ಬೆಂಗಳೂರು: ಸಾಗರ ಜಿಲ್ಲೆಯನ್ನಾಗಿ ಮಾಡುವಂತೆ ಆಗ್ರಹಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ಕೆಲ ತಿಂಗಳಿನಿಂದ ಹೋರಾಟ ನಡೆಸಲಾಗುತ್ತಿದೆ. ಶಾಸಕ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ಮಾಡಿ, ಜಿಲ್ಲೆ ರಚನೆಗೆ ಮನವಿ ಮಾಡಿದರು.
ಬೆಂಗಳೂರಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿವಾಸದಲ್ಲಿ ಶಾಸಕ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರು ಭೇಟಿಯಾದರು. ಸಾಗರ ಜಿಲ್ಲೆಯನ್ನು ಮಾಡುವಂತೆ ಶಿಫಾರಸ್ಸು ಕಳುಹಿಸುವಂತೆ ಹೋರಾಟ ಸಮಿತಿಯ ಸಂಚಾಲಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸಾಗರ ಜಿಲ್ಲಾ ಹೋರಾಟ ಸಮಿತಿಯವರ ಮನವಿಗೆ ಸಿಎಂ ಸಿದ್ಧರಾಮಯ್ಯ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದ ಸಾಗರವನ್ನು ಜಿಲ್ಲೆ ಮಾಡೋದಕ್ಕೆ ಉತ್ಸುಕತೆಯನ್ನು ತೋರಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಹೋರಾಟ ಸಮಿತಿಗೆ ಸಾಗರ ಜಿಲ್ಲೆ ರಚನೆಗೆ ಸೂಕ್ತ ಕ್ರಮ ವಹಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವೇಳೆ ಸಾಗರ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕರಾದಂತ ತೀ.ನಾ.ಶ್ರೀನಿವಾಸ್, ಮಾಜಿ ಎಂಎಲ್ಸಿ ಪ್ರಪುಲ್ಲಾ ಮಧುಕರ್, ಮಾಜಿ ಪುರಸಭಾ ಅಧ್ಯಕ್ಷರಾದಂತ ನಂದಾ ಗೊಜನೂರು, ಹಿತಕರ್ ಜೈನ್, ಸುಂದರ್ ಸಿಂಗ್, ನಾಗರಾಜ್ ಗುಡ್ಡೇಮನೆ, ನಾಗರಾಜ್ ಎನ್.ಹೆಚ್, ಮಂಜಪ್ಪ, ತುಕಾರಾಂ ಶಿರಿವಾಳ, ಧರ್ಮೇಂದ್ರ, ಸೇರಿದಂತೆ ಇತರರು ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








