Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕಾಗಿ ಈ 9 ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

08/04/2026 8:00 AM

IPL 2026: ಜೈಸ್ವಾಲ್ ಬ್ಯಾಟಿಂಗ್ ಅಬ್ಬರಕ್ಕೆ ನಡುಗಿದ ಮುಂಬೈ: ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್ ರಾಯಲ್ಸ್!

08/04/2026 7:53 AM

ಬ್ಯಾಂಡ್ ಬಾಜಾ ಇದೆ, ಆದ್ರೆ ಅಡುಗೆಗೆ ಗ್ಯಾಸ್ ಇಲ್ಲ!: ಮದುವೆ ಸೀಸನ್‌ನಲ್ಲಿ ಎಲ್‌ಪಿಜಿ ಅಭಾವ; ಹೈರಾಣಾದ ಕ್ಯಾಟರರ್ಸ್, ಮೆನುವಿನಲ್ಲೂ ಬದಲಾವಣೆ!

08/04/2026 7:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ
KARNATAKA

ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ

By kannadanewsnow0930/06/2025 9:35 PM

ಶಿವಮೊಗ್ಗ: ಸಿನಿಮಾಗಳು ಕೇವಲ ದೃಶ್ಯ ಕಥಾನಕಗಳಲ್ಲ. ಅವು ಜೀವನದ ಸಣ್ಣ ತುಣುಕುಗಳು. ದೃಶ್ಯ, ಧ್ವನಿ, ಸಂಗೀತ, ಪಾತ್ರ ಮತ್ತು ದೃಶ್ಯ ಸಜ್ಜಿಕೆಯ ಮೂಲಕ ನಿರ್ದೇಶಕ ಕಟ್ಟಿಕೊಡುವ ವಾಸ್ತವಿಕ ಜಗತ್ತು. ಈ ನಿಟ್ಟಿನಲ್ಲಿ ಪ್ರೇಕ್ಷಕರ ಅಭಿರುಚಿ ಬೆಳೆಸುವ ಮತ್ತು ಕಲಾತ್ಮಕತೆಯನ್ನು ಅನಾವರಣಗೊಳಿಸುವ ಜಾಗತಿಕ ಗುಣಮಟ್ಟದ ಸಿನಿಮಾಗಳು ಇಂದಿನ ಅಗತ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿ ಆವರಣದಲ್ಲಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿರುವ 16ನೇ ವರ್ಷದ “ಸಹ್ಯಾದ್ರಿ ಸಿನಿಮೋತ್ಸವ”ವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಜಗತ್ತಿನ ಅತ್ಯುತ್ತಮ ಚಲನಚಿತ್ರಗಳು ಪೂರ್ವ ಏಷ್ಯಾದ ಜಪಾನ್, ಹಾಂಕಾಂಗ್, ಕೊರಿಯಾ ದೇಶಗಳಲ್ಲಿ ನಿರ್ಮಾಣವಾಗುತ್ತಿವೆ. ಇನ್ನು ಭಾರತೀಯ ಸಿನಿಮಾರಂಗದಲ್ಲಿ ಮಲಯಾಳಂ, ಬೆಂಗಾಲಿ ಮತ್ತು ಸ್ವಲ್ಪಮಟ್ಟಿಗೆ ತಮಿಳು ಚಿತ್ರರಂಗ ಎಲ್ಲಾ ಆಯಾಮಗಳಲ್ಲಿಯೂ ಉತ್ತಮ ಎಂದು ಪರಿಗಣಿಸಬಹುದಾದ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸುತ್ತಿವೆ. ಆದರೆ ಕನ್ನಡ ಚಿತ್ರರಂಗ ದಿನೇ ದಿನೇ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಎಸ್ ಪೂರ್ಣಾನಂದ‌ ಮಾತನಾಡಿ, ಪೂರ್ವ ಏಷಿಯಾ ಸಿನಿಮಾದ ಮಹತ್ವ, ಪ್ರಸ್ತುತ ದಿನಗಳಲ್ಲಿ ಜಪಾನ್, ಕೊರಿಯಾ, ಚೀನಾ, ಹಾಂಕಾಂಗ್ ಸಿನಿಮಾಗಳ ಪ್ರಾಮುಖ್ಯತೆ ಹಾಗೂ ಈ ಪ್ರದೇಶಗಳ ಸಾಂಸ್ಕೃತಿಕ ಮತ್ತು ಭೌಗೋಳಿಕತೆಯ ವಿಶಿಷ್ಠತೆಯ ಕುರಿತು‌‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ವರ್ಗೀಸ್ ಪಿ.ಎ , ಪ್ರೊ.ಸತೀಶ್ ಕುಮಾರ್, ಪ್ರೊ. ಸತ್ಯಪ್ರಕಾಶ್. ಎಂ. ಆರ್, ಡಾ. ರುಮಾನ ತನ್ವೀರ್, ವರ್ಣಶ್ರೀ, ರಾಸುಮ, ದೊರೆಸ್ವಾಮಿ, ಸುನಿಲ್ ಮತ್ತು ವಿವಿಧ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಈ ಸಲದ ವಿಶೇಷ: ಪ್ರತಿ ವರ್ಷ ಪ್ರೇಕ್ಷಕರ ಸಿನಿಜ್ಞಾನವನ್ನು ವಿಸ್ತರಿಸುವ ಜೊತೆಗೆ ಮನರಂಜನೆ ಮತ್ತು ಮಾಹಿತಿ ನೀಡುವ ಉದ್ದೇಶದಿಂದ ವಿವಿಧ ವಿಚಾರಗಳನ್ನು ಒಳಗೊಂಡ ಸಿನಿಮಾಗಳನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಪತ್ರಿಕೋದ್ಯಮ ವಿಭಾಗವು ಮಾಡುತ್ತಿದ್ದು, ಈ ಬಾರಿ ಪೂರ್ವ ಏಷಿಯಾ ಭೂ ಭಾಗದ ಚಿತ್ರಗಳನ್ನು ಸಿನಿ ಹಬ್ಬದ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಅವುಗಳಲ್ಲಿ ಹಾಂಗ್- ಕಾಂಗ್‌ನ ‘ಇನ್ ದಿ ಮೂಡ್ ಫಾರ್ ಲವ್’, ದಕ್ಷಿಣ ಕೋರಿಯಾದ ‘ಮೆಮೊರೀಸ್ ಆಫ್ ಮರ್ಡರ್’, ‘ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್ ಆಂಡ್ ಸ್ಪ್ರಿಂಗ್,” ಜಪಾನಿನ “ಥ್ರೋನ್ ಆಫ್ ಬ್ಲಡ್,” ಮತ್ತು ‘ಪರ್ಫೆಕ್ಟ್ ಡೇಸ್,’ ಸಿನಿಮಾಗಳು ಜೂನ್ 30ರಿಂದ ಜುಲೈ 05ರವರೆಗೆ ಪ್ರದರ್ಶನಗೊಳ್ಳಲಿವೆ.

BREAKING: ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವು ಪ್ರಕರಣ: 10 ದಿನಗಳಲ್ಲಿ ವರದಿ ನೀಡಲು ರಾಜ್ಯ ಸರ್ಕಾರ ಆದೇಶ

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ನೀಡಲು ಆದೇಶ: ಸಚಿವ ದಿನೇಶ್ ಗುಂಡೂರಾವ್

Share. Facebook Twitter LinkedIn WhatsApp Email

Related Posts

ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕಾಗಿ ಈ 9 ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

08/04/2026 8:00 AM2 Mins Read

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯಲ್ಲಿರುವ `AC’ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು.!

08/04/2026 7:40 AM1 Min Read

BIG NEWS : ವ್ಯಕ್ತಿಗೆ ಜಾತಿಯಿಂದ ನಿಂದನೆ ಮಾಡಿದರೆ `SC-ST’ ಕಾಯ್ದೆ ಅನ್ವಯ : ಹೈಕೋರ್ಟ್ ಮಹತ್ವದ ತೀರ್ಪು

08/04/2026 7:23 AM1 Min Read
Recent News

ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕಾಗಿ ಈ 9 ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

08/04/2026 8:00 AM

IPL 2026: ಜೈಸ್ವಾಲ್ ಬ್ಯಾಟಿಂಗ್ ಅಬ್ಬರಕ್ಕೆ ನಡುಗಿದ ಮುಂಬೈ: ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್ ರಾಯಲ್ಸ್!

08/04/2026 7:53 AM

ಬ್ಯಾಂಡ್ ಬಾಜಾ ಇದೆ, ಆದ್ರೆ ಅಡುಗೆಗೆ ಗ್ಯಾಸ್ ಇಲ್ಲ!: ಮದುವೆ ಸೀಸನ್‌ನಲ್ಲಿ ಎಲ್‌ಪಿಜಿ ಅಭಾವ; ಹೈರಾಣಾದ ಕ್ಯಾಟರರ್ಸ್, ಮೆನುವಿನಲ್ಲೂ ಬದಲಾವಣೆ!

08/04/2026 7:44 AM

BREAKING : ಅಮೆರಿಕ-ಇರಾನ್ ಕದನ ವಿರಾಮದ ಬೆನ್ನಲ್ಲೇ ಶೇ.19ರಷ್ಟು ಕುಸಿದ ಕಚ್ಚಾ ತೈಲ ದರ.!

08/04/2026 7:41 AM
State News
KARNATAKA

ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯ ಜೀವನಕ್ಕಾಗಿ ಈ 9 ದೈನಂದಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

By kannadanewsnow5708/04/2026 8:00 AM KARNATAKA 2 Mins Read

ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗಿದೆ. ನಮ್ಮ ದೈನಂದಿನ ಸಣ್ಣಪುಟ್ಟ ಅಭ್ಯಾಸಗಳು ನಮ್ಮ ಮನಸ್ಸಿನ ಶಾಂತಿ…

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯಲ್ಲಿರುವ `AC’ ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು.!

08/04/2026 7:40 AM

BIG NEWS : ವ್ಯಕ್ತಿಗೆ ಜಾತಿಯಿಂದ ನಿಂದನೆ ಮಾಡಿದರೆ `SC-ST’ ಕಾಯ್ದೆ ಅನ್ವಯ : ಹೈಕೋರ್ಟ್ ಮಹತ್ವದ ತೀರ್ಪು

08/04/2026 7:23 AM

ಮಹಿಳೆಯರೇ ಗಮನಿಸಿ : ಸುರಕ್ಷತೆಗಾಗಿ ತಪ್ಪದೇ ನಿಮ್ಮ `ಮೊಬೈಲ್’ ನಲ್ಲಿ ಈ ಆ್ಯಪ್ ಇಟ್ಟುಕೊಳ್ಳಿ.!  

08/04/2026 7:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.