ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ವಲಯದಲ್ಲಿನ ಮಲಂದೂರು ಮೀಸಲು ಅರಣ್ಯವನ್ನು ಒತ್ತುವರಿ ಮಾಡಿದ್ದಂತ 6 ಎಕರೆ 24 ಗುಂಟೆ ಜಮೀನನ್ನು ಅರಣ್ಯಾಧಿಕಾರಿಗಳು ತೆರವುಗೊಳಿಸಿದ್ದರು. ಆದರೇ ಈ ತೆರವು ಕಾನೂನಿನಡಿ ಮಾಡಿಲ್ಲ. ಕಾನೂನು ಮೀರಿ ಮಾಡಲಾಗಿದೆ ಎಂಬುದಾಗಿ ಹಲವರ ಆರೋಪವಾಗಿತ್ತು. ಇದು ಸುಳ್ಳು ಎಂಬುದನ್ನು ಅರಣ್ಯ ಇಲಾಖೆಯ 64ಎ ಆದೇಶವೇ ಹೇಳುತ್ತಿದೆ. ಕರ್ನಾಟಕ ಅರಣ್ಯ ಅಧಿನಿಯಮ 1963ರ ಸೆಕ್ಷನ್ 64(ಎ)ರ ಅಡಿಯಲ್ಲೇ ಕಾನೂನಿನಂತೆ ತೆರವು ಮಾಡಲಾಗಿದೆ. ಆ 64ಎ ಪ್ರೊಸಿಡಿಂಗ್ಸ್ ಆದೇಶದ ಸಂಪೂರ್ಣ ವಿವರ ಮುಂದಿದೆ ಓದಿ.
ಈ ಕುರಿತಂತೆ ಸಾಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ.ಕೆ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂನ ಮಲಂದೂರು ಗ್ರಾಮದ ಸರ್ವೆ ನಂಬರ್ 157ರ ಮಲಂದೂರು ರಾಜ್ಯ ಅರಣ್ಯ ಪ್ರದೇಶದಲ್ಲಿ ಆರ್.ಎಂ ಷಣ್ಮುಖ ಬಿನ್ ಮಂಜಪ್ಪಗೌಡ ಎಂಬುವರು 6 ಎಕರೆ 24 ಗುಂಟೆ ಜಮೀನು ಒತ್ತುವರಿ ಮಾಡಿದ್ದರ ಬಗ್ಗೆ ದೂರು ಬಂದಿತ್ತು. ಈ ದೂರು ಆಧರಿಸಿ ಅರಣ್ಯಾಧಿಕಾರಿಗಳು ತನಿಖೆ ನಡೆಸಿದಂತ ಸಂದರ್ಭದಲ್ಲಿ ಖಚಿತವೂ ಆಗಿತ್ತು. ಹೀಗಾಗಿ ಕರ್ನಾಟಕ ಅರಣ್ಯ ಅಧಿನಿಯಮ 1963ರ ಸೆಕ್ಷನ್ 64(ಎ)ರ ಅಡಿಯಲ್ಲಿ ಅಧಿಕೃತ ಅಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ಉಪ ವಿಭಾಗ, ಸಾಗರ ಇವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ ಎಂದು ಹೇಳಿದ್ದಾರೆ.
ಆದೇಶದ ಪ್ರಸ್ತಾವನೆಯಲ್ಲಿ ಹೀಗಿದೆ…
1) ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ ಸಾಗರ ವಿಭಾಗ ಇವರು ಈ ಕಛೇರಿಗೆ ವರದಿ ಸಲ್ಲಿಸಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ, 50 ವರ್ಷ, ತಿಪ್ಪಿನಜಡ್ಡು ವಾಸಿ, ಮಲಂದೂರು ಗ್ರಾಮ, ಸಾಗರ ತಾಲ್ಲೂಕು ಅವರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಆನಂದಪುರಂ ವಲಯದ ಆನಂದಪುರ ಶಾಖೆಯ, ಮಲಂದೂರು ಗಸ್ತಿನ ಮಲಂದೂರು ಗ್ರಾಮದ ಸ.ನಂ: 157 ರ “ಮಲಂದೂರು ರಾಜ್ಯ ಅರಣ್ಯ” ಪ್ರದೇಶದಲ್ಲಿ ಅರಣ್ಯ ಒತ್ತುವರಿ ಮಾಡಿರುತ್ತಾರೆಂದು ತಿಳಿಸಿ ಸದರಿಯವರು ಒತ್ತುವರಿ ಮಾಡಿಕೊಂಡು ಅನುಭವದಲ್ಲಿರುವ ಒಟ್ಟು ಅಂದಾಜು 6 ಎಕರೆ 24 ಗುಂಟೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಕರ್ನಾಟಕ ಅರಣ್ಯ ಕಾಯಿದೆ 1963ರ ಕಲಂ 64ಎ ರಡಿ ವಿಚಾರಣಾ ಪ್ರಕ್ರಿಯೆ ನಡೆಸಿ ಒತ್ತುವರಿ ತೆರವಿಗೆ ಆದೇಶ ಹೊರಡಿಸಬೇಕೆಂದು ಕೋರಿಕೊಂಡು ವರದಿ ಸಲ್ಲಿಸಿರುತ್ತಾರೆ ಎಂದಿದ್ದಾರೆ.
2) ಆ ಮೇರೆಗೆ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ, 50 ವರ್ಷ, ತಿಪ್ಪಿನಜಡ್ಡು ವಾಸಿ, ಮಲಂದೂರು ಗ್ರಾಮ, ಸಾಗರ ತಾಲ್ಲೂಕು ಇವರಿಗೆ ಈ ಕಛೇರಿಯ ನೋಟಿಸ್ ದಿನಾಂಕ:08.10.2024, 17.10.2024 ಮತ್ತು 10.07.2025ರ ಮೂಲಕ ಒಟ್ಟು 3 ಬಾರಿ ನೋಟಿಸ್ ನೀಡಿ ಪ್ರಸ್ತಾಪಿತ ಒತ್ತುವರಿ ಜಮೀನಿಗೆ ಸಂಬಂಧಿಸಿದಂತೆ ಸದರಿಯವರ ಅಹವಾಲು ಸಲ್ಲಿಸಲು ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಸದರಿಯವರು ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತಾಪಿತ ಜಮೀನು ಅರಣ್ಯ ಪ್ರದೇಶವಲ್ಲವೆನ್ನುವ ಬಗ್ಗೆ ಅಥವಾ ಪ್ರಸ್ತಾಪಿತ ಜಮೀನಿನ ಮೇಲೆ ಸದರಿಯವರಿಗೆ ಹಕ್ಕಿದೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಪೂರಕ ದಾಖಲೆಗಳನ್ನು ವಿಚಾರಣಾ ಸಮಯದಲ್ಲಿ ಹಾಜರುಪಡಿಸಿರುವುದಿಲ್ಲ ಮತ್ತು ವಿಚಾರಣೆಯನ್ನು ಮುಂದೂಡಲು ಪ್ರತಿ ಬಾರಿ ಅಹವಾಲು ಸಲ್ಲಿಸಲು ಸಮಯಾವಕಾಶ ಕೋರಿದ್ದು, 3ನೇ ಬಾರಿಯೂ ಸಹ ಹೆಚ್ಚು ಸಮಯವಾಕಾಶ ಬೇಕೆಂದು ಸಕಾರಣಗಳಿಲ್ಲದೆ ಕೋರಿಕೊಂಡಿರುತ್ತಾರೆ ಎಂದಿದ್ದಾರೆ.
3) ಪ್ರಸ್ತಾಪಿತ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ಸಂದರ್ಭದಲ್ಲಿ ಹಾಜರಾದ ವಲಯ ಅರಣ್ಯಾಧಿಕಾರಿ ಆನಂದಪುರಂ ವಲಯ, ಚೋರಡಿ ಅವರು ಈ ಕೆಳಕಂಡ ದಾಖಲೆಗಳನ್ನು ಒದಗಿಸಿರುತ್ತಾರೆ ಎಂದು ತಿಳಿಸಿದ್ದಾರೆ.
- ಡಿ1 -ಮಲಂದೂರು ರಾಜ್ಯ ಅರಣ್ಯದ ಅಧಿಸೂಚನೆ ಪತ್ರ
- ಡಿ2- ಅಧಿಸೂಚನೆಯ ಪ್ರಕಾರ ಗ್ರಾಮ ನಕಾಶೆಯಲ್ಲಿ ಗಡಿ ವಿವರಣೆಯನ್ನು ಗುರುತಿಸಿದ ಅರಣ್ಯದ ನಕಾಶೆ
- ಡಿ3- ಗಡಿ ವಿವರಣೆ ಇರುವ ಅರಣ್ಯದ ನಕಾಶೆಯೊಳಗಡೆ ಒತ್ತುವರಿ ಪ್ರದೇಶ ಗುರುತು ಮಾಡಿದ 4 ಟು 1 ಮೈಲ್ ರಾಜ್ಯ ಅರಣ್ಯ ನಕಾಶೆ.
- ಡಿ4 – ಒತ್ತುವರಿಯನ್ನು ಗುರುತು ಮಾಡಿದ ಕೆ ಎಸ್ ಆರ್ ಎಸ್ ಎ ಸಿ ನಕಾಶೆ
- ಡಿ5 – ಆರ್.ಎಂ ಷಣ್ಮುಖ ಇವರ ಮೇಲೆ ತಹಶೀಲ್ದಾರ್, ಸಾಗರ ತಾಲ್ಲೂಕು, ಸಾಗರ ಅವರು ದಾಖಲು ಮಾಡಿದ ಎಫ್ಐಆರ್ ಪ್ರತಿ
- ಡಿ6- ಜಿಲ್ಲಾಧಿಕಾರಿಗಳು, ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ ಅವರು ಉಪ ವಿಭಾಗಾಧಿಕಾರಿಗಳು, ಸಾಗರ ಉಪ ವಿಭಾಗ, ಸಾಗರ ಅವರಿಗೆ ಬರೆದ ಪತ್ರದಲ್ಲಿ ಆರ್ ಎಂ ಷಣ್ಮುಖ ಬಿನ್ ಮಂಜಪ್ಪಗೌಡ ಅವರು ಕಂದಾಯ ದಾಖಲೆಯನ್ನು ತಿದ್ದುಪಡಿ ಮಾಡಿಕೊಂಡು ಮಲ್ಲಂದೂರು ಸರ್ವೆ ನಂಬರ್ 157ರಲ್ಲಿ ಮಂಜೂರು ಮಾಡಿಸಿಕೊಂಡಿರುವ 69 ಎಕರೆ ಅರಣ್ಯ ಪ್ರದೇಶವನ್ನು ರದ್ದು ಮಾಡಿ ಆರ್ ಟಿ ಸಿಯನ್ನು ಮೊದಲಿನಂತೆ ಯಥಾಸ್ಥಿತಿಗೆ ತರುವ ಬಗ್ಗೆ ಆದೇಶ ಪ್ರತಿ
- ಡಿ7- ಜಿಲ್ಲಾಧಿಕಾರಿಗಳ ಆದೇಶದ ನಂತ್ರ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ ಪ್ರತಿ
- ಡಿ8- ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರ ವರದಿ
- ಡಿ9- ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪರೀಕ್ಷಾರ್ಥ ಹಾಗೂ ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರ ಹೇಳಿಕೆ.
4. ಅರಣ್ಯಾಧಿಕಾರಿಗಳು, ಆನಂದಪುರಂ ವಲಯರವರು ಸಲ್ಲಿಸಿರುವ ದಾಖಲೆಗಳು ಹಾಗೂ ಹೇಳಿಕೆಗಳಲ್ಲಿ ಈ ಮುಂದಿನಂತೆ ಪ್ರಸ್ತಾಪಿಸಿರುತ್ತಾರೆ. ಸರ್ಕಾರಿ ಅಧಿಸೂಚನೆ ಸಂಖ್ಯೆ: GL-23538-R373 Date: 19/06/1895 ರಲ್ಲಿ ಮಲಂದೂರು ಗ್ರಾಮದ ಸರ್ವೆ ನಂ: 157ರ 282-03 ಎಕರೆ/ಗುಂಟೆ ಪ್ರದೇಶವನ್ನು ಮಲಂದೂರು ರಾಜ್ಯ ಅರಣ್ಯ ವೆಂದು ಅಧಿಸೂಚಿಸಲಾಗಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಆರಣ್ಯದ ಗಡಿರೇಖೆಯ ವಿವರಣೆಯನ್ನು ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಅಧಿಸೂಚನೆಯಲ್ಲಿ ನೀಡಿರುವ ಅರಣ್ಯ ಗಡಿ ವಿವರಣೆಯಂತೆ ಅರಣ್ಯ ಗಡಿಯನ್ನು ಗುರುತಿಸಿರುವ ನಕಾಶೆಗಳನ್ನು ಸಿದ್ಧಪಡಿಸಿ ಸಲ್ಲಿಸಲಾಗಿರುತ್ತದೆ. ಅಧಿಸೂಚನೆಯಲ್ಲಿನ ಅರಣ್ಯ ಗಡಿ ವಿವರಣೆಯಂತೆ ಅರಣ್ಯ ಗಡಿಯನ್ನು ಗುರುತಿಸಿರುವ ನಕಾಶೆಗಳಲ್ಲಿ ಅರಣ್ಯ ಗಡಿಯೊಳಗಿನ ಅರಣ್ಯ ಪ್ರದೇಶದಲ್ಲಿ ಎಮ್. ಷಣ್ಮುಖ, ಬಿನ್ ಮಂಜಪ್ಪಗೌಡ, ಒತ್ತುವರಿ ಮಾಡಿಕೊಂಡು ಅನುಭೋಗದಲ್ಲಿರುವ ಸುಮಾರು 6-24 ಎಕರೆ ಪ್ರದೇಶವನ್ನು ಗುರುತಿಸಿ ನಕಾಶೆ ಸಿದ್ಧಪಡಿಸಿ ಸಲ್ಲಿಸಲಾಗಿರುತ್ತದೆ. ಹಾಗೆಯೇ, ಮಲಂದೂರು ಗ್ರಾಮದ ಸ.ನಂ 157ರಲ್ಲಿ 282-03 ಎಕರೆ/ಗುಂಟೆ ಎಕರೆ ಅರಣ್ಯವೆಂದು ಅಧಿಸೂಚನೆಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರು ಮಲಂದೂರು ಗ್ರಾಮದ ಸ.ನಂ 157ಕ್ಕೆ ಸಂಬಂಧಿಸಿದ ಕಂದಾಯ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಂಡು (Forgery) ಜಮೀನು ಮಂಜೂರು ಮಾಡಿಕೊಂಡಿರುವ ಕುರಿತಾಗಿ ತಹಶೀಲ್ದಾರ್ ಸಾಗರ ತಾಲ್ಲೂಕು ಅವರು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದು, ಕ್ರಿಮಿನಲ್ ದೂರಿಗೆ ಸಂಬಂಧಿಸಿದಂತೆ ದಾಖಲಾದ ಎಫ್.ಐ.ಆರ್ ಪ್ರತಿಯನ್ನು ಹಾಜರು ಪಡಿಸಲಾಗಿರುತ್ತದೆ. ಹಾಗೆಯೇ, ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ರವರು ಉಪ ವಿಭಾಗಾಧಿಕಾರಿಗಳು, ಸಾಗರ ಉಪ ವಿಭಾಗ, ಸಾಗರ ರವರಿಗೆ ಬರೆದ ಪತ್ರದಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರು ಕಂದಾಯ ದಾಖಲೆಯನ್ನು ತಿದ್ದುಪಡಿ ಮಾಡಿಕೊಂಡು ಮಲಂದೂರು ಸ.ನಂ 157ರಲ್ಲಿ ಮಂಜೂರು ಮಾಡಿಸಿಕೊಂಡಿರುವ 69-00 ಎಕರೆ ಅರಣ್ಯ ಪ್ರದೇಶವನ್ನು ರದ್ದು ಮಾಡಿ ಆರ್.ಟಿ.ಸಿ.ಯನ್ನು ಮೊದಲಿನಂತೆ ಯಥಾಸ್ಥಿತಿಗೆ ತರುವ ಬಗ್ಗೆ ಆದೇಶದ ಪ್ರತಿಯನ್ನು ಹಾಜರುಪಡಿಸಲಾಗಿರುತ್ತದೆ. ಜಿಲ್ಲಾಧಿಕಾರಿಗಳ ಆದೇಶದ ನಂತರ ದಿನ ಪತ್ರಿಕೆಯಲ್ಲಿ ಪ್ರಕಟಣೆಗೊಂಡ ಪತ್ರಿಕಾ ಪ್ರಕಟಣೆಗಳ ತುಣಕುಗಳ ಪ್ರತಿಯನ್ನು ಹಾಜರುಪಡಿಸಲಾಗಿರುತ್ತದೆ ಎಂದಿದ್ದಾರೆ.
5) ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯರವರು ಸಲ್ಲಿಸಿದ ವರದಿ, ದಾಖಲೆ ಹಾಗೂ ಹೇಳಿಕೆಗಳನ್ನು ಮತ್ತು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ರವರು, ವಿಚಾರಣಾ ಸಂದರ್ಭದಲ್ಲಿ ನುಡಿದ ವಿಷಯಗಳನ್ನು ಪರಿಶೀಲಿಸಲಾಯಿತು. ವರದಿಗಳು, ದಾಖಲೆಗಳು ಹಾಗೂ ಹೇಳಿಕೆಗಳನ್ನು ಪರಿಶೀಲಿಸಿದ ನಂತರ, ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಯಿತು ಎಂದು ಹೇಳಿದ್ದಾರೆ.
1. ಪ್ರಸ್ತಾಪಿತ ಮಲಂದೂರು ಸರ್ವೆ ನಂ. 157ರಲ್ಲಿ 6-24 ಎಕರೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸಲು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರಿಗೆ ಸಾಕಷ್ಟು ಕಾಲವಕಾಶ ನೀಡಲಾಗಿದೆಯೇ?
2. ಪ್ರಶ್ನಿತ ಮಲಂದೂರು ಸರ್ವೆ ನಂ. 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ಅನುಭವದಲ್ಲಿರುವ 6-24 ಎಕರೆ ಜಮೀನು ಅರಣ್ಯ ಪ್ರದೇಶವೇ?
3. ಪ್ರಶ್ನಿತ ಮಲಂದೂರು ಸರ್ವೆ ನಂ. 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ಅನುಭವದಲ್ಲಿರುವ 6-24 ಎಕರೆ ಪ್ರದೇಶವು ಅರಣ್ಯವಲ್ಲ ಎನ್ನುವದನ್ನು ಸಾಭೀತುಪಡಿಸಲು ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ರವರು ದಾಖಲೆಗಳನ್ನು ಒದಗಿಸಿ ಸಾಭೀತು ಪಡಿಸಿದ್ದಾರೆಯೇ?
4. ಈ ಪ್ರಕರಣದಲ್ಲಿ ಹೊರಡಿಸಬೇಕಾದ ಆದೇಶವೇನು?
ಮೇಲ್ಕಂಡ ಪ್ರಶ್ನೆಗಳಿಗೆ ಉತ್ತರಗಳು ಈ ಕೆಳಗಿನಂತಿರುತ್ತವೆ.
1. ಪ್ರಶ್ನೆ 1ಕ್ಕೆ ಉತ್ತರ : ಸಕಾರಾತ್ಮಕ.
2. ಪ್ರಶ್ನೆ 2ಕ್ಕೆ ಉತ್ತರ : ಸಕಾರಾತ್ಮಕ,
3. ಪ್ರಶ್ನೆ 3ಕ್ಕೆ ಉತ್ತರ : ನಕಾರಾತ್ಮಕ.
4. ಪ್ರಶ್ನೆ 4ಕ್ಕೆ ಉತ್ತರ : ಈ ಕೆಳಗೆ ವಿವರಿಸಿರುವಂತೆ.
6) ಪ್ರಸ್ತಾಪಿತ ಮಲಂದೂರು ಸರ್ವೆ ನಂ. 157ರಲ್ಲಿ 6-24 ಎಕರೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸಲು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರಿಗೆ ಸಾಕಷ್ಟು ಕಾಲವಕಾಶ ನೀಡಲಾಗಿದೆಯೇ?
ಉತ್ತರ : ಸಕಾರಾತ್ಮಕ.
ವಿವರಣೆ : ಆರ್ ಎಮ್, ಷಣ್ಮುಖ ಬಿನ್ ಮಂಜಪ್ಪಗೌಡ, 50 ವರ್ಷ, ತಿಪ್ಪಿನಜಡ್ಡು ವಾಸಿ, ಮಲಂದೂರು ಗ್ರಾಮ, ಸಾಗರ ತಾಲ್ಲೂಕು ಇವರಿಗೆ ಈ ಕಛೇರಿಯ ನೋಟಿಸ್ ದಿನಾಂಕ:08.10.2024, 17.10.2024 ಮತ್ತು 10.07.2025ರ ಮೂಲಕ ಒಟ್ಟು 3 ಬಾರಿ ನೋಟಿಸ್ ನೀಡಿ ಪ್ರಸ್ತಾಪಿತ ಒತ್ತುವರಿ ಜಮೀನಿಗೆ ಸಂಬಂಧಿಸಿದಂತೆ ಸದರಿಯವರ ಅಹವಾಲು ಸಲ್ಲಿಸಲು ತಿಳಿಸಲಾಗಿರುತ್ತದೆ.
ಸದರಿಯವರು ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತಾಪಿತ ಜಮೀನು ಅರಣ್ಯ ಪ್ರದೇಶವಲ್ಲವೆನ್ನುವ ಬಗ್ಗೆ ಅಥವಾ ಪ್ರಸ್ತಾಪಿತ ಜಮೀನಿನ ಮೇಲೆ ಸದರಿಯವರಿಗೆ ಹಕ್ಕಿದೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಪೂರಕ ದಾಖಲೆಗಳನ್ನು ವಿಚಾರಣಾ ಸಮಯದಲ್ಲಿ ಹಾಜರುಪಡಿಸಿರುವುದಿಲ್ಲ ಮತ್ತು ವಿಚಾರಣೆಯನ್ನು ಮುಂದೂಡಲು ಪ್ರತಿ ಬಾರಿ ಅಹವಾಲು ಸಲ್ಲಿಸಲು ಸಮಯಾವಕಾಶ ಕೋರಿದ್ದು, 3ನೇ ಬಾರಿಯೂ ಸಹ ಹೆಚ್ಚು ಸಮಯವಾಕಾಶ ಬೇಕೆಂದು ಸಕಾರಣಗಳಿಲ್ಲದೆ ಕೋರಿಕೊಂಡಿರುತ್ತಾರೆ. ಆದ್ದರಿಂದ, ಪ್ರಸ್ತಾಪಿತ ಮಲಂದೂರು ಸರ್ವೆ ನಂ. 157ರಲ್ಲಿ 6-24 ಎಕರೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸಲು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರಿಗೆ ಸಾಕಷ್ಟು ಕಾಲವಕಾಶ ನೀಡಲಾಗಿದೆಯೇ ಎನ್ನುವ ಪ್ರಶ್ನೆಗೆ ನನ್ನ ಉತ್ತರ ಹೌದು ಎಂದಾಗಿರುತ್ತದೆ.
7) ಪ್ರಶ್ನಿತ ಮಲಂದೂರು ಸರ್ವ ನಂ. 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ಅನುಭವದಲ್ಲಿರುವ 6-24 ಎಕರೆ ಜಮೀನು ಅರಣ್ಯ ಪ್ರದೇಶವೇ?
ಉತ್ತರ : ಸಕಾರಾತ್ಮಕ
ವಿವರಣೆ: ಸರ್ಕಾರಿ ಅಧಿಸೂಚನೆ ಸಂಖ್ಯೆ: GL-23538-R373 Date: 19/06/1895 ರಲ್ಲಿ ಮಲಂದೂರು ಗ್ರಾಮದ ಸರ್ವೆ ನಂ: 157ರ 282-03 ಎಕರೆ/ಗುಂಟೆ ಪ್ರದೇಶವನ್ನು ಮಲಂದೂರು ರಾಜ್ಯ ಅರಣ್ಯ ಎಂದು ಅಧಿಸೂಚಿಸಲಾಗಿರುತ್ತದೆ. ಸದರಿ ಅಧಿಸೂಚನೆಯಲ್ಲಿ ಅರಣ್ಯದ ಗಡಿರೇಖೆಯ ವಿವರಣೆಯನ್ನು ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಸದರಿ ಅಧಿಸೂಚನೆಯ ಪ್ರತಿಯನ್ನು D-1 ಗುರುತಿಸಲಾಗಿದೆ. ಅಧಿಸೂಚನೆಯಲ್ಲಿ ನೀಡಿರುವ ಅರಣ್ಯ ಗಡಿ ವಿವರಣೆಯಂತೆ ಅರಣ್ಯ ಗಡಿಯನ್ನು ನಕಾಶೆಯಲ್ಲಿ ಗುರುತಿಸಲಾಗಿರುತ್ತದೆ. ಸದರಿ ನಕಾಶೆಯನ್ನು D-2 ಎಂದು ಗುರುತಿಸಲಾಗಿದೆ. ಅಧಿಸೂಚನೆಯಲ್ಲಿನ ಅರಣ್ಯ ಗಡಿ ವಿವರಣೆಯಂತೆ ಅರಣ್ಯ ಗಡಿಯನ್ನು ಗುರುತಿಸಿರುವ ನಕಾಶೆಯಲ್ಲಿ ಅರಣ್ಯ ಗಡಿಯೊಳಗಿನ ಅರಣ್ಯ ಪ್ರದೇಶದಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಒತ್ತುವರಿ ಮಾಡಿಕೊಂಡು ಅನುಭೋಗದಲ್ಲಿರುವ 6-24 ಎಕರೆ ಪ್ರದೇಶವನ್ನು ಗುರುತಿಸಲಾಗಿರುತ್ತದೆ.
ಸದರಿ ಒತ್ತುವರಿ ಪ್ರದೇಶದ ನಕಾಶೆಯನ್ನು D-3 ಎಂದು ಗುರುತಿಸಲಾಗಿರುತ್ತದೆ. ಮಲಂದೂರು ಗ್ರಾಮದ ಸ.ನಂ 157ರಲ್ಲಿ 282-03 ಎಕರೆ/ಗುಂಟೆ ಎಕರೆ ಅರಣ್ಯವೆಂದು ಅಧಿಸೂಚನೆಯಲ್ಲಿರುತ್ತದೆ. ಹಾಗಾಗಿ, ಮಲಂದೂರು ಗ್ರಾಮದ ಸ.ನಂ 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ಅನುಭೋಗದಲ್ಲಿರುವ ಪ್ರಸ್ತಾಪಿತ 6-24 ಎಕರೆ ಪ್ರದೇಶ ಅರಣ್ಯವೆಂದು ಸಾಭೀತಾಗಿರುತ್ತದೆ.
8) ಪ್ರಶ್ಚಿತ ಮಲಂದೂರು ಸರ್ವ ನಂ. 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ಅನುಭವದಲ್ಲಿರುವ 6-24 ಎಕರೆ ಪ್ರದೇಶವು ಅರಣ್ಯವಲ್ಲ ಎನ್ನುವದನ್ನು ಸಾಭೀತುಪಡಿಸಲು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ರವರು ದಾಖಲೆಗಳನ್ನು ಒದಗಿಸಿ ಸಾಭೀತು ಪಡಿಸಿದ್ದಾರೆಯೇ?
ಉತ್ತರ : ನಕಾರಾತ್ಮಕ
ವಿವರಣೆ: ವಲಯ ಅರಣ್ಯಾಧಿಕಾರಿಗಳು ಸಲ್ಲಿಸಿರುವ ದಾಖಲೆಗಳಿಂದ ಮಲಂದೂರು ಗ್ರಾಮದ ಸ.ನಂ 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ಅನುಭೋಗದಲ್ಲಿರುವ 6-24 ಎಕರೆ ಪ್ರದೇಶ ಅರಣ್ಯ ಪ್ರದೇಶವೆಂದು ಸಾಭೀತಾಗಿರುತ್ತದೆ. ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ, 50 ವರ್ಷ, ತಿಪ್ಪಿನಜಡ್ಡು ವಾಸಿ, ಮಲಂದೂರು ಗ್ರಾಮ, ಸಾಗರ ತಾಲ್ಲೂಕು ಇವರಿಗೆ ಈ ಕಛೇರಿಯ ನೋಟಿಸ್ ದಿನಾಂಕ:08.10.2024, 17.10.2024 ಮತ್ತು 10.07.2025ರ ಮೂಲಕ ಒಟ್ಟು 3 ಬಾರಿ ನೋಟಿಸ್ ನೀಡಿ ಪ್ರಸ್ತಾಪಿತ ಒತ್ತುವರಿ ಜಮೀನಿಗೆ ಸಂಬಂಧಿಸಿದಂತೆ ಸದರಿಯವರ ಅಹವಾಲು ಸಲ್ಲಿಸಲು ತಿಳಿಸಲಾಗಿರುತ್ತದೆ. ಸದರಿಯವರು ವಿಚಾರಣೆಗೆ ಖುದ್ದಾಗಿ ದಿನಾಂಕ:14.10.2024, 21.10.2024 ಮತ್ತು 17.07.2025 ರಂದು ಹಾಜರಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತಾಪಿತ ಜಮೀನು ಅರಣ್ಯ ಪ್ರದೇಶವಲ್ಲವೆನ್ನುವ ಬಗ್ಗೆ ಅಥವಾ ಪ್ರಸ್ತಾಪಿತ ಜಮೀನಿನ ಮೇಲೆ ಸದರಿಯವರಿಗೆ ಹಕ್ಕಿದೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಪೂರಕ ದಾಖಲೆಗಳನ್ನು ವಿಚಾರಣಾ ಸಮಯದಲ್ಲಿ ಹಾಜರುಪಡಿಸಿರುವುದಿಲ್ಲ ಮತ್ತು ವಿಚಾರಣೆಯನ್ನು ಮುಂದೂಡಲು ಪ್ರತಿ ಬಾರಿ ಅಹವಾಲು ಸಲ್ಲಿಸಲು ಸಮಯಾವಕಾಶ ಕೋರಿದ್ದು, 3ನೇ ಬಾರಿಯೂ ಸಹ ಹೆಚ್ಚು ಸಮಯವಾಕಾಶ ಬೇಕೆಂದು ಸಕಾರಣಗಳಿಲ್ಲದೆ ಕೋರಿಕೊಂಡಿರುತ್ತಾರೆ.
ಗಮನಾರ್ಹ ಅಂಶವೆಂದರೇ, ಮಲ್ಲಂದೂರು ಗ್ರಾಮದ ಸ.ನಂ 157ಕ್ಕೆ ಸಂಬಂಧಿಸಿದ ಕಂದಾಯ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಂಡು (Forgery) ಜಮೀನು ಮಂಜೂರು ಮಾಡಿಕೊಂಡಿರುವ ಕುರಿತಾಗಿ ತಹಶೀಲ್ದಾರ್ ಸಾಗರ ತಾಲ್ಲೂಕು ಅವರು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದು, ಕ್ರಿಮಿನಲ್ ದೂರಿಗೆ ಸಂಬಂಧಿಸಿದಂತೆ ದಾಖಲಾದ ಎಫ್.ಐ.ಆರ್ ಪ್ರತಿಯನ್ನು ವಲಯ ಅರಣ್ಯಾಧಿಕಾರಿಗಳು ಹಾಜರು ಪಡಿಸಿರುತ್ತಾರೆ.
ಹಾಗೆಯೇ, ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಅವರು ಉಪ ವಿಭಾಗಾಧಿಕಾರಿಗಳು, ಸಾಗರ ಉಪ ವಿಭಾಗ, ಸಾಗರ ರವರಿಗೆ ಬರೆದ ಪತ್ರದಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ರವರು ಕಂದಾಯ ದಾಖಲೆಯನ್ನು ತಿದ್ದುಪಡಿ ಮಾಡಿಕೊಂಡು ಮಲಂದೂರು ಸ.ನಂ 157ರಲ್ಲಿ ಮಂಜೂರು ಮಾಡಿಸಿಕೊಂಡಿರುವ ಅರಣ್ಯ ಪ್ರದೇಶವನ್ನು ರದ್ದು ಮಾಡಿ ಆರ್.ಟಿ.ಸಿ.ಯನ್ನು ಮೊದಲಿನಂತೆ ಯಥಾಸ್ಥಿತಿಗೆ ತರಬೇಕೆಂದು ನೀಡಿರುವ ಆದೇಶದ ಪ್ರತಿಯನ್ನು ವಲಯ ಅರಣ್ಯಾಧಿಕಾರಿಗಳು ಸಲ್ಲಿಸಿರುತ್ತಾರೆ ಜೊತೆಗೆ ಜಿಲ್ಲಾಧಿಕಾರಿಗಳ ಆದೇಶದ ನಂತರ ದಿನ ಪತ್ರಿಕೆಯಲ್ಲಿ ಪ್ರಕಟಣೆಗೊಂಡ ಪತ್ರಿಕಾ ಪ್ರಕಟಣೆಗಳ ತುಣಕುಗಳ ಪ್ರತಿಯನ್ನು ವಲಯ ಅರಣ್ಯಾಧಿಕಾರಿಗಳು ಸಲ್ಲಿಸಿರುತ್ತಾರೆ. ಈ ಎಲ್ಲಾ ದಾಖಲೆಗಳಿಂದ ಆರ್ ಎಮ್ ಷಣ್ಮುಖ ಬಿನ್ ಮಂಜಪ್ಪಗೌಡ ಅವರು ಮಲ್ಲಂದೂರು ಗ್ರಾಮದ ಸ.ನಂ 157ರ ಕಂದಾಯ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಂಡು ಅರಣ್ಯ ಪ್ರದೇಶವನ್ನು ಮಂಜೂರು ಮಾಡಿಕೊಂಡಿರುವುದಾಗಿ ಕಂಡುಬಂದಿರುತ್ತದೆ.
ವಿಷಯ ಏನೇ ಆಗಿದ್ದರೂ, ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಕಂದಾಯ ಇಲಾಖೆಗೆ ಅಧಿಕಾರವಿಲ್ಲವೆನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಅಧಿಸೂಚಿತ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಕಂದಾಯ ಅಧಿಕಾರಿಗಳಿಗೆ ಅವಕಾಶವಿರುವುದಿಲ್ಲ ಮತ್ತು ಅಧಿಸೂಚಿತ ಅರಣ್ಯ ಭೂಮಿಯನ್ನು ಕಂದಾಯ ದಾಖಲೆಗಳಲ್ಲಿ ಅರಣ್ಯ ಭೂಮಿಯಲ್ಲವೆಂದು ನಮೂದಿಸಿರುವ ಕಂದಾಯ ದಾಖಲೆಗಳು ಸಿಂಧುವಾಗುವುದಿಲ್ಲವೆನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಐ.ಎಸ್. ನಿರ್ವಾಣೆ ಗೌಡ ಮತ್ತು ಇತರರು ಹಾಗೂ ಕರ್ನಾಟಕ ಸರ್ಕಾರ ಮತ್ತು ಇತರರಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣ (2007 (15) ಎಸ್.ಸಿ.ಸಿ-44) ಆದೇಶದಲ್ಲಿ ಈ ಮುಂದಿನಂತೆ ಹೇಳಿರುತ್ತದೆ. mere fact that Saguvali chits given by the Tahasildar of reverue department and entries made in revenue records, are of no consequence and would not confer title to the land. Moreover, Revenue authorities are not competent to deal with the property which formed part of Reserved Forest. Therefore, any contrary notification under Karnataka Land Revenue act, to indicate the lands as the Revenue lands, for any purpose also would not be valid unless de-reservation is made in accordance with law under Forest Act. All such grants are therefore to be set aside. In so far as the encroachments, they shall not be permitted and they are liable to be evicted”. ಕಾರಣಗಳಿಂದ ಮಲಂದೂರು ಸರ್ವೆ ನಂ. 157ರಲ್ಲಿ ಆರ್ ಎಮ್, ಷಣ್ಮುಖ ಬಿನ್ ಮಂಜಪ್ಪಗೌಡ ರವರ ಅನುಭವದಲ್ಲಿರುವ 6-24 ಎಕರೆ ಪ್ರದೇಶವು ಅರಣ್ಯ ಭೂಮಿಯಲ್ಲವೆಂದು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡರವರು ಸಾಭೀತುಪಡಿಸಿರುವುದಿಲ್ಲ.
9) ಈ ಪ್ರಕರಣದಲ್ಲಿ ಹೊರಡಿಸಬೇಕಾದ ಆದೇಶವೇನು?
ವಿವರಣೆ : ಮಲಂದೂರು ಗ್ರಾಮದ ಸ.ನಂ 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ರವರ ಅನುಭವದಲ್ಲಿರುವ 6-24 ಎಕರೆ ಪ್ರದೇಶವು ಅರಣ್ಯ ಭೂಮಿ ಎಂದು ಸಾಭೀತಾಗಿರುತ್ತದೆ. ಮಲಂದೂರು ಗ್ರಾಮದ ಸ.ನಂ 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ಅನುಭವದಲ್ಲಿರುವ 6-24 ಎಕರೆ ಪ್ರದೇಶವು ಅರಣ್ಯ ಭೂಮಿಯಲ್ಲವೆಂದು ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಸಾಭೀತುಪಡಿಸಿರುವುದಿಲ್ಲ. ಅರಣ್ಯ ಭೂಮಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಕಾಯ್ದೆ 1963 ಕಲಂ-64(ಎ) ರಡಿಯಲ್ಲಿ ಈ ಮುಂದಿನಂತೆ ಹೇಳಲಾಗಿರುತ್ತದೆ “1) Person unauthorisedly occupying any land in reserved forest, (district forest village forest, Protected forest and any other land under the control of the forest Department), may, without prejudice to any other action that may be taken against him under any other provision of this Act or any other law for the time being in force. Be summarily evicted. By a Forest Officer not below the rank of an Assistant Conservator of Forests and any crop including trees, raised in the land and any building or other, construction erected thereon shall, if not removed by him within such time as the Forest Officer may fix, be liable to forfeiture”.
ಮುಂದುವರೆದು, ಅನಧಿಕೃತ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಐ.ಎಸ್. ನಿರ್ವಣೆಗೌಡ ಮತ್ತು ಇತರರು ಮತ್ತು ಕರ್ನಾಟಕ ಸರ್ಕಾರ ಪ್ರಕರಣದಲ್ಲಿ ಮಾನ್ಯ ಸರ್ಮೋಚ್ಚ ನ್ಯಾಯಾಲಯದಿಂದ ಹೊರಡಿಸಲ್ಪಟ್ಟ ಆದೇಶದಲ್ಲಿ “any contrary notification under Karnataka Land Revenue act, to indicate the lands as the Revenue lands, for any purpose also would not be valid unless de-reservation is made in accordance with law under Forest Act, All such grants are therefore to be set aside. In so far as the encroachments, they shall not be permitted and they are liable to be evicted”. So ಆದೇಶವಾಗಿರುತ್ತದೆ.
ಹಾಗೆಯೆ ಮಾನ್ಯ ಘನ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ ರಿಟ್ ಪಿಟಿಷನ್ ಸಂಖ್ಯೆ: 11911/1989 ದಿನಾಂಕ: 22-08-1997ರಲ್ಲಿ (ಎಂ.ಎನ್ ಸೋಮಶೇಖರ್ ಮತ್ತು ಜಿಲ್ಲಾ ಅರಣ್ಯಾಧಿಕಾರಿ, ಚಿಕ್ಕಮಗಳೂರು ಹಾಗೂ ಇತರರು) ಈ ಮುಂದಿನಂತೆ ಆದೇಶವಾಗಿರುತ್ತದೆ. “If the land is a forest land in respect of which the petitioner has no right to be in possession of the same. It is open for the respondent to take steps to evict the petitioner in accordance with the provisions of law. Therefore a direction issued to the respondents to take appropriate steps in accordance with law” – ಆದ್ದರಿಂದ, ಮಲಂದೂರು ಗ್ರಾಮ ಸ.ನಂ 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ರವರ ಅನುಭೋಗದಲ್ಲಿರುವ 6-24 ಎಕರೆ ಅರಣ್ಯ ಪ್ರದೇಶವನ್ನು ತೆರವುಗೊಳಿಸಲು ಆದೇಶ ಹೊರಡಿಸಬೇಕಾಗಿರುತ್ತದೆ. ಅದಕ್ಕಾಗಿ ಈ ಮುಂದಿನಂತೆ ಆದೇಶ ಹೊರಡಿಸಿದೆ.
ಸಾಗರದ ಎಸಿಎಫ್ ರವಿ.ಕೆ ಅವರು ಹೊರಡಿಸಿರುವಂತ ಒತ್ತುವರಿ ತೆರವಿನ ಆದೇಶದಲ್ಲಿ ಏನಿದೆ.?
ಪ್ರಸ್ತಾವನೆಯಲ್ಲಿ ವಿವರಿಸಿರುವ ಮಲಂದೂರು ಗ್ರಾಮದ ಸ.ನಂ 157ರಲ್ಲಿ ಆರ್ ಎಮ್. ಷಣ್ಮುಖ ಬಿನ್ ಮಂಜಪ್ಪಗೌಡ ಅವರ ಅನುಭೋಗದಲ್ಲಿರುವ 6-24 ಎಕರೆ ಅರಣ್ಯ ಪ್ರದೇಶವನ್ನು ಈ ಆದೇಶದ ದಿನದಿಂದ ಮತ್ತು 30 ದಿನಗಳಲ್ಲಿ, ಅದರಲ್ಲಿ ಇರುವ ಬೆಳೆ ಹಾಗೂ ಇತರೆ ರಚನೆಗಳಿರುವ ಸೊತ್ತನ್ನು ತೆರವು ಮಾಡಿ, ಹೊರಹೋಗಲು ಹಾಗೂ ಸದರಿ ಪ್ರದೇಶವನ್ನು ಅರಣ್ಯ ಇಲಾಖೆಗೆ ವಹಿಸಿಕೊಡಲು ಆದೇಶಿಸಿದ್ದಾರೆ.
ನಿಗದಿಪಡಿಸಿರುವ ಅವಧಿಯೊಳಗೆ ಒತ್ತುವರಿದಾರರು ಒತ್ತುವರಿಯನ್ನು ತೆರವು ಮಾಡದೇ ಇದ್ದಲ್ಲಿ ಒತ್ತುವರಿ ಜಮೀನಿನಲ್ಲಿರುವ ಕಟ್ಟಡ, ಬೆಳೆ ಮುಂತಾದವುಗಳನ್ನು ವಲಯ ಅರಣ್ಯಾಧಿಕಾರಿ, ಆನಂದಪುರಂ ವಲಯ, ಚೋರಡಿ ಇವರು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆದೇಶಿಸಿದೆ. ಹಾಗೆಯೇ, ಕಟ್ಟಡ, ಬೆಳೆ ಮುಂತಾದವುಗಳನ್ನು ತೆರವುಗೊಳಿಸಿ ಅರಣ್ಯ ಪ್ರದೇಶವನ್ನು ಮೂಲ ಸ್ಥಿತಿಗೆ ತರಲು ತಗಲುವ ವೆಚ್ಚವನ್ನು ಒತ್ತುವರಿದಾರರಿಂದ ಕರ್ನಾಟಕ ಅರಣ್ಯ ಕಾಯ್ದೆ 1963 ರ ಕಲಂ 109 ಹಾಗೂ ಕರ್ನಾಟಕ ಅರಣ್ಯ ನಿಯಮಗಳು 1969 ರ ನಿಯಮ 42ರ ಪ್ರಕಾರ ವಸೂಲಿ ಮಾಡಲು ಸೂಚಿಸಿದ್ದಾರೆ.
ಅಲ್ಲದೇ ಅರಣ್ಯ ಭೂಮಿಯನ್ನು ಇಲಾಖಾ ವಶಕ್ಕೆ ತೆಗೆದುಕೊಂಡು, ಅದರ ಮೂಲಸ್ಥಿತಿಗೆ ತರಲು ಅಗತ್ಯವಾದ ಎಲ್ಲಾ ಕ್ರಮವನ್ನು ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ. ಈ ಆದೇಶವನ್ನು ದಿನಾಂಕ: 08.08.2025 ರಂದು ತೆರೆದ ಈ ನ್ಯಾಯಾಲಯದಲ್ಲಿ ಉಚ್ಚರಿಸಿ ನನ್ನ ಸಹಿಯೊಂದಿಗೆ ಹೊರಡಿಸಲಾಗಿದೆ ಎಂಬುದಾಗಿ ಸಾಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ.ಕೆ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಅ.18ರವರೆಗೆ ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ‘ದಸರಾ ರಜೆ’ ವಿಸ್ತರಣೆ: CM ಸಿದ್ದರಾಮಯ್ಯ ಘೋಷಣೆ
ಏಪ್ರಿಲ್ 2026ರಿಂದ SMS OTP ಮೀರಿ ಹೊಸ ಪಾವತಿ ದೃಢೀಕರಣ ನಿಯಮಗಳನ್ನು RBI ಜಾರಿ