ಶಿವಮೊಗ್ಗ: ಸಾಗರ ನಗರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮೂರು ಕಳ್ಳತನ ಪ್ರಕರಣಗಳನ್ನು ಬೇದಿಸಿದ್ದಾರೆ. ಅಲ್ಲದೇ 5,000 ನಗದು ಸೇರಿದಂತೆ 1.25 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಪೇಟೆ ಠಾಣೆ ಹಾಗೂ ಆನಂದಪುರ ಠಾಣೆಯಲ್ಲಿ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಇವುಗಳ ತನಿಖೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮ್ ರೆಡ್ಡಿ, ಕರಿಯಪ್ಪ ಅವರು, ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ ತಂಡವನ್ನು ರಚಿಸುತ್ತಾರೆ.
ಸಾಗರ ಠಾಣೆಯ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ನೇತೃತ್ವದಲ್ಲಿ ಪಿಎಸ್ಐ ಯಲಪ್ಪ ಹಿರಗಣ್ಣನವರ, ಹೆಡ್ ಕಾನ್ಸ್ ಸ್ಟೇಬಲ್ ಸನಾವುಲ್ಲಾ, ಫೈರೋಜ್ ಅಲಿಖಾನ್, ಪಿಸಿ ವಿಕಾಸ್, ವಿಶ್ವನಾಥ್, ಕೃಷ್ಣ ಮೂರ್ತಿ, ರವಿಕುಮಾರ್ ತಂಡ ತನಿಖೆಗೆ ಇಳಿದು, ಮೂರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೇಸ್ ನಂ.1
ದಿನಾಂಕ 14-12-2024ರಂದು ಮರ್ಗಿ ಏಜೆನ್ಸಿ ಮಾಲೀಕರಾದ ಅಶೋಕ್ ಬಿ.ಆರ್ ಅವರು ಸಾಗರ ಪೇಟೆ ಠಾಣೆಗೆ ತೆರಳಿ ತಮ್ಮ ಅಂಗಡಿ ಶೆಟರ್ ಮುರಿದು ಒಂದು ಡಿ ವಿ ಆರ್ ಮತ್ತು 20,000 ನಗದು ಹಣ ಕಳ್ಳತನ ಮಾಡಿದ್ದಾರೆ ಅಂತ ದೂರು ನೀಡುತ್ತಾರೆ. ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗುತ್ತದೆ.
ಕೇಸ್ ನಂ.2
ದಿನಾಂಕ 14-12-2024ರಲ್ಲಿ ಆನಂದಪುರದಲ್ಲೂ ಎಲೆಕ್ಟ್ರಾನಿಕ್ ಅಂಗಡಿಯೊಂದರಿಂದ ಸುಮಾರು 78,000 ಮೌಲ್ಯದ ಟಿವಿ, ಹೋಂ ಥಿಯೇಟರ್ ಹಾಗೂ ನಗದು ಹಣವನ್ನು ದೋಚಿ ಪರಾರಿಯಾದ ಕೇಸ್ ದಾಖಲಾಗುತ್ತದೆ.
ಈ ಎರಡು ಪ್ರಕರಣಗಳನ್ನು ಬೇದಿಸಿರುವಂತ ಪೊಲೀಸರು, ಈ ಪ್ರಕರಣ ಸಂಬಂಧ ಶಿವಮೊಗ್ಗದ ಹಮಾಲಿ ಕೆಲಸ ಮಾಡುತ್ತಿದ್ದಂತ ಆರೋಪಿ ಜಾವಿದ್ ಖಾನ್ ಆಲಿಯಾಸ್ ಲುಕ್ಮನ್ ಎಂಬಾತನನ್ನು ಬಂದಿಸಿದ್ದಾರೆ. ಬಂದಿತ ಆರೋಪಿಯಿಂದ 5,000 ನಗದು ಹಾಗೂ 49,000 ಮೌಲ್ಯದ ಎರಡು ಟಿವಿ ಜಪ್ತಿ ಮಾಡಿದ್ದಾರೆ.
ಕೇಸ್ ನಂ.3
ದಿನಾಂಕ 11-02-2025ರಂದು ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದಂತ ಹೀರೋ ಹೊಂಡ ಬೈಕ್ ಕಳ್ಳತನ ಮಾಡಲಾಗಿರುತ್ತದೆ. ಈ ಬಗ್ಗೆ ಮಾಲೀಕ ಉದಯ್ ಕುಮಾರ್ ಎಂಬುವರು ಸಾಗರ ಪೇಟೆ ಠಾಣೆಯಲ್ಲಿ ದೂರು ನೀಡುತ್ತಾರೆ. ಈ ದೂರನ್ನು ಆಧರಿಸಿ ಪ್ರಕರಣ ದಾಖಲಾಗುತ್ತದೆ.
ಈ ಪ್ರಕರಣದಲ್ಲಿ ಶಿವಮೊಗ್ಗದ ಮೊಹಮ್ಮದ್ ಖರೀಂ ಆಲೀಯಾಸ್ ಚೋಟು ಹಾಗೂ ವಿನೋದ್ ಆಲಿಯಾಸ್ ವಿನು ಎಂಬ ಇಬ್ಬರು ಆರೋಪಗಳನ್ನು ಬಂದಿಸಿದ್ದಾರೆ. ಆರೋವಿಗಳಿಂದ 70,000 ಮೌಲ್ಯದ ಹೀರೋ ಹೊಂಡ ಸ್ಪೆಂಡರ್ ಬೈಕ್ ಜಪ್ತಿ ಮಾಡಿದ್ದಾರೆ.
ಒಟ್ಟಾರೆ ಮೂರು ಕಳ್ಳತನ ಪ್ರಕರಣಗಳಲ್ಲಿ ಪೊಲೀಸ್ ಎರಡು ಕೇಸ್ ನಲ್ಲಿ ಒಬ್ಬ ಅಪರಾಧಿ, ಒಂದು ಬೈಕ್ ಕಳವು ಕೇಸಲ್ಲಿ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. ಜೊತೆಗೆ 5,000 ನಗದು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಅಂತ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ