Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Good News ; ದೇಶದ 200 ಮಿಲಿಯನ್ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್.!

22/03/2026 3:47 PM

ಸಾಧನೆಯ ಶಿಖರಕ್ಕೇರಿದ ಸಾಗರದ ‘ಯುವ ಉದ್ಯಮಿ’: ‘RBD ಮಹೇಶ್’ಗೆ ‘ನಾರಾಯಣ ರತ್ನ ಪ್ರಶಸ್ತಿ’ಯ ಗೌರವ

22/03/2026 3:36 PM

ಇತಿಹಾಸ ಸೃಷ್ಟಿಸಿದ ‘ಪ್ರಧಾನಿ ಮೋದಿ’, ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಾಜಕಾರಣಿ ಹೆಗ್ಗಳಿಕೆ!

22/03/2026 3:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಧನೆಯ ಶಿಖರಕ್ಕೇರಿದ ಸಾಗರದ ‘ಯುವ ಉದ್ಯಮಿ’: ‘RBD ಮಹೇಶ್’ಗೆ ‘ನಾರಾಯಣ ರತ್ನ ಪ್ರಶಸ್ತಿ’ಯ ಗೌರವ
KARNATAKA

ಸಾಧನೆಯ ಶಿಖರಕ್ಕೇರಿದ ಸಾಗರದ ‘ಯುವ ಉದ್ಯಮಿ’: ‘RBD ಮಹೇಶ್’ಗೆ ‘ನಾರಾಯಣ ರತ್ನ ಪ್ರಶಸ್ತಿ’ಯ ಗೌರವ

By kannadanewsnow0922/03/2026 3:36 PM

ಶಿವಮೊಗ್ಗ: ಸಾಗರದ ಮಲೆನಾಡಿನ ಮಡಿಲಲ್ಲಿ ಉದ್ಯಮ ಮತ್ತು ಸಮಾಜಸೇವೆಯನ್ನು ಸಮಾನಾಂತರವಾಗಿ ಮುನ್ನಡೆಸುತ್ತಿರುವ ಆರ್.ಬಿ.ಡಿ. ಗ್ರೂಪ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಮಹೇಶ್ ಡಿ. ಅವರಿಗೆ ಪ್ರತಿಷ್ಠಿತ ‘ನಾರಾಯಣ ರತ್ನ’ ಪ್ರಶಸ್ತಿ ಲಭಿಸಿದೆ. ಅವರ ನಿರಂತರ ಸಮಾಜಮುಖಿ ಕಾರ್ಯಗಳು ಮತ್ತು ಉದ್ಯೋಗ ಸೃಷ್ಟಿಯ ಬದ್ಧತೆಗೆ ಸಂದ ಗೌರವ ಇದಾಗಿದೆ.

ಉದ್ಯಮದಲ್ಲಿ ಹೊಸ ಮನ್ವಂತರ

ಕೇವಲ ಲಾಭದ ಉದ್ದೇಶವನ್ನಷ್ಟೇ ಹೊಂದಿರದೆ, ಉದ್ಯಮ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ತರುವಲ್ಲಿ ಆರ್ ಬಿ ಡಿ ಮಹೇಶ್ ಅವರು ಸದಾ ಮುಂದು. ಸಾಗರ, ಹೊಸನಗರ ಮತ್ತು ಬೆಂಗಳೂರು ಸೇರಿದಂತೆ ವಿವಿಧೆಡೆ ತಮ್ಮ ಉದ್ಯಮ ಜಾಲವನ್ನು ವಿಸ್ತರಿಸುವ ಮೂಲಕ ನೂರಾರು ಯುವಜನರಿಗೆ ಉದ್ಯೋಗದ ಆಸರೆಯಾಗಿದ್ದಾರೆ. ಇವರ ನೇತೃತ್ವದಲ್ಲಿ ಆರ್.ಬಿ.ಡಿ. ಗ್ರೂಪ್ ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗದೆ, ಆರ್ ಬಿ ಡಿ ಸೌಹಾರ್ದ ಸಹಕಾರ ಸಂಘದ ಮೂಲಕ ಸಹಕಾರಿ ಸಂಸ್ಥೆಯ ಮೂಲಕ ಆರ್ಥಿಕ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿ ಜನಸಾಮಾನ್ಯರ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸುತ್ತಿದೆ.

ದಾನಿ ಹಾಗೂ ಸಮಾಜಸೇವಕ

ಮಹೇಶ್ ಡಿ. ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲವೆಂದರೆ ಅವರ ಉದಾರತೆ. ಯಾವುದೇ ಸಾಮಾಜಿಕ ಕಾರ್ಯಕ್ರಮವಿರಲಿ ಅಥವಾ ಧಾರ್ಮಿಕ ಸಮಾರಂಭವಿರಲಿ, ಅದರ ಯಶಸ್ಸಿನ ಹಿಂದೆ ಇವರ ಆರ್ಥಿಕ ನೆರವು ಮತ್ತು ಪರೋಕ್ಷ ಸಹಕಾರ ಇದ್ದೇ ಇರುತ್ತದೆ. “ದುಡಿಯುವ ಕೈಗಳಿಗೆ ಕೆಲಸ” ನೀಡುವ ಮೂಲಕ ಅನೇಕ ಕುಟುಂಬಗಳ ಬದುಕಿಗೆ ಬೆಳಕಾಗಿದ್ದಾರೆ. ಆದರೇ ಎಲ್ಲಿಯೂ ತಾನು ಇದನ್ನು ಮಾಡಿದೆ, ಅದನ್ನು ಮಾಡಿದೆ ಎಂದು ಹೇಳಿಕೊಂಡ ಜಾಯಮಾನದವರಲ್ಲ ಎಲ್ಲರ ಮೆಚ್ಚಿನ ಕಣ್ಮಣಿ ಮಹೇಶ್ ಸೂರನಗದ್ದೆ.

ಪ್ರಶಸ್ತಿ ಪ್ರದಾನದ ಸಂಭ್ರಮ

ಗರ್ತಿಕೆರೆಯಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ವೇದಿಕೆಯಲ್ಲಿ ನಿಟ್ಟೂರು ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನ ಪೀಠದ ವತಿಯಿಂದ ಇವರಿಗೆ ನಾರಾಯಣ ರತ್ನ ಪ್ರಶಸ್ತಿಯ ಗೌರವವನ್ನು ಅರ್ಪಿಸಲಾಯಿತು. ಮಹೇಶ್ ಅವರ ಬಹುಮುಖ ಸಾಧನೆಯನ್ನು ಗುರುತಿಸಿ ನಾರಾಯಣ ರತ್ನ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥಾನ ಪೀಠವು ತಿಳಿಸಿದೆ.

ಯುವಜನರಿಗೆ ಉದ್ಯೋಗ ನೀಡುವ ಮೂಲಕ ಸಮಾಜದ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿರುವ ಮಹೇಶ್ ಅವರ ಕಾರ್ಯ ಶ್ಲಾಘನೀಯ. ಇಂತಹ ಸಾಧಕರಿಗೆ ಸಿಗುವ ಪ್ರಶಸ್ತಿಗಳು ಇತರರಿಗೂ ಪ್ರೇರಣೆಯಾಗಲಿ ಎಂಬುದಾಗಿ ನಿಟ್ಟೂರಿನ ಬ್ರಹ್ಮ ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಪೀಠ ತಿಳಿಸಿದೆ.

ಒಟ್ಟಾರೆಯಾಗಿ ಒಬ್ಬ ಯಶಸ್ವಿ ಉದ್ಯಮಿ ಹೇಗೆ ಸಮಾಜದ ಆಸ್ತಿಯಾಗಬಲ್ಲರು ಎಂಬುದಕ್ಕೆ ಮಹೇಶ್ ಡಿ. ಅವರು ಉತ್ತಮ ಉದಾಹರಣೆ. ಅವರ ಮುಂದಿನ ಎಲ್ಲಾ ಉದ್ಯಮ ಹಾಗೂ ಸಾಮಾಜಿಕ ಕಾರ್ಯಗಳು ಇಂತೆಯೇ ಯಶಸ್ವಿಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹೇಳಿದ್ದೇನು?

ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!

Share. Facebook Twitter LinkedIn WhatsApp Email

Related Posts

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹೇಳಿದ್ದೇನು?

22/03/2026 3:25 PM2 Mins Read

BIG NEWS : ಚೀನಾಕೆ ಹೋಗ್ತಿದ್ದ ಕಚ್ಚಾ ತೈಲ ಯೂಟರ್ನ್ : ಮಂಗಳೂರಿಗೆ ಬಂದ ಅಕ್ವಾ ಟೈಟಾನ್ ಹಡಗು!

22/03/2026 1:31 PM1 Min Read

BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

22/03/2026 1:12 PM1 Min Read
Recent News

Good News ; ದೇಶದ 200 ಮಿಲಿಯನ್ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್.!

22/03/2026 3:47 PM

ಸಾಧನೆಯ ಶಿಖರಕ್ಕೇರಿದ ಸಾಗರದ ‘ಯುವ ಉದ್ಯಮಿ’: ‘RBD ಮಹೇಶ್’ಗೆ ‘ನಾರಾಯಣ ರತ್ನ ಪ್ರಶಸ್ತಿ’ಯ ಗೌರವ

22/03/2026 3:36 PM

ಇತಿಹಾಸ ಸೃಷ್ಟಿಸಿದ ‘ಪ್ರಧಾನಿ ಮೋದಿ’, ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಾಜಕಾರಣಿ ಹೆಗ್ಗಳಿಕೆ!

22/03/2026 3:36 PM

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹೇಳಿದ್ದೇನು?

22/03/2026 3:25 PM
State News
KARNATAKA

ಸಾಧನೆಯ ಶಿಖರಕ್ಕೇರಿದ ಸಾಗರದ ‘ಯುವ ಉದ್ಯಮಿ’: ‘RBD ಮಹೇಶ್’ಗೆ ‘ನಾರಾಯಣ ರತ್ನ ಪ್ರಶಸ್ತಿ’ಯ ಗೌರವ

By kannadanewsnow0922/03/2026 3:36 PM KARNATAKA 2 Mins Read

ಶಿವಮೊಗ್ಗ: ಸಾಗರದ ಮಲೆನಾಡಿನ ಮಡಿಲಲ್ಲಿ ಉದ್ಯಮ ಮತ್ತು ಸಮಾಜಸೇವೆಯನ್ನು ಸಮಾನಾಂತರವಾಗಿ ಮುನ್ನಡೆಸುತ್ತಿರುವ ಆರ್.ಬಿ.ಡಿ. ಗ್ರೂಪ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಮಹೇಶ್ ಡಿ.…

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ಶಾಮನೂರು ಹೇಳಿದ್ದೇನು?

22/03/2026 3:25 PM

BIG NEWS : ಚೀನಾಕೆ ಹೋಗ್ತಿದ್ದ ಕಚ್ಚಾ ತೈಲ ಯೂಟರ್ನ್ : ಮಂಗಳೂರಿಗೆ ಬಂದ ಅಕ್ವಾ ಟೈಟಾನ್ ಹಡಗು!

22/03/2026 1:31 PM

BREAKING : ಬೆಂಗಳೂರಲ್ಲಿ ನಾಯಿಗೆ ಹಾಕುವ ಆಹಾರದ ಬಾಕ್ಸ್ ನಲ್ಲಿ ಡ್ರಗ್ಸ್ ಸಾಗಾಟ : 10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

22/03/2026 1:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.