ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘದಿಂದ ಜೂ.17ರಂದು ವಾರ್ಷಿಕ ಮಹಾಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಸಭೆಯಲ್ಲೇ ನೋಟ್ ಬುಕ್ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಕೂಡ ನಡೆಯಲಿದೆ.
ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ನಾಗರಾಜ್ ಆರ್ ಜಲಗುಂಜಿ ಅವರು, 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ದಿನಾಂಕ 17-06-2024ರಂದು ನಡೆಸಲು ನಿಗದಿ ಪಡಿಸಲಾಗಿದೆ. ಸಾಗರದ ಮಾಧವ ಮಂಗಲ ಸಭಾ ಭವನದಲ್ಲಿ ಸಭೆ ನಡೆಸಲು ನಿಗದಿ ಪಡಿಸಲಾಗಿದೆ ಎಂದರು.
ಈ ಮಹಾಸಭೆಯ ಕಾರ್ಯಕ್ರಮವನ್ನು ಉಡುಪಿಯ ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿಯ ನಾಡೋಜ ಡಾ.ಜಿ ಶಂಕರ್ ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದಂತ ಜಯ ಸಿ ಕೋಟ್ಯಾನ್ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಜೂನ್.17ರ ಸಂಘದ ಸಭೆಯ ವೇಳೆಯಲ್ಲಿ 2024-25ನೇ ಸಾಲಿನಲ್ಲಿ ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ಸಮುದಾಯದ ಎಲ್ಲರೂ ತಪ್ಪದೇ ಭಾಗವಹಿಸುವಂತೆ ಮನವಿ ಮಾಡಿದರು.
ಅಂದಹಾಗೇ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘವು ಸುಸಜ್ಜಿತ ಸಭಾ ಭವನ ನಿರ್ಮಿಸೋ ಕೆಲಸ ಮಾಡಿದೆ. ಸಾರ್ವಜನಿಕ ಸೇವೆಗಾಗಿ ಅಂಬ್ಯುಲೆನ್ ಒದಗಿಸಿದೆ. ಅಲ್ಲದೇ ಸಾಗರ ಉಪ ವಿಭಾಗ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಿದೆ.
ಕ್ರೀಡಾಪಟುಗಳಿಗೆ ಸಹಾಯಧನ, ಅಂತ್ಯ ಸಂಸ್ಕಾರಕ್ಕೆ ಸಹಾಯಧನ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರ್ಥಿಕ ನೆರವು ನೀಡಿದೆ. ಜೊತೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿ, ಅನೇಕ ರೋಗಿಗಳಿಗೆ ಸೂಕ್ತ ಕಾಲದಲ್ಲಿ ರಕ್ತ ದೊರೆಯುವಂತ ಕೆಲಸ ಮಾಡಿದೆ.
ಸಾಗರ ತಾಲ್ಲೂಕು ಮೊಗವೀರ ಸಮಾವೇಶ ಕೂಡ ನಡೆಸಿದ್ದು, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದೆ. ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನೋಟ್ ಬುಕ್ ವಿತರಣೆ ಮಾಡುವುದು ಸೇರಿದಂತೆ ವಿವಿಧ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವಂತದ್ದು ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘವಾಗಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಮೊಗವೀರ, ಜಿ.ಕೃಷ್ಣಪ್ಪ, ದಿನೇಶ್ ಎಸ್ ಎನ್ ನಗರ, ಬಿ.ಜಿ ಕೃಷ್ಣ, ಸುರೇಶ್ ಹೆಗ್ಗೋಡು ಹಾಜರಿದ್ದರು.
ವರದಿ: ಉಮೇಶ್ ಮೊಗವೀರ, ಸಾಗರ
‘ಸಿಎಂ ಸಿದ್ಧರಾಮಯ್ಯ’ ಜಾರಿಗೊಳಿಸಿದ್ದ ‘ಯೋಜನೆ’ಯೇ ಈಗ ಸ್ಥಗಿತ: ‘ಪುನರ್ ಪ್ರಾರಂಭ’ಕ್ಕೆ ಆಗ್ರಹ | CM Siddaramaiah
‘ಯುವಕರ ಕನಸುಗಳ ಮೇಲೆ ದಾಳಿ’: ನೀಟ್-ಯುಜಿ ವಿವಾದದ ಮಧ್ಯೆ ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ