ಮುಂಬೈ : ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಹಲ್ಲೆಗೂ ಮುಂಬೈನಲ್ಲಿ ಶುಕ್ರವಾರ ಬಂಧನಕ್ಕೊಳಗಾದ ವ್ಯಕ್ತಿಗೂ ಸಂಬಂಧವಿದೆ ಎಂಬ ವರದಿಗಳನ್ನು ನಿರಾಕರಿಸಿರುವ ಮುಂಬೈ ಪೊಲೀಸರು, ಅದು ನಿಜವಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ಆ ವ್ಯಕ್ತಿಯನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ಆತನ ಬಗ್ಗೆ ಹೆಚ್ಚು ತಿಳಿದಿಲ್ಲ, ಆದರೆ ಮೂಲಗಳು ಆರಂಭದಲ್ಲಿ ಇರಿತ ಪ್ರಕರಣಕ್ಕೆ ಸಂಬಂಧಿಸಿದ್ದಾನೆ ಎಂದು ಹೇಳಿದ್ದರು. ಆದ್ರೆ, ನಿನ್ನೆ ನಟನ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ ಅದೇ ವ್ಯಕ್ತಿ ಆತನೇ ಎಂಬುದು ಇಲ್ಲಿಯವೆರೆಗೂ ದೃಢಪಟ್ಟಿಲ್ಲ.
ಆದಾಗ್ಯೂ, ಶುಕ್ರವಾರ ಮಧ್ಯಾಹ್ನ, ವಿಚಾರಣೆಗಾಗಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾದ ವ್ಯಕ್ತಿಗೂ ಸೈಫ್ ಅಲಿ ಖಾನ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಯಾರನ್ನೂ ಬಂಧಿಯಾಗಿಲ್ಲ ಅಥವಾ ಬಂಧಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಪರಿಸರಸ್ನೇಹಿ ಅಟೋಮೊಬೈಲ್ ಕ್ಷೇತ್ರಕ್ಕೆ ಪಿಎಂ ಇ-ಡ್ರೈವ್, ಪಿಎಲ್ಐ ಕೊಡುಗೆ ನಿರ್ಣಾಯಕ: HDK
BREAKING: ನಟ ಸೈಫ್ ಆಲಿಕಾನ್ ಐಸಿಯುನಿಂದ ‘ಸಾಮಾನ್ಯ ವಾರ್ಡ್’ಗೆ ಶಿಫ್ಟ್: ಪ್ರಾಣಾಪಾಯದಿಂದ ಪಾರು