ಶಿವಮೊಗ್ಗ: ಎಟಿಎಂಗೆ ಹಣ ತೆಗೆಯಲು ಬಂದ ಮುಗ್ದ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅವರನ್ನು ವಂಚಿಸುತ್ತಿದ್ದಂತ ಇಬ್ಬರು ಆರೋಪಿಗಳನ್ನು ಸಾಗರ ಪೇಟೆ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಾಗರ ತಾಲ್ಲೂಕು ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರು, ಅಕ್ಟೋಬರ್ ನಲ್ಲಿ ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಗಲ್ ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂನಿಂದ ಹಣ ತೆಗೆಯುತ್ತಿದ್ದಂತ ವಯೋ ವೃದ್ಧರನ್ನು ವಂಚಿಸಿದ್ದ ಬಗ್ಗೆ ದೂರು ದಾಖಲಾಗಿತ್ತು. ವಯೋ ವೃದ್ಧರಿಂದ ಎಟಿಎಂ ಹಾಗೂ ಅದರ ಪಿನ್ ಪಡೆದು ತಾಳಗುಪ್ಪ ಎಸ್ ಬಿ ಐ ಬ್ಯಾಂಕ್ ಎಟಿಎಂನಿಂದ 1,49,999 ಹಣವನ್ನು ಡ್ರಾ ಮಾಡಿಕೊಂಡಿರೋ ಬಗ್ಗೆ ದೂರು ದಾಖಲಾಗಿತ್ತು ಎಂದಿದ್ದಾರೆ.
ಇದೇ ರೀತಿಯಲ್ಲಿ ಶಿರಾಳಕೊಪ್ಪದಲ್ಲಿಯೂ ಒಬ್ಬ ಮಹಿಳೆಯನ್ನು ವಂಚಿಸಿ, ಅವರಿಂದ ಎಟಿಎಂ ಕಾರ್ಡ್, ಪಿನ್ ಪಡೆದು ಸುಮಾರು 95,000 ಹಣವನ್ನು ಡ್ರಾ ಮಾಡಿಕೊಂಡಿದ್ದ ಬಗ್ಗೆಯೂ ಶಿರಾಳಕೊಪ್ಪ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಎಂಬುದಾಗಿ ಮಾಹಿತಿ ನೀಡಿದರು.
ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದಂತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮ್ ರೆಡ್ಡಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ಕಾರಿಯಪ್ಪ.ಎಜಿ ಅವರು ತಮ್ಮ ಮೇಲ್ವಿಚಾರಣೆಯಲ್ಲಿ ತಂಡವನ್ನು ರಚಿಸಿದ್ದರು ಎಂದರು.
ಎಟಿಎಂನಿಂದ ಹಣ ತೆಗೆಯುತ್ತಿದ್ದ ಮುಗ್ದರವನ್ನು ವಂಚಿಸಿದ ಆರೋಪಿಗಳ ಪತ್ತೆಗಾಗಿ ಸಾಗರ ಪೇಟೆ ಠಾಣೆಯ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್, ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ್ ಶೆಟ್ಟಿ, ಪಿಎಸ್ಐ ಯಲ್ಲಪ್ಪ ಹಿರಗಣ್ಣನವರ, ಕಾರ್ಗಲ್ ಠಾಣೆ ಪಿಎಸ್ಐ ಹೊಳೆಬಸಪ್ಪ ಹೊಳಿ, ಸಿಬ್ಬಂದಿಗಳಾದ ಹೆಡ್ ಕಾನ್ ಸ್ಟೇಬಲ್ ಸನಾವುಲ್ಲ, ಪಿಸಿ ವಿಕಾಸ್, ವಿಶ್ವನಾಥ್, ಕೃಷ್ಣಮೂರ್ತಿ, ಮೆಹಬೂಬ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದಾಗಿ ಹೇಳಿದರು.
ಈ ತಂಡವು ವಿವಿಧೆಡೆ ತನಿಖೆಯನ್ನು ನಡೆಸಿ, ಟೆಕ್ನಿಕಲ್ ಎವಿಡೆನ್ಸ್ ಮೂಲಕ ಆರೋಪಿಗಳನ್ನು ಪತ್ತೆಹಚ್ಚಿದೆ. ಈ ಎರಡು ಪ್ರಕರಣ ಸಂಬಂಧ ಆರೋಪಿಗಳಾದಂತ ಜೋಗಿನ್ ದಾರ್ ಹಾಗೂ ಮುಖೇಶ್ ಎಂಬುವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಬಂಧಿತ ಆರೋಪಿಗಳಿಂದ ಕಾರ್ಗಲ್ ಠಾಣೆಯಲ್ಲಿ ದಾಖಲಾಗಿದ್ದಂತ ಪ್ರಕರಣ ಸಂಬಂಧ ರೂ.60,000 ಹಾಗೂ ಶಿರಾಳಕೊಪ್ಪ ಠಾಣೆಯಲ್ಲಿ ದಾಖಲಾಗಿದ್ದಂತ ಕೇಸ್ ಸಂಬಂಧ ರೂ.40,000 ಜೊತೆಗೆ ಸುಮಾರು 3,00,000 ಮೌಲ್ಯದ ರಾಯಲ್ ಎನ್ ಪೀಲ್ಡ್ ಹಂಟರ್ ಬೈಕ್ ಸೀಜ್ ಮಾಡಲಾಗಿದೆ ಎಂದಿದ್ದಾರೆ.
ದೇವಸ್ಥಾನ ಕಳ್ಳತನದ ಕುಖ್ಯಾತ ಆರೋಪಿ ಅರೆಸ್ಟ್
ಇನ್ನೂ ಸಾಗರ ಪೇಟೆಯ ಎಸ್ ಪಿ ಎಂ ರಸ್ತೆಯಲ್ಲಿರುವಂತ ನಗರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪಿ ಶಿರವಂತೆಯ ಶಿವಕುಮಾರ್ ಬಂಧಿಸಲಾಗಿದ್ದು, ಬಂದಿತ ಆರೋಪಿಯಿಂದ 30 ಗ್ರಾಂ 570 ಮಿಲಿ ತೂಕದ ಅಂದಾಜು 2,00,000 ಬಂಗಾರದ ಮಾಂಗಲ್ಯ ಸರವನ್ನು ಸಾಗರ ಪೇಟೆ ಠಾಣೆಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ತಾಯಿ ಕೋಕಿಲಾ ಬೆನ್ ಸೇರಿ ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ