ಶಿವಮೊಗ್ಗ: ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಮ್ಮ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ, ಡಿಸಿಎಂ ಅವರ ಅನುದಾನದಡಿ ಈಗಾಗಲೇ 100 ಕೋಟಿ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರು. ಈಗ ಮುಂದುವರೆದು ಸಾಗರ, ಹೊಸನಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದ್ದಾರೆ. ಸುಮಾರು 1 ಕೋಟಿಯನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಮಂಜೂರಾತಿಯನ್ನು ಪಡೆದಿದ್ದಾರೆ.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ 2025-26ನೇ ಸಾಲಿನ ಉಳಿಕೆ ಅನುದಾನದಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಗರ, ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ಕ್ರಿಯಾ ಯೋಜನೆಗೆ ಅನುಮತಿಯನ್ನು ಸರ್ಕಾರದಿಂದ ನೀಡಲಾಗಿದೆ.
1 ಕೋಟಿ ಅನುದಾನದಡಿ ಯಾವೆಲ್ಲ ಕಾಮಗಾರಿ ಕೈಗೊಳ್ಳಲಾಗುತ್ತದೆ ಗೊತ್ತಾ? ಇಲ್ಲಿದೆ ಪಟ್ಟಿ
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶಿಫಾರಸ್ಸಿನಂತೆ, ರಾಜ್ಯ ಸರ್ಕಾರವು 2025-26ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಉಳಿಕೆ ಅನುದಾನದಡಿಯಲ್ಲಿ ಈ ಕೆಳಕಂಡ ಅಭಿವೃದ್ಧಿ ಕಾಮಗಾರಿಗಳನ್ನು 1 ಕೋಟಿ ಅನುದಾನದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.
- 5 ಲಕ್ಷ ಅನುದಾನದಡಿ ಸಾಗರ ತಾಲ್ಲೂಕಿನ ಬೇಳೂರು ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ
- 10 ಲಕ್ಷ ಅನುದಾನದಡಿ ಸಾಗರ ನಗರ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹತ್ತಿರ ಮತ್ತೊಂದು ಬಸ್ ನಿಲ್ದಾಣ ಕಾಮಗಾರಿ
- 5 ಲಕ್ಷ ಅನುದಾನದಡಿ ಸಾಗರ ತಾಲ್ಲೂಕು ಹುಲಿದೇವರಬನ ಸರ್ಕಲ್ ಬಳಿ ಬಸ್ ನಿಲ್ದಾಣ.
- 5 ಲಕ್ಷ ಅನುದಾನದಡಿ ಸಾಗರ ತಾಲ್ಲೂಕು ಬಾಳೂರು ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ
- 5 ಲಕ್ಷದಲ್ಲಿ ಹೊಸನಗರ ತಾಲ್ಲೂಕು ಮಾರುತಿಪುರ ಗ್ರಾಮ ಪಂಚಾಯ್ತಿಯ ಮಾರುತಿಪುರ ಹೈಸ್ಕೂಲ್ ಮುಂಭಾಗ ಬಸ್ ನಿಲ್ದಾಣ
- 5 ಲಕ್ಷದಲ್ಲಿ ಸಾಗರ ತಾಲ್ಲೂಕಿನ ಕೆಳದಿ ಗ್ರಾಮ ಪಂಚಾಯ್ತಿಯ ಹಳ್ಳಿಬೈಲು ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ
- 5 ಲಕ್ಷದಲ್ಲಿ ಹೊಸನಗರ ತಾಲ್ಲೂಕು ನಿಟ್ಟೂರು ಗ್ರಾಮದ ಬಳಿ ಬಸ್ ನಿಲ್ದಾಣ ನಿರ್ಮಾಣ
- 5 ಲಕ್ಷದಲ್ಲಿ ಸಾಗರ ತಾಲ್ಲೂಕು ತ್ಯಾಗರ್ತಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ
- 5 ಲಕ್ಷದಲ್ಲಿ ಸಾಗರ ತಾಲ್ಲೂಕಿನ ಎಡೇಹಳ್ಳಿ ಗ್ರಾಮ ಪಂಚಾಯ್ತಿಯ ಎಡೇಹಳ್ಳಿ ಸರ್ಕಲ್ ಬಳಿ ಬಸ್ ನಿಲ್ದಾಣ ನಿರ್ಮಾಣ
- 5 ಲಕ್ಷದಲ್ಲಿ ಸಾಗರ ತಾಲ್ಲೂಕು ಮಾಸೂರು ಪಂಚಾಯ್ತಿಯ ಮಾಸೂರು ಸರ್ಕಲ್ ಬಳಿ ಮುಂದುವರೆದ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ
- 5 ಲಕ್ಷದಲ್ಲಿ ಸಾಗರ ತಾಲ್ಲೂಕು ಕೊಂಜವಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ
- 5 ಲಕ್ಷದಲ್ಲಿ ಹೊಸನಗರ ತಾಲ್ಲೂಕು ಹರ್ತಾಳು ಗ್ರಾಮದ ಬಳಿ ಬಸ್ ನಿಲ್ದಾಣ ನಿರ್ಮಾಣ
- 10 ಲಕ್ಷದಲ್ಲಿ ಹೊಸನಗರ ತಾಲ್ಲೂಕು ನಿಟ್ಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ಥಿ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿ.
- 8 ಲಕ್ಷದಲ್ಲಿ ಹೊಸನಗರ ತಾಲ್ಲೂಕು ರಿಪ್ಪನಪೇಟೆ ಒಕ್ಕಲಿಗರ ಸಮುದಾಯ ಭವನ ಕಟ್ಟ ಮುಂದುವರೆದ ಕಾಮಗಾರಿ.
- 6 ಲಕ್ಷದಲ್ಲಿ ಹೊಸನಗರ ತಾಲ್ಲೂಕು ಆರ್ಯ ಈಡಿಗ ಸಂಘದ ಸಮುದಾಯ ಭವನ ಕಟ್ಟಡದ ಮುಂದುವರೆದ ಕಾಮಗಾರಿ.
- 5 ಲಕ್ಷದಲ್ಲಿ ಹೊಸನಗರ ತಾಲ್ಲೂಕು ನಗರ ಹೋಬಳಿ ಹೊಸೂರು-ಸಂಪೆಕಟ್ಟೆ ಸಂಸೆಕೈ ಗ್ರಾಮದ ಕಾಲೋನಿ ಅಭಿವೃದ್ಧಿ ಕಾಮಗಾರಿ.
- 8 ಲಕ್ಷ ಮೊತ್ತದಲ್ಲಿ ಸಾಗರ ಟೌನ್ ಒಕ್ಕಲಿಗರ ಸಂಘದ ವತಿಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಕಟ್ಟಡದ ಮುಂದುವರೆದ ಕಾಮಗಾರಿ.
ಒಟ್ಟಾರೆಯಾಗಿ 1 ಕೋಟಿ ವೆಚ್ಚದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರವು ಸಾಗರ, ಹೊಸನಗರ ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ಮಂಜೂರಾತಿ ನೀಡಿದೆ. ಈ ಮೂಲಕ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ನಾಂದಿ ಹಾಡಿದಂತೆ ಆಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..