ಶಿವಮೊಗ್ಗ: ಇಂದು ಜಿಲ್ಲೆಯ ಸಾಗರ ನಗರದ ಗಣಪತಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ನೇಮಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಸಾಗರ ನಗರಸಭೆ ಸದಸ್ಯೆ ಮಧುಮಾಲತಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸಾಗರ ನಗರದಲ್ಲಿರುವಂತ ಶ್ರೀ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ಸದಸ್ಯರ ಚುನಾವಣೆ ಇಂದು ನಡೆಯಿತು. ಇಂದಿನ ಚುನಾವಣೆಯಲ್ಲಿ 1500 ಷೇರುದಾರರು ತಮ್ಮ ಮತವನ್ನು ಚಲಾಯಿಸಿದರು.
ಇಂದಿನ ಚುನಾವಣೆಯಲ್ಲಿ ಕ್ರಮಸಂಖ್ಯೆ 20, ಮಹಿಳಾ ಮೀಸಲು ವರ್ಗದಿಂದ ನಗರಸಭೆ ಸದಸ್ಯೆ ಮಧು ಮಾಲತಿ ಸ್ಪರ್ಧಿಸಿದ್ದರು. ಅವರು ಬರೋಬ್ಬರಿ 539 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಗಣಪತಿ ಬ್ಯಾಂಕ್ ಷೇರುದಾರರ ಹಿತಕಾಯುವ ಉದ್ದೇಶ, ಬ್ಯಾಂಕ್ ಅಭಿವೃದ್ಧಿಯ ಪಣದೊಂದಿಗೆ ನಗರಸಭೆ ಸದಸ್ಯೆ ಮಧುಮಾಲತಿ ಕಣಕ್ಕೆ ಇಳಿದಿದ್ದರು. ಅವರಿಗೆ ಮತದಾರರು ಒಲವು ತೋರಿ, ಹೆಚ್ಚು ಮತಗಳನ್ನು ಚಲಾಯಿಸುವ ಮೂಲಕ, ವಿಜಯದ ಸರಮಾಲೆ ಧರಿಸುವಂತೆ ಮಾಡಿದ್ದಾರೆ. ಇಂತಹ ಗಣಪತಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತ ನಗರಸಭೆ ಸದಸ್ಯೆ ಮಧುಮಾಲತಿ ಅವರಿಗೆ ಕನ್ನಡ ನ್ಯೂ ನೌ ಸಂಸ್ಥೆಯಿಂದಲೂ ಅಭಿನಂದನೆ, ಶುಭಾಶಯವನ್ನು ತಿಳಿಸುತ್ತಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಡಿ.31ರ ‘ಸಾರಿಗೆ ಮುಷ್ಕರ’ ಹಿಂಪಡೆದ ‘KSRTC ಜಂಟಿ ಕ್ರಿಯಾ ಸಮಿತಿ’ | KSRTC Employees Strike
ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ
ಅಫ್ಘಾನ್ ತಾಲಿಬಾನ್ ಪಡೆಗಳ ಗುಂಡಿನ ದಾಳಿ: ಪಾಕ್ ಸೈನಿಕ ಸಾವು, 11 ಮಂದಿಗೆ ಗಾಯ