ಶಿವಮೊಗ್ಗ: ಕಲ್ಲಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಕ್ರಮವಾಗಿರುವುದು ನಿಜ. ಒಳಗೊಳಗೆ ಸುರಂಗ ಕೊರೆದಂಗೆ ಕೊರೆದು ಕನ್ನ ಹಾಕಿದ್ದಾರೆ. ಆದರೂ ಸಮಸ್ಯೆ ಸರಿ ಪಡಿಸುವ ಕೆಲಸ ಮಾಡುತ್ತೇವೆ. ಸಾಲದ ಬಾಪ್ತನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ಈ ಸಂಬಂಧ ಸಹಕಾರ ಸಂಘದ ಅಧಿಕಾರಿಗಳು, ಕಲ್ಲಮನೆ ಸಹಕಾರ ಸಂಘದ ಹಗರಣದಿಂದ ಸಂಕಷ್ಟಕ್ಕೆ ಒಳಗಾದಂತ ಜನರೊಂದಿಗೆ, ಸಂಘದ ಸದಸ್ಯರೊಂದಿಗೆ ಮಹತ್ವದ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಂಘದ ಸದಸ್ಯರು, ಸೇರಿದ್ದಂತ ಸಾರ್ವಜನಿಕರ ಅಹವಾಲನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಆಲಿಸಿದರು.
ಈ ಬಳಿಕ ಮಾತನಾಡಿದಂತ ಅವರು, ನಾವು ಸಂಘದ ಸದಸ್ಯರ ಪರವಾಗಿದ್ದೇವೆ. ಅನ್ಯಾಕಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕು. ಈಗಾಗಲೇ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಷೇರುದಾರರು, ಬಡವರ ಹಣವನ್ನು ಮರಳಿ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಕಲ್ಲಮನೆ ಪ್ರಾಥಮಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿನ ಹಗರಣ ಇಂದು ನಿನ್ನೆಯದಲ್ಲ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ. ನನ್ನ ಗಮನಕ್ಕೆ ಕೆಲ ತಿಂಗಳ ಹಿಂದಷ್ಟೇ ಬಂದಿದೆ. ಗಮನಕ್ಕೆ ಬಂದ ಕೂಡಲೇ ಸಂಬಂಧಿಸಿದಂತವರೊಂದಿಗೆ ಚರ್ಚಿಸಲಾಗಿದೆ. ಸಮಸ್ಯೆ ಸರಿ ಪಡಿಸುವ ನಿಟ್ಟಿನಲ್ಲಿ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ನಾನು ಸಹಕಾರಿ ಸಂಘದ ಚುನಾವಣೆಯಲ್ಲಿ ಗೆದ್ದು ನಿರ್ದೇಶಕನಾದ ನಂತ್ರ, ಕೆಲವರು ಕಲ್ಲಮನೆ ಸಂಘದ ಸಮಸ್ಯೆಯಲ್ಲಿ ನನ್ನ ಪಾತ್ರವಿರುವ ಬಗ್ಗೆಯೂ ಮಾತನಾಡಿದ್ದಾರೆ. ನನಗೂ ಆ ಹಗರಣಕ್ಕೂ ಯಾವುದಾದರೂ ಸಂಬಂಧ ಇದ್ಯಾ? ಸುಖಾ ಸುಮ್ಮನೇ ಆರೋಪ ಮಾಡೋದು ಸರಿಯಲ್ಲ. ನನ್ನ ಪಾತ್ರ ಇದರಲ್ಲಿ ಏಳ್ಳಷ್ಟೂ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಸಂತ್ರಸ್ತರಾದಂತ ಜನರ ಕಷ್ಟ ಆಲಿಸಲು 64ರಡಿ ಅರ್ಜಿ ಪಡೆದು, ವಿಚಾರಣೆ ನಡೆಸಲು ತಿಳಿಸಲಾಗಿದೆ. ಅದೇ ಅರ್ಜಿಯನ್ನು ಪೊಲೀಸ್ ಇಲಾಖೆಗೂ ಸಲ್ಲಿಸುವಂತೆ ಜನರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ಮಾಡಿದರು.
ಸಹಕಾರಿ ಸಂಘದ ಷೇರುದಾರರು ಸೆಲ್ಪ್ ಚೆಕ್ ಬಳಕೆ ಮಾಡಬಾರದು. ಬ್ಯಾಂಕ್ ನಿಂದ ನೀಡಿರುವಂತ ಎಟಿಎಂ ಬಳಸಿ ಹಣ ಹಿಂಪಡೆಯುವಂತ ಆಗಬೇಕು. ಇನ್ನೂ ಹಳೆಕಾಲದ ಸೆಲ್ಪ್ ಚೆಕ್ ಮೂಲಕ ಹಣ ಪಡೆಯುವುದನ್ನು ತಪ್ಪಿಸಬೇಕು ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿಆರ್ ಜಯಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಹಾಪ್ ಕಾಮ್ಸ್ ಅಧ್ಯಕ್ಷ ಹಿಂದೂಧರ ಗೌಡ, ಸಹಕಾರ ನಿಬಂಧ ನಾಗಭೂಷಣ್, ಆಡಿಟ್ ಡಿಡಿ ತೇಜೋಮೂರ್ತಿ, ಡಿವೈಎಸ್ಪಿ ಗೋಪಾಲಕೃಷ್ಣ ತಿ ನಾಯಕ್, ಸಾಗರ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ, ಸಾಗರ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
ಮದುವೆ ಆದಾಗ ತೆಳ್ಳಗಿದ್ದೆ, ಈಗ ಡುಮ್ಮಿ ಆಗಿದ್ದೀಯ ಅಂತ ಪತ್ನಿಗೆ ಖಾರದಪುಡಿ ಎರಚಿ ಪತಿ ಹಲ್ಲೆ
ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಪುರುಷರಿಗಿಂತ ಮಹಿಳಾ ಹೂಡಿಕೆದಾರರು ಮೇಲುಗೈ ಸಾಧಿಸಿದ್ದಾರೆ: ವರದಿ | Mutual fund