ಶಿವಮೊಗ್ಗ: ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಶಾಸಕರಿಗೆ ಬೆಂಬಲವನ್ನು ತಾಳಗುಪ್ಪ ಹೋಬಳಿಯ ಸೈದೂರು ವ್ಯವಸಾಯ ಸೇವಾ ಸಂಘದ ಪ್ರಮುಖರು ಘೋಷಿಸಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಹೋಬಳಿಯ ರಾಮಪ್ಪ ಸೈದೂರು ಅವರು, ಸೈದೂರು ವ್ಯವಸಾಯ ಸೇವಾ ಸಂಘದ ಪ್ರಮುಖರೆಲ್ಲರೂ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಇವರೊಂದಿಗೆ ಹಿರೆನೆಲ್ಲೂರು ರವಿ ತಾಳಗುಪ್ಪ, ಮಂಜುನಾಥ ಶಿರವಂತೆ, ಗಣಪತಿ ಬರದವಳ್ಳಿ, ಕಾರ್ಗಲ್ ವೆಂಕಟರಮಣ, ಸೈದೂರು ಬಸವರಾಜ್ ಕುಗ್ವೆ ಅವರು ಕೂಡ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಅಂದಹಾಗೆ ಎರಡು ದಿನಗಳ ಹಿಂದೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತ ವೇಳೆಯಲ್ಲಿ ಈ ಮುಖಂಡರು ಶಾಸಕರೊಂದಿಗೆ ಉಪಸ್ಥಿತರಾಗಿದ್ದರು. ಈ ಸಂದರ್ಭದಲ್ಲೇ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಒಟ್ಟಾರೆಯಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಾಗರದ ವ್ಯವಸಾಯ ಸೇವಾ ಸಂಘದ ಮುಖಂಡರಲ್ಲದೇ, ಸೊರಬ ತಾಲೂಕಿನ ಮುಖಂಡರು ಬೆಂಬಲ ನೀಡಿದ್ದಾರೆ. ಈ ಮೂಲಕ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗೆಲುವು ಖಚಿತ ಎಂದೇ ಹೇಳಲಾಗುತ್ತಿದೆ. ಆ ಬಗ್ಗೆ ಜೂನ್ 28ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಕಟ್ಟಡದಲ್ಲಿ ಮತದಾನ ನಡೆದು, ಅಂದೇ ಮತಏಣಿಕೆಯ ನಂತ್ರ ಪ್ರಕಟವಾಗುವಂತ ಫಲಿತಾಂಶದಲ್ಲಿ ಹೊರ ಬೀಳಲಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ನಿಮ್ಮ ಮೂಲ ವೇತನ 12,000 ರೂ.ಗಳಾಗಿದ್ರೆ, ನಿವೃತ್ತಿಯ ನಂತ್ರ ಎಷ್ಟು ಲಕ್ಷ ‘PF’ ಬರುತ್ತೆ ಗೊತ್ತಾ.?