ಶಿವಮೊಗ್ಗ: ಸಾಗರ ಟೌನ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆಸಿ, ನಗರದಲ್ಲಿ ದನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಈ ಕೃತ್ಯಕ್ಕೆ ಉಪಯೋಗಿಸಿದ 10,00,000/ರೂ ಮೌಲ್ಯದ ಟೊಯೋಟಾ ಫಾರ್ಚುನರ್ ಕಾರ್ ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಎನ್ ನಗರದ ಆಶ್ರಮ ಶಾಲೆ ಹಿಂಭಾಗದಲ್ಲಿ ದಿನಾಂಕಃ-27/05/2024 ರಂದು ದನ ಕಳ್ಳತನ ಮಾಡಿದ ಬಗ್ಗೆ ಪ್ರಕರಣ ವರದಿಯಾಗಿರುತ್ತದೆ ಎಂದಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷರಾದಂತ ಅನಿಲ್ ಕುಮಾರ್ ಭೂಮ್ ರೆಡ್ಡಿ, ಕಾರಿಯಪ್ಪ ಸೂಚನೆಯ ಮೇರೆಗೆ ದನ ಕಳ್ಳತನ ಪ್ರಕರಣದ ಪತ್ತೆಗೆ ಇಳಿಯಲಾಗಿತ್ತು ಎಂದು ಹೇಳಿದ್ದಾರೆ.
ಸಾಗರ ಡಿವೈಎಸ್ಪಿ ಗೋಪಾಲ ಕೃಷ್ಣ ಟಿ ನಾಯಕ್ ಮಾರ್ಗದರ್ಶನದಲ್ಲಿ, ಕಾರ್ಗಲ್ ವೃತ್ತ ಪೊಲೀಸ್ ಇಸ್ ಪೆಕ್ಟರ್ ಸಂತೋಷ್ ಶೆಟ್ಟಿ, ಪಿಎಸ್‌ಐ ಯಲ್ಲಪ್ಪ ಟಿ ಹಿರೇಗಣ್ಣನ್ನನವರ್, ನಾಗರಾಜ ಟಿ ಎಂ ನೇತೃತ್ವದಲ್ಲಿ ಸಾಗರಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂಧಿಗಳಾದ ಹೆಚ್.ಸಿ.66 ಸನಾವುಲ್ಲಾ, ಹೆಚ್.ಸಿ-299 ಶೇಕ್ ಫೈರೋಜ್, ಸಿಪಿಸಿ 1553 ವಿಕಾಸ್, ಸಿಪಿಸಿ- 1361 ರವಿಕುಮಾರ್ ಸಿಪಿಸಿ 1660 ಕೃಷ್ಣಮೂರ್ತಿ, ಸಿಪಿಸಿ-1691 ವಿಶ್ವನಾಥ, ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು ಎಂದಿದ್ದಾರೆ.
ದಿನಾಂಕ:08/11/2024 ರಂದು ಈ ತಂಡವು ಆರೋಪಿಗಳಾದ ಮೊಹಮ್ಮದ್ ಸಲ್ಮಾನ್ ತಂದೆ ಮೊಹಮ್ಮದ್ ಅಮ್ಮದ್ (19) ಹಾಗೂ ಮೊಹಮ್ಮದ್ ಶಾಹಿದ್ ತಂದೆ ಮೊಹಮ್ಮದ್ ಮುಶೀರ್ (25) ಅವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಸುಮಾರು 10,00,000/ರೂ ಮೌಲ್ಯದ ಟಯೋಟಾ ಫಾರ್ಚುನರ್ ಕಾರನ್ನು ಜಪ್ತಿ ಮಾಡಲಾಗಿದೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಗಳ್ನು ಬಂಧಿಸಲು ಯಶಸ್ವಿಯಾದ ತಂಡಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಜನತೆ ಗಮನಕ್ಕೆ: ನ.10ರಂದು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut