ಶಿವಮೊಗ್ಗ: ಸಾಗರ ಸುತ್ತ ವಾರಪತ್ರಿಕೆಯ ನೇತೃತ್ವದಲ್ಲಿ ಇದೇ ಜನವರಿ 5, 2025ರಂದು ಸಾಗರೋತ್ಸವ -2025 ಕಾರ್ಯಕ್ರಮವನ್ನು ಸಾಗರದಲ್ಲಿ ಆಯೋಜಿಸಲಾಗಿದೆ. ಒಂದೇ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಭೂಮಣ್ಣಿ ಬುಟ್ಟಿ ಚಿತ್ತಾರ ಬಿಡಿಸುವವರಿಗೂ ಸ್ಪರ್ಧೆ, ಪವಾಡ ಬಯಲು, ಇತಿಹಾಸ ಸಮ್ಮೇಳನ ಸೇರಿದಂತೆ ನಾಲ್ಕು ವಿವಿಧ ಕಾರ್ಯಕ್ರಮವನ್ನು ಸಾಗರದ ನಗರಸಭೆ ಆವರಣದಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌಗೆ ಮಾಹಿತಿ ನೀಡಿರುವಂತ ಸಾಗರ ಸುತ್ತ ವಾರಪತ್ರಿಕೆಯ ಪ್ರಧಾನ ಸಂಪಾದಕರಾದಂತ ನಾಗೇಶ್.ಜಿ ಅವರು, ದಿನಾಂಕ 05-01-2025ರ ಭಾನುವಾರದಂದು ಸಾಗರೋತ್ಸವ -2025 ಕಾರ್ಯಕ್ರಮವನ್ನು ಸಾಗರದಲ್ಲಿ ಆಯೋಜಿಸಲಾಗಿದೆ. ಸಾಗರದ ಜನರು ಹೆಚ್ಚಾಗಿ ಭಾಗಿಯಾಗುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
ಒಂದೇ ದಿನ ನಾಲ್ಕು ಕಾರ್ಯಕ್ರಮ
ಜನವರಿ.5, 2025ರಂದು ಒಂದೇ ದಿನ ಸಾಗರಸುತ್ತ ಪತ್ರಿಕಾ ಬಳಗ, ಸಹೃದಯ ಬಳಗ(ರಿ) ಹಾಗೂ ಸಾಗರ ತಾಲ್ಲೂಕು ಇತಿಹಾಸ ವೇದಿಕೆಯಿಂದ ಮೂರು ಕಾರ್ಯಕ್ರಮ ಆಯೋಜಿಸಲಾಗಿದೆ. ಭೂಮಣ್ಣಿಬುಟ್ಟಿ ಸ್ಪರ್ಧೆ, ಸಾಗರ ತಾಲ್ಲೂಕು ಮಟ್ಟದ 6ನೇ ಇತಿಹಾಸ ಸಮ್ಮೇಳನ, ಆಹಾರ ಮೇಳೆ ಮತ್ತು ವಸ್ತು ಪ್ರದರ್ಶನ ಹಾಗೂ ಸಂಜೆ 5.30ಕ್ಕೆ 24ನೇ ವರ್ಷದ ಸಾಗರೋತ್ಸವ-2025 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಕಾರ್ಯಕ್ರಮ-1: ಬೆಳಿಗ್ಗೆ 9.30ಕ್ಕೆ ಭೂಮಣ್ಣಿಬುಟ್ಟಿ ಸ್ಪರ್ಧೆ
ದಿನಾಂಕ 05-01-2025ರಂದು ಬೆಳಿಗ್ಗೆ 9.30ಕ್ಕೆ ಸಾಗರದ ನಗರಸಭೆ ಆವರಣದಲ್ಲಿರುವಂತ ಗಾಂಧಿ ಮೈದಾನದಲ್ಲಿ ಭೂಮಣ್ಣಿಬುಟ್ಟಿ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ. ಸಾಗರೋತ್ಸವ-2025 ಅಂಗವಾಗಿ “ಮಲೆನಾಡಿನ ಚಿತ್ತಾರದ ಸಾಕ್ಷಿಪ್ರಜ್ಞೆ” ಶೀರ್ಷಿಕೆ ಅಡಿ ಭೂಮಣ್ಣಿ ಬುಟ್ಟಿ ಸ್ಪರ್ಧೆ ಕಾರ್ಯಕ್ರಮ ಬೆಳಿಗ್ಗೆ 10ಕ್ಕೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಉತ್ತಮ ಚಿತ್ತಾರ ಬಿಡಿಸುವಂತವರಿಗೆ ಈ ಕೆಳಕಂಡಂತೆ ನಗದು ಬಹುಮಾನ ನೀಡಲಾಗುವುದು ಎಂದು ಸಾಗರ ಸುತ್ತ ಪತ್ರಿಕೆ ಪ್ರಧಾನ ಸಂಪಾದಕ ನಾಗೇಶ್.ಜಿ ತಿಳಿಸಿದ್ದಾರೆ.
- ಪ್ರಥಮ ಬಹುಮಾನ – ರೂ.2000
- ದ್ವಿತೀಯ ಬಹುಮಾನ – ರೂ.1500
- ತೃತೀಯ ಬಹುಮಾನ – ರೂ 750
ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಸ್ಪರ್ಧಾ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಸ್ಪರ್ಧಾಳುಗಳು ರೂ.50 ಸ್ಪರ್ಧೆ ಶುಲ್ಕವನ್ನು ಜನವರಿ.2, 2025ರ ಒಳಗಾಗಿ ನೋಂದಾಯಿಸಿಕೊಳ್ಳಬೇಕಿದೆ. ಪಾಲ್ಗೊಳ್ಳುವವರು ಲೋಕೇಶ್ ಕುಮಾರ್: 6361556719, ಎಸ್. ಬಸವರಾಜ್: 9449071149 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮವನ್ನು ಸಿರಿವಂತೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವವಿದ ಚಂದ್ರಶೇಖರ ಸಿರಿವಂತೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಹೃದಯ ಬಳಗ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ವಹಿಸಲಿದ್ದಾರೆ. ವೇದಿಕೆಯಲ್ಲಿ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಎನ್ ಲಲಿತಮ್ಮ, ಸಾಗರದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಸಾಗರ ತಾಲ್ಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ ಕೆಳದಿ, ಮಾಲ್ವೆ ಗ್ರಾಮ ಪಂಚಾಯ್ತಿ ಸದಸ್ಯ ಅಶೋಕ್ ಬೇಳೂರು, ಅಕ್ಷಯಸಾಗರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಬರದವಳ್ಳಿ, ಸಾಗರ ನಗರಸಭೆ ಸದಸ್ಯ ಎಲ್ ಚಂದ್ರಪ್ಪ, ಮಾಸೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ, ಸಾಹಿತಿ ರಾಮಚಂದ್ರ ಸಾಗರ್ ಹಾಗೂ ಕೆಳದಿಯ ಚಿತ್ತಾರ ಕಲಾವಿದೆ ಚೌಡಮ್ಮ ಇರಲಿದ್ದಾರೆ ಎಂದಿದ್ದಾರೆ.
ಕಾರ್ಯಕ್ರಮ-2: ಬೆಳಿಗ್ಗೆ 10ಕ್ಕೆ ಆಹಾರ ಮೇಳೆ ಮತ್ತು ವಸ್ತು ಪ್ರದರ್ಶನ
ದಿನಾಂಕ 05-01-2025ರಂದು ಬೆಳಿಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಆಹಾರ ಮೇಳೆ ಮತ್ತು ವಸ್ತು ಪ್ರದರ್ಶನವನ್ನು ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಹೃದಯ ಬಳಗದ ಉಪಾಧ್ಯಕ್ಷ ವಿ.ಟಿ ಸ್ವಾಮಿ ವಹಿಸಲಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರು, ಹಾಲಿ ನಗರಸಭೆ ಸದಸ್ಯರಾದಂತ ಮಧುರಾ ಶಿವಾನಂದ್, ನಗರಸಭೆ ಸದಸ್ಯೆ ಮಧುಮಾಲತಿ, ನಿಕಟಪೂರ್ವ ಉಪಾಧ್ಯಕ್ಷರು, ಹಾಲಿ ನಗರಸಭೆ ಸದಸ್ಯ ವಿ.ಮಹೇಶ್, ಸರಸ್ವತಿ ನಾಗರಾಜ್ ಹಾಗೂ ಬಿ ಹೆಚ್ ಲಿಂಗರಾಜು ಇರಲಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ-3: ಬೆಳಿಗ್ಗೆ 10.30ಕ್ಕೆ ಸಾಗರ ತಾಲ್ಲೂಕು ಮಟ್ಟದ 3ನೇ ಇತಿಹಾಸ ಸಮ್ಮೇಳನ
ದಿನಾಂಕ 05-01-2025ರಂದು ಸಾಗರದ ನಗರಸಭೆ ಆವರಣದಲ್ಲಿನ ಗಾಂಧಿ ಮೈದಾನದಲ್ಲಿ ಬೆಳಿಗ್ಗೆ 10.30ಕ್ಕೆ ಇತಿಹಾಸ ಸಮ್ಮೇಳನ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ತುಮಕೂರು ವಿವಿಯ ಹಿರಿಯ ಪ್ರಾಧ್ಯಾಪಕ ಡಾ.ಎಂ ಕೊಟ್ರೇಶ್ ಅವರು ಉದ್ಘಾಟಿಸಲಿದ್ದಾರೆ. ಈ 3ನೇ ತಾಲ್ಲೂಕು ಮಟ್ಟದ ಇತಿಹಾಸ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆಯನ್ನು ಇತಿಹಾಸ ಸಂಶೋಧಕ ಡಾ.ಕೆ ಪ್ರಭಾಕರ್ ರಾವ್ ವಹಿಸಲಿದ್ದಾರೆ ಎಂದಿದ್ದಾರೆ.
ಇನ್ನೂ ಇತಿಹಾಸ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಗರ ತಾಲ್ಲೂಕು ಇತಿಹಾಸ ವೇದಿಕೆಯ ಅಧ್ಯಕ್ಷ ಡಾ.ಕೆಳದಿ ವೆಂಕಟೇಶ್ ಜೋಯ್ಸ್ ವಹಿಸಲಿದ್ದಾರೆ. ಶಾಸನಗಳ ನೆಲೆಯಲ್ಲಿ ಸಾಗರ ತಾಲ್ಲೂಕಿನ ಇತಿಹಾಸ-ವಾಸ್ತಿಶಿಲ್ಪದ ಬಗ್ಗೆ ಶಿವಮೊಗ್ಗದ ಇತಿಹಾಸ ತಜ್ಞ ಡಾ.ಕೆಜಿ ವೆಂಕಟೇಶ್ ಅವರು ಪ್ರಬಂಧ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸಾಗರ ತಾಲ್ಲೂಕು 3ನೇ ಇತಿಹಾಸ ಸಮ್ಮಳೇನದ ವೇದಿಕೆಯಲ್ಲಿ ಸಾಗರ ತಾಲ್ಲೂಕು ಕಸಾಪ ಅಧ್ಯಕ್ಷರಾದಂತ ವಿ.ಟಿ ಸ್ವಾಮಿ, ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದಂತ ಡಾ.ರಾಜೇಶ್ವರಿ.ಹೆಚ್, ಎಂಡಿಎಫ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿಲ್ಪ, ನಗರಸಭೆ ಸದಸ್ಯ ಕೆ.ಆರ್ ಗಣೇಶ್ ಪ್ರಸಾದ್, ಮಾಜಿ ನಗರಸಭಾ ಸದಸ್ಯ ಕೆ.ಸಿದ್ದಪ್ಪ, ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಎಸ್ ಬಸವರಾಜ್ ಹಾಗೂ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹೆಚ್.ಆರ್ ನಾಗಭೂಷಣ್ ಇರಲಿದ್ದಾರೆ ಎಂದಿದ್ದಾರೆ.
ಕಾರ್ಯಕ್ರಮ-4: 24ನೇ ವರ್ಷದ ಸಾಗರೋತ್ಸವ 2025 ಕಾರ್ಯಕ್ರಮ
ದಿನಾಂಕ 05-01-2025ರಂದು ಸಂಜೆ 5.30ಕ್ಕೆ ಸಾಗರ ಸುತ್ತಾ ಪತ್ರಿಕೆಗೆ 24 ವರ್ಷ ಪೂರೈಸುತ್ತಿರುವುದರಿಂದ 24ನೇ ವರ್ಷದ ಸಾಗರೋತ್ಸವ 2025 ಕಾರ್ಯಕ್ರಮ ನಡೆಯಲಿದೆ. ವೈವಿಧ್ಯತೆಯ ಕಾರ್ಯಕ್ರಮಗಳ ಗುಚ್ಛದೊಂದಿಗೆ ರಾಜ್ಯ ಮಟ್ಟದ ಸಹೃದಯ ಪ್ರಶಸ್ತಿ ಪ್ರದಾನ ಹಾಗೂ ಅಂತರರಾಷ್ಟ್ರೀಯ ಖ್ಯಾತ ಪವಾಡ ರಹಸ್ಯ ಬಯಲು ಖ್ಯಾತಿಯ ಡಾ.ನಟರಾಜ್ ಹುಲಿಕಲ್ ಅವರಿಂದ ಪವಾಡ ರಹಸ್ಯ ಬಯಲು ನಡೆಯಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಂದಗದ್ದೆ-ಕೆಳದಿ ರಾಜಗುರು ಹಿರೇಮಠದ ಶ್ರೀ ಷ.ಬ್ರ.ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಅರಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದಂತ ಗೋಪಾಲಕೃಷ್ಣ ಬೇಳೂರು ವಹಿಸಲಿದ್ದಾರೆ.
ಇನ್ನೂ ಈ ವೇಳೆ ಹೊಸಗುಂದದ ಶ್ರೀ ಉಮಾಮಹೇಶ್ವರ ಟ್ರಸ್ಟ್ ಅಧ್ಯಕ್ಷರಾದಂತ ಸಿ.ಎಂ ಎನ್ ಶಾಸ್ತ್ರಿ, ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಟಾಕಪ್ಪ, ಸಾಮಾಜಿಕ ಕಾರ್ಯಕರ್ತ ಟಿವಿ ಪಾಂಡುರಂಗ, ಸಾಗರದ ಮಾಜಿ ಪುರಸಭೆ ಅಧ್ಯಕ್ಷೆ ಶರಾವತಿ ಸಿ ರಾವ್ ಹಾಗೂ ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ ಅವರಿಗೆ ಸನ್ಮಾನಿಸಲಾಗುತ್ತಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರದ ಸಹೃದಯಿ ಬಳಗ(ರಿ) ಅಧ್ಯಕ್ಷರು ಹಾಗೂ ಸಾಗರ ಸುತ್ತ ಪತ್ರಿಕೆಯ ಪ್ರಧಾನ ಸಂಪಾಧಕರಾದಂತ ಜಿ.ನಾಗೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಪ್ಸ್ ಕೋಸ್ ಅಧ್ಯಕ್ಷ ಬಿ.ಎ ಇಂದೂಧರ ಬೇಸೂರು, ಉದ್ಯಮಿ ಕೆ.ಹೆಚ್ ಜ್ಞಾನೇಶ್ವರಪ್ಪ, ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಶ್ರೀ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಕೆ.ವಿ ಜಯರಾಮ್, ಉದ್ಯಮಿ ಸುನೀಲ್ ಗಾಯ್ ತೊಂಡೆ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್ ಸಂತೋಷ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ಇರಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಸಹೃದಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಹೀಗಿದೆ ರಾಜ್ಯಮಟ್ಟದ ಸಹೃದಯ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಡಾ.ರಾಮಚಂದ್ರಪ್ಪ ಬೆಂಗಳೂರು, ಶಿಕ್ಷಣ ತಜ್ಞ
- ಸೂಲಗಿತ್ತಿ ಚನ್ನಬಸಮ್ಮ ಯಾದಗಿರಿ, ಮಹಿಳಾ ಸಾಧಕಿ
- ಡಾ.ಕೊಟ್ರೇಶ್ ಕೆ ತುಮಕೂರು, ಇತಿಹಾಸ ತಜ್ಞ
- ಸೈಯದ್ ಇಕ್ಬಾಲ್ ಸಾಬ್ ಸಾಗರ, ಉದ್ಯಮಿ
- ಅಶ್ವಿನಿಕುಮಾರ್ ಸಾಗರ, ಧರ್ಮದರ್ಶಿ
- ಮಹೇಶ್ ಹೆಚ್.ಎಸ್ ತೀರ್ಥಹಳ್ಳಿ, ಸಹಕಾರಿ
- ತೀ.ನ ಶ್ರೀನಿವಾಸ್ ಸಾಗರ, ರಾಜಕಾರಣಿ
- ಡಾ.ಪವಿತ್ರ ಕೆ ಎಸ್ ಶಿವಮೊಗ್ಗ, ಬಹುಮುಖ ಪ್ರತಿಭೆ
- ಟೀಕಪ್ಪ ಕಣ್ಣೂರು, ಜಾನಪದ ಕಲಾವಿದ
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಸಕಲ ಸರ್ಕಾರಿ ಗೌರವಗಳೊಂದಿಗೆ ‘ಯೋಧ ದಿವಿನ್’ ಅಂತ್ಯಕ್ರಿಯೆ: ಹುತಾತ್ಮ ಸೈನಿಕ ಪಂಚಭೂತಗಳಲ್ಲಿ ಲೀನ
BREAKING: ಕೇಂದ್ರ ಸಚಿವ ವಿ.ಸೋಮಣ್ಣ ಹೆಸರಿನಲ್ಲಿ ವಂಚನೆ ಯತ್ನ: ಆರೋಪಿ ಗೋವರ್ಧನ್ ಅರೆಸ್ಟ್