ಶಿವಮೊಗ್ಗ: ಗೊಂದಲದ ನಡುವೆಯೂ ಸಾಗರದ ಶ್ರೀ ಮಾರಿಕಾಂಬಾ ದೇವಸ್ಥಾನ ನ್ಯಾಸ ಸಮಿತಿಯ ಸರ್ವಸದಸ್ಯರ ಸಭೆ ಯಶಸ್ವಿಯಾಗಿ ನಡೆಯಿತು. ಇಂದಿನ ಸಭೆಯಲ್ಲಿ ಶೀಘ್ರ ಚುನಾವಣೆಗೆ ನಡೆಸಲು ತೀರ್ಮಾನವನ್ನು ಸಭೆಯಲ್ಲಿ ಪಾಲ್ಗೊಂಡಿದ್ದಂತ ಸರ್ವ ಸದಸ್ಯರು ಕೈಗೊಂಡು, ಒಪ್ಪಿಗೆ ಸೂಚಿಸಿದರು.
ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರಗೆ ದೇಶವಿದೇಶಗಳಿಂದಲೂ ಭಕ್ತರು ಬರುತ್ತಾರೆ. ಇಂತಹ ದೇವಸ್ಥಾನದಲ್ಲಿ ಪಾರದರ್ಶಕ ಆಡಳಿತ ತರುವ ಜೊತೆಗೆ ದೇವಸ್ಥಾನದ ಮೂಲಕ ಊರಿನ ಅಭಿವೃದ್ದಿಗೆ ಸಹಕಾರ ನೀಡಬೇಕು ಜನ ಮೆಚ್ಚುವಂತೆ ಕೆಲಸ ಮಾಡಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಸಾಗರದ ಆರ್ಯ ಈಡಿಗರ ಸಭಾಭವನದಲ್ಲಿ ಶನಿವಾರ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಿತಿ ಸಮಾಜಮುಖಿ ಚಿಂತನೆ ಹೊಂದಿರಲಿ ಎಂದು ಸಲಹೆ ನೀಡಿದರು.
ಮಾರಿಕಾಂಬಾ ಸಮಿತಿ ಮೂಲಕ ಸುಸಜ್ಜಿತ ಕಲ್ಯಾಣ ಮಂಟಪ, ಶಾಲಾಕಾಲೇಜು ಇನ್ನಿತರೆ ನಿರ್ಮಿಸಿ, ಬಡವರಿಗೆ ಅನುಕೂಲ ಕಲ್ಪಿಸಿ. ಹಣಕೊಟ್ಟು ಉನ್ನತ ಶಿಕ್ಷಣ ಕೊಡಲು ಆಗದ ಬಡವರಿಗೆ ದೇವಿ ಹೆಸರಿನಲ್ಲಿ ಪ್ರಾರಂಭಿಸುವ ಶಾಲಾಕಾಲೇಜಿನ ಮೂಲಕ ಶೈಕ್ಷಣಿಕ ಭಾಗ್ಯ ಸಿಗುವಂತೆ ಆಗಬೇಕು. ಆಗ ದೇವಿಯು ನಿಮಗೆ ಒಳ್ಳೆಯದನ್ನು ಮಾಡುತ್ತಾಳೆ. ಕೆಲವೆ ದಿನಗಳಲ್ಲಿ ಚುನಾವಣೆ ಇರುವುದರಿಂದ ಉತ್ತಮ ಆಡಳಿತ ಮಂಡಳಿಯನ್ನು ಸದಸ್ಯರು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗೊಂದಲದ ಗೂಡಾದ ಮಾರಿಕಾಂಬಾ ದೇವಸ್ಥಾನದ ಸರ್ವಸದಸ್ಯರ ಸಭೆ
ಆರಂಭದಿಂದಲೂ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಸರ್ವಸದಸ್ಯರ ಸಭೆ ಗೊಂದಲದ ಗೂಡಾಗಿತ್ತು ಯಾರು ಏನು ಸಭೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕೇಳಿಸದ ಸ್ಥಿತಿ ಎದುರಾಗಿತ್ತು. ಕೆಲವರು ಲೆಕ್ಕ ಪತ್ರ ಸರಿ ಇಲ್ಲ ಎಂದು ವಾದಿಸಿದರೆ ಮತ್ತೆ ಕೆಲವರು ಅಧಿಕಾರಕ್ಕಾಗಿ ಪಟ್ಟು ಹಿಡಿದು ಸುಧೀರ್ಘ ಅಡಳಿತ ಮಾಡಿ ಮನ ಬಂದಂತೆ ಅಧಿಕಾರ ನಡೆಸಿದ್ದೀರಿ ಎಂದು ಆಕ್ರೋಶ ವ್ಯಕ್ತ ಪಡಿಸಿದ ಪ್ರಸಂಗವೂ ನಡೆಯಿತು ಹೆಚ್ ಆರ್ ಶ್ರೀಧರ್, ಎಂ ನಾಗರಾಜ್ , ವಿ ಶಂಕರ್, ಸರ್ವ ಸದಸ್ಯರ ಸಭೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಉಕಯುಕ್ತ ಸಲಹೆ ನೀಡಿದರು.
ಒಂದು ತಿಂಗಳೊಳಗೆ ಚುನಾವಣೆ ಮುಕ್ತಾಯಕ್ಕೆ ಸರ್ವ ಸದಸ್ಯರಿಂದ ಒಮ್ಮತದ ನಿರ್ಧಾರ
ಸಭೆಯ ಮುಖ್ಯ ಅಜೆಂಡಾ ಎಂದೆ ಗುರುತಿಸಿಕೊಂಡಿದ್ದ ಪ್ರತಿಷ್ಟಾನದ ಚುನಾವಣೆಯನ್ನು ಅತಿ ಶೀಘ್ರದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್ ಇಂದಿನ ಸರ್ವಸದಸ್ಯರ ಸಭೆಯಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಜಿಲ್ಲಾ ನೊಂದಾಣಾಧಿಕಾರಿಗಳಿಗೆ ಚುನಾವಣೆ ನಡೆಸಿಕೊಡುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಸೋಮವಾರ ಸಂಜೆಯೊಳಗೆ ಜಿಲ್ಲಾ ನೊಂದಾಣಾಧಿಕಾರಿಗಳನ್ನು ಭೇಟಿ ಮಾಡಿ ಚುನಾವಣೆ ನಡೆಸಿಕೊಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಇಂದಿನ ಸಭೆಯಲ್ಲಿ ಕೆ.ಎನ್.ನಾಗೇಂದ್ರ, ಲೋಕೇಶಕುಮಾರ್, ಸುಂದರ ಸಿಂಗ್, ಎಸ್.ವಿ.ಕೃಷ್ಣಮೂರ್ತಿ, ಪುರುಷೋತ್ತಮ, ಚಂದ್ರು, ಶಶಿಕಾಂತ್, ನಾರಾಯಣ, ಸಂತೋಷ್ ಶೇಟ್, ನಾಗಪ್ಪ, ಶಶಿಕಾಂತ್, ರವಿ ನಾಯ್ಡು ಸೇರಿದಂತೆ ಇನ್ನಿತರರು ಹಾಜರಿದ್ದರು.
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ನೀರಿನ ಬಾಟಲಿ ದರ ರೂ.1 ಇಳಿಕೆ | Railway Water Bottle Price Cut
BIG NEWS: ನವೆಂಬರ್ ನಿಂದ ರಾಜ್ಯಾಧ್ಯಂತ ‘ಮಾಹಿತಿ ಹಕ್ಕು ಅದಾಲತ್’: ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ