ಶಿವಮೊಗ್ಗ : ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಇದೊಂದು ಅವಿಸ್ಮರಣೀಯ ಕಾರ್ಯವಾಗಿಸಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ಮೈದಾನದಲ್ಲಿ ಡಿ.23ರ ನಾಳೆ, 24ರ ನಾಡಿದ್ದು ನಡೆಯಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಪೂರ್ವಸಿದ್ದತೆಯನ್ನು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದಂತ ಅವರು, ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಪೂರ್ಣ ಕಟ್ಟಡಕ್ಕೆ ಸುಣ್ಣಬಣ್ಣ ಮಾಡಲಾಗಿದ್ದು ಖಾಸಗಿ ಕಾಲೇಜಿಗಿಂತ ಸುಂದರವಾಗಿ ಕಾಲೇಜು ಕಂಗೊಳಿಸುತ್ತಿದೆ. ಕಾಲೇಜಿಗೆ ಹೆಚ್ಚುವರಿ 5 ಕೊಠಡಿಗಳನ್ನು 95 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶೌಚಾಲಯದ ಜೊತೆಗೆ ಸಣ್ಣಪುಟ್ಟ ರಿಪೇರಿ ಕೆಲಸವನ್ನು ನಿರ್ವಹಿಸಿದೆ. ಒಟ್ಟಾರೆ ರಾಜ್ಯ ಹೊರರಾಜ್ಯಗಳಿಂದ ಹಳೇಯ ವಿದ್ಯಾರ್ಥಿಗಳು ಎರಡು ದಿನಗಳ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ತಾವು ಓದಿದ ಕಾಲೇಜಿನ ಬಗ್ಗೆ ಅವರಿಗೆ ಗೌರವ ಭಾವನೆ ಮೂಡಬೇಕು. ಅಂತಹ ವಾತಾವರಣ ಸೃಷ್ಟಿಸಿದೆ ಎಂದು ಹೇಳಿದರು.

ನಾನು ಈ ಕಾಲೇಜಿನ ಹಳೇಯ ವಿದ್ಯಾರ್ಥಿಯಾಗಿದ್ದು, ನಾನು ಓದಿದ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ನನಗೆ ರೋಮಾಂಚನ ಉಂಟು ಮಾಡುತ್ತಿದೆ. ಕಾಲೇಜಿನ ಎದುರು ಭಾಗದ ರಸ್ತೆಯನ್ನು ಅಭಿವೃದ್ದಿಪಡಿಸಿದೆ. ನಾಳೆ ಸಚಿವರು, ಸಂಸದರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಳೇಯ ವಿದ್ಯಾರ್ಥಿಗಳಿಗೆ ಸನ್ಮಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿ.24ರಂದು ವಿವಿಧ ಕಾರ್ಯಕ್ರಮ ನಡೆಯಲಿದ್ದು, ಸಂಜೆ ರಾಜೇಶ್ ಕೃಷ್ಣನ್ ತಂಡದಿoದ ರಸಮಂಜರಿ ಕಾರ್ಯಕ್ರಮ ಇರುತ್ತದೆ. ಕನಿಷ್ಟ 10 ಸಾವಿರ ಜನರು ಸೇರುವ ನಿರೀಕ್ಷೆಯನ್ನು ಹೊಂದಲಾಗಿದೆ ಎಂದರು.
ಈ ವೇಳೆ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ, ಬಸವರಾಜ್, ಭವ್ಯ ಕೃಷ್ಣಮೂರ್ತಿ, ಲೋಕೇಶ್, ಉಮೇಶ್ ಸೂರನಗದ್ದೆ, ಸಲೀಂ ಯೂಸೂಫ್, ಪ್ರಾಚಾರ್ಯ ಸತ್ಯನಾರಾಯಣ ಕೆ.ಸಿ., ಪ್ರಾಧ್ಯಾಪಕರಾದಂತ ಜಿ.ಪರಮೇಶ್ವರಪ್ಪ, ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ಎಲ್.ಎಂ.ಹೆಗಡೆ, ರವಿ ಲಿಂಗನಮಕ್ಕಿ, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ ರಮೇಶ್, ಪಿಎ ಶ್ರೀನಿವಾಸ್ ಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಚಾರ ಮತ್ತಷ್ಟು ತಾರಕಕ್ಕೆ ಏರಲಿದೆ: ಛಲವಾದಿ ನಾರಾಯಣಸ್ವಾಮಿ ಭವಿಷ್ಯ








