ಶಿವಮೊಗ್ಗ: ಫೆಬ್ರವರಿ.3ರಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ನಿನ್ನೆ ಶಾಸಕ ಗೋಪಾಲಕೃಷ್ಣ ಬೇಳೂರು ಸಾಗರದ ಪ್ರಮುಖ ರಸ್ತೆಗಳ ಡಾಂಬಾರೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಬೆನ್ನಲ್ಲೇ ಸಾಗರದ ಮಾರಿಕಾಂಬ ದೇವಸ್ಥಾನದ ಮುಂಭಾಗದ ರಸ್ತೆಯನ್ನು ಡಾಂಬಾರೀಕರಣ ಮಾಡಲಾಯಿತು.
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನಿನ್ನೆ ಮಾರಿಕಾಂಬ ದೇವಿ ಜಾತ್ರೆಯ ಹಿನ್ನಲೆಯಲ್ಲಿ ಸಾಗರ ನಗರದ ಪ್ರಮುಖ ರಸ್ತೆಗಳ ಡಾಂಬಾರೀಕರಣಕ್ಕೆ ಚಾಲನೆ ನೀಡಿದ್ದರು. ಇಂದು ಸಾಗರದ ಗಂಡನ ಮನೆ ಮುಂಭಾಗದಲ್ಲಿನ ರಸ್ತೆಯ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡೋ ಮೂಲಕ ಡಾಂಬಾರೀಕರಣ ಮಾಡಲಾಯಿತು.

ಸಾಗರದ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿ ರಸ್ತೆ ಡಾಂಬಾರೀಕರಣ ಕಾಮಗಾರಿಯನ್ನು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಭಟ್, ಸಮಿತಿಯ ನಾಗೇಂದ್ರ ಕುಮಟ, ಕೃಷ್ಣಮೂರ್ತಿ ಮತ್ತು ಗೌತಮ್, ಲಿಂಗರಾಜು ಸೇರಿದಂತೆ ಇತರರು ವೀಕ್ಷಣೆ ಮಾಡಿದರು.
ಹೀಗಿದೆ ಸಾಗರದ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ವೇಳಾಪಟ್ಟಿ
2026ರ ಜನವರಿ 27ರಂದು ಜಾತ್ರೆಗೆ ಅಂಕೆ ಹಾಕುವುದು. ಫೆ.3ರಂದು ತವರುಮನೆಯಲ್ಲಿ ಅಮ್ಮನ ಪ್ರತಿಷ್ಟಾಪನೆ, ರಾತ್ರಿ ಅಮ್ಮನವರ ಮೆರವಣಿಗೆ ನಂತರ ಗಂಡನ ಮನೆ ದೇವಸ್ಥಾನದಲ್ಲಿ ಅಮ್ಮನ ಪ್ರತಿಷ್ಟಾಪನೆ, ಫೆ. 11ರಂದು ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರ ಫೆ. 15ರಂದು ಅಂಕೆ ತೆಗೆಯುವುದು ಮತ್ತು ಕೋಣವನ್ನು ಬಿಡುವ ಶಾಸ್ತ್ರ ನಡೆಯಲಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು..









