 ಅಭ್ಯರ್ಥಿಗಳ ಹೆಸರನ್ನೇ ಘೋಷಣೆ ಮಾಡಿದೆ.
ಹೌದು 2024 ರ ಲೋಕಸಭಾ ಚುನಾವಣೆಗೆ ( Lok Sabha elections 2024 ) ಸಮಾಜವಾದಿ ಪಕ್ಷ (Samajwadi Party -SP) ಮಂಗಳವಾರ 16 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮೈನ್ಪುರಿಯಿಂದ ಡಿಂಪಲ್ ಯಾದವ್, ಸಂಭಾಲ್ನಿಂದ ಶಫಿಕುರ್ ರೆಹಮಾನ್ ಬಾರ್ಕ್ ಮತ್ತು ಲಕ್ನೋದಿಂದ ರವಿದಾಸ್ ಮೆಹ್ರೋತ್ರಾ ಸ್ಪರ್ಧಿಸಲಿದ್ದಾರೆ.
ಹೀಗಿದೆ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷದಿಂದ ಘೋಷಣೆಯಾದ 16 ಅಭ್ಯರ್ಥಿಗಳ ಪಟ್ಟಿ
ಅಕ್ಷಯ್ ಯಾದವ್ (ಫಿರೋಜಾಬಾದ್), ದೇವೇಶ್ ಶಾಕ್ಯ (ಇಟಾ), ಧರ್ಮೇಂದ್ರ ಯಾದವ್ (ಬದಾಯುನ್), ಉತ್ಕರ್ಷ್ ವರ್ಮಾ (ಖಿರಿ), ಆನಂದ್ ಭದೌರಿಯಾ (ಧೌರಾಹರಾ), ಅನು ಟಂಡನ್ (ಉನ್ನಾವೊ), ನವಲ್ ಕಿಶೋರ್ ಶಾಕ್ಯ (ಫರೂಕಾಬಾದ್), ರಾಜಾರಾಮ್ ಪಾಲ್ (ಅಕ್ಬರ್ಪುರ), ಶಿವಶಂಕರ್ ಸಿಂಗ್ ಪಟೇಲ್ (ಬಂಡಾ), ಅವದೇಶ್ ಪ್ರಸಾದ್ (ಫೈಜಾಬಾದ್), ಲಾಲ್ಜಿ ವರ್ಮಾ (ಅಂಬೇಡ್ಕರ್ ನಗರ), ರಾಮ್ ಪ್ರಸಾದ್ ಚೌಧರಿ (ಬಸ್ತಿ) ಮತ್ತು ಕಾಜಲ್ ನಿಷಾದ್ (ಗೋರಖ್ಪುರ).
— Samajwadi Party (@samajwadiparty) January 30, 2024
BREAKING: ಸೈಫರ್ ಪ್ರಕರಣದಲ್ಲಿ ಪಾಕಿಸ್ತಾನ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ಗೆ 10 ವರ್ಷ ಜೈಲು ಶಿಕ್ಷೆ