ಬೆಂಗಳೂರು: ಈಗಾಗಲೇ ಸಕಲೇಶಪುರ – ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾದ ಪರಿಣಾಮ ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಎರಡು ರೈಲುಗಳ ವೇಳೆ ಕಡಿತ, ಮತ್ತೆರಡು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದ ಕಾರಣ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.
ರದ್ದುಗೊಂಡ ರೈಲುಗಳು
1. ರೈಲು ಸಂಖ್ಯೆ 16595 ಕೆಎಸ್ಆರ್ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿದೆ.
2. ರೈಲು ಸಂಖ್ಯೆ 16596 ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿದೆ
3. ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿದೆ.
4. ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿದೆ.
5. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿದೆ.
6. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ಪ್ರೆಸ್ ವಿಶೇಷ ರೈಲು ದಿನಾಂಕ 13.08.2024 ಮತ್ತು 14.08.2024 ರಂದು ರದ್ದಾಗಿದೆ.
7. ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿದೆ.
8. ರೈಲು ಸಂಖ್ಯೆ 16575 ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿದೆ.
9. ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿದೆ.
10. ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿದೆ.