ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ. ಇನ್ನೂ ಅಧ್ಯಕ್ಷರು, ರಾಜ್ಯ ಪರಿಷತ್ ಸ್ಥಾನದ ಅಂತಿಮ ಕಣದಲ್ಲಿ ಐವರು ಅಭ್ಯರ್ಥಿಗಳಿದ್ದಾರೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಾಗರ ತಾಲ್ಲೂಕು ಶಾಖೆಯ ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಇಂದು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಅಧ್ಯಕ್ಷರ ಸ್ಥಾನದಲ್ಲಿ ಅಂತಿಮ ಕಣದಲ್ಲಿ ಸುರೇಶ್.ಎಸ್.ಕೆ ಹಾಗೂ ಸಂತೋಷ್ ಕುಮಾರ್.ಎನ್ ಇದ್ದಾರೆ. ಇನ್ನುಳಿದಂತ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಾಸ್ ಪಡೆದಿರುವುದಾಗಿ ತಿಳಿಸಿದ್ದಾರೆ.
ಇನ್ನೂ ರಾಜ್ಯ ಪರಿಷತ್ ಸ್ಥಾನಗಳಿಗೆ ಅಂತಿಮ ಕಣದಲ್ಲಿ ದೇವೇಂದ್ರಪ್ಪ.ಕೆ, ನಾಗರಾಜ್.ಕೆ ಹಾಗೂ ಮಂಜುನಾಥ ಎಂ.ಎಸ್ ಇದ್ದಾರೆ. ಖಜಾಂಚಿಯಾಗಿ ಅವಿರೋಧವಾಗಿ ಸಹದೇವ್ ಎಸ್ ಬಡಿಗೇರ್ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನದ ಅಂತಿಮ ಕಣದಲ್ಲಿರುವಂತ ಸುರೇಶ್ ಎಸ್ ಕೆ ಹಾಗೂ ಸಂತೋಷ್ ಕುಮಾರ್ ಎನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿಂದೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅರಣ್ಯ ಇಲಾಖೆಯ ಅಧ್ಯಕ್ಷರಾಗಿದ್ದಂತ ಸಂತೋಷ್ ಕುಮಾರ್.ಎನ್ ಬಗ್ಗೆ ಉತ್ತಮ ಒಲವನ್ನು ಚುನಾಯಿತ ಪ್ರತಿನಿಧಿಗಳು ಹೊಂದಿದ್ದಾರೆ. ಹೋರಾಟದ ಹಿನ್ನಲೆಯೊಂದಿಗೆ ಸರ್ಕಾರಿ ನೌಕರರ ಪರ ಧ್ವನಿ ಎತ್ತಿ, ಅವರ ಹಲವು ಬೇಡಿಕೆಗಳ ಈಡೇರಿಕೆಗೆ ಸಂತೋಷ್ ಕುಮಾರ್.ಎನ್ ಗಟ್ಟಿ ಧ್ವನಿಯಾಗಿ ನಿಂತಿದ್ದರು. ಎನ್ ಪಿಎಸ್ ರದ್ದು, ಒಪಿಎಸ್ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಿದ್ದರು. ನೌಕರರ ಇತರೆ ಬೇಡಿಕೆ ಈಡೇರಿಸಲು ಶ್ರಮ ವಹಿಸಿದ್ದರು. ಹೀಗಾಗಿಯೇ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಪರ ಒಲವನ್ನು ಹೆಚ್ಚು ಚುನಾಯಿತ ಸದಸ್ಯರು ತೋರಿರೋದಾಗಿ ಹೇಳಲಾಗುತ್ತಿದೆ.
ಇನ್ನೂ ರಾಜ್ಯ ಪರಿಷತ್ ಸ್ಥಾನದ ಕಣದಲ್ಲಿರುವಂತ ದೇವೇಂದ್ರಪ್ಪ.ಕೆ ಅವರು ಶಿಕ್ಷಕರ ಬೇಕು ಬೇಡಗಳನ್ನು ಅರಿತವರಾಗಿದ್ದಾರೆ. ಈ ಕಾರಣದಿಂದಲೇ ಅತಿ ಹೆಚ್ಚು ಶಿಕ್ಷಕರ ಮತಗಳನ್ನು ಪಡೆದು ಗೆಲುವು ಸಾದಿಸಿದಂತವರಾಗಿದ್ದಾರೆ. ಶಿಕ್ಷಕರ ಸಮುದಾಯ ಹಾಗೂ ಇತರೆ ಕಷ್ಟಗಳ ಬಗ್ಗೆ ಪ್ರತಿಸ್ಪಂದಿಸು ನಿಲುವ ತಳೆದಿರುವಂತ ದೇವೇಂದ್ರಪ್ಪ.ಕೆ ಅವರು, ರಾಜ್ಯ ಪರಿಷತ್ತಿಗೆ ಆಯ್ಕೆಯಾಗುವ ವಿಶ್ವಾಸವಿದೆ ಎಂದೇ ಹೇಳಲಾಗುತ್ತಿದೆ. ಆ ಬಗ್ಗೆ ನವೆಂಬರ್.16ರಂದು ಮತದಾನದ ಬಳಿಕ ಪ್ರಕಟಗೊಳ್ಳುವಂತ ಫಲಿತಾಂಶದಿಂದ ಖಚಿತ ಮಾಹಿತಿ ಹೊರ ಬೀಳಲಿದೆ. ಅಲ್ಲಿಯವರೆಗೆ ಕಾದು ನೋಡಬೇಕಿದೆ.
BREAKING: ರಾಜ್ಯ ಸರ್ಕಾರದಿಂದ ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯಲ್ಲಿನ ಅಕ್ರಮಗಳ ಕುರಿತು ತನಿಖೆಗೆ ಆದೇಶ
ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ