Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಗೊರಕೆ’ ಸಾಮಾನ್ಯ ಸಮಸ್ಯೆಯಲ್ಲ, ಇದು ದೇಹಕ್ಕೆ ಅಪಾಯದ ಸೂಚನೆ, ಇವುಗಳನ್ನ ತಿನ್ನಿ!

02/02/2026 10:04 PM

BREAKING : ವ್ಯಾಪಾರ ಉದ್ವಿಗ್ನತೆ ನಡುವೆ ‘ಪ್ರಧಾನಿ ಮೋದಿ’ ಜೊತೆ ಅಮೆರಿಕಾ ಅಧ್ಯಕ್ಷ ‘ಟ್ರಂಪ್’ ಮಾತುಕತೆ!

02/02/2026 9:35 PM

ನಿಮ್ಗೆ ಹೊಟ್ಟೆ ನೋವು ಆಗುತ್ತಾ.? ಜಾಗರೂಕರಾಗಿರಿ, ಇದು ಅಪಾಯಕಾರಿ ಕಾಯಿಲೆಯಾಗಿರ್ಬೋದು!

02/02/2026 9:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ನಾಳೆ ‘ಸಾಗರ ಜಿಲ್ಲೆ’ಗೆ ಒತ್ತಾಯಿಸಿ ‘ಸಾಗರ ಬಂದ್’: ವಿವಿಧ ‘ಸಂಘಟನೆ’ಗಳು ಬೆಂಬಲ
KARNATAKA

BREAKING: ನಾಳೆ ‘ಸಾಗರ ಜಿಲ್ಲೆ’ಗೆ ಒತ್ತಾಯಿಸಿ ‘ಸಾಗರ ಬಂದ್’: ವಿವಿಧ ‘ಸಂಘಟನೆ’ಗಳು ಬೆಂಬಲ

By kannadanewsnow0916/12/2025 3:33 PM

ಶಿವಮೊಗ್ಗ: ಸಾಗರವನ್ನು ಜಿಲ್ಲೆಯಾಗಿ ಮಾಡಬೇಕು ಎಂಬುದಾಗಿ ಆಗ್ರಹಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ನಾಳೆ ಸಾಗರ ಬಂದ್ ಗೆ ಕರೆ ನೀಡಲಾಗಿದೆ. ನಾಳೆಯ ಸಾಗರ ಬಂದ್ ಗೆ ವಿವಿಧ ಸಂಘಟನೆಗಳಿಂದ ಬೆಂಬಲ ಸೂಚಿಸಲಾಗಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿ ಮಾಹಿತಿ ನೀಡಿದ್ದು, ಸಾಗರ ಜಿಲ್ಲೆ ಘೋಷಣೆ ಮಾಡಬೇಕು ಎಂಬುದಾಗಿ ಒತ್ತಾಯಿಸಿ ಕಳೆದ 12 ವರ್ಷಗಳಿಂದಲೂ ಸರ್ಕಾರಕ್ಕೆ ಮನವಿ, ಆಗ್ರಹ ಮಾಡಿದರೂ ಸರ್ಕಾರ, ಜನಪ್ರತಿನಿಧಿಗಳು, ಯಾವುದೇ ರೀತಿ ಸ್ಪಂದನೆ ಮಾಡಿಲ್ಲ ಎಂಬುದಾಗಿ ಹೇಳಿದೆ.

ಸಾಗರ ಪಟ್ಟಣವು ಐತಿಹಾಸಿಕ ನಗರವಾಗಿದ್ದು, ಸಾಗರ ತಾಲ್ಲೂಕಿನ ಕೆಳದಿ ಸಂಸ್ಥಾನವು ಕ್ರಿ.ಶ 1499ರಿಂದ 1763ರವರೆಗೆ ಸುಮಾರು 265 ವರ್ಷಗ ಕಾಲ ಅರಸರಾದ ಚೌಡಪ್ಪ ನಾಯಕರಿಂದ ಸದಾಶಿವ ನಾಯಕರ, ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮಾಜಿ ಒಟ್ಟು 19 ರಾಜಮಹಾರಾಜರು 13 ಜಿಲ್ಲೆಗಳನ್ನು ಒಳಗೊಂಡು ಆಡಳಿತ ನಡೆಸಿದ ಇತಿಹಾಸವಿದೆ. ಸಾಗರ ಪ್ರಾಂತ್ಯವು ಕೆಳದಿ ಸಂಸ್ಥಾನ ಆಡಳಿತ ನಡೆಸಿದ ಐತಿಹಾಸಿಕ ಸಾಕ್ಷಿಯಾಗಿದೆ ಎಂದು ತಿಳಿಸಿದೆ.

ಸಾಗರವು ಉಪ ವಿಭಾಗ ಕಚೇರಿ ಹೊಂದಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಕೃಷಿ ವಿವಿ, ಸಾರಿಗೆ ಉಪ ವಿಭಾಗ, ಜಿಎಸ್ಟಿ ಕಚೇರಿ, ಮೆಸ್ಕಾಂ ಉಪ ವಿಭಾಗ, ಇಂಜಿನಿಯರ್ ಉಪ ವಿಭಾಗ, ತೂಕ ಮತ್ತು ಅಳತೆ ಕಚೇರಿ ಸೇರಿದಂತೆ ವಿವಿಧ ಕಚೇರಿಗಳು ಸಾಗರದಲ್ಲಿವೆ ಎಂದು ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಸಾಗರ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಕೆಲವು ಕಾಣದ ಕೈಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿವೆ. ಸಾಗರ ನಗರ ವ್ಯಾಪ್ತಿಯಲ್ಲಿ ತ್ಯಾಗರ್ತಿ ಕ್ರಾಸ್ ನಿಂದ ಎಲ್ ಬಿ ಕಾಲೇಜಿನವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಟೆಂಡರ್ ಅವಧಿ ಮುಗಿದು 4 ವರ್ಷವಾದರೂ ಮುಗಿದಿಲ್ಲ ಎಂದಿದೆ.

ಸಾಗರದ ರಾಜ್ಯಕ್ಕೆ ಬೆಳಕು ನೀಡಲು ಅಣೆಕಟ್ಟು ನಿರ್ಮಾಣ ಮಾಡಲು ರೈತರು ತ್ಯಾಗ ಮಾಡಿದ ಕ್ಷೇತ್ರವಾಗಿದೆ.  ಆದರೇ ಮುಳುಗಡೆ ಸಂತ್ರಸ್ತರಿಗೆ ಇದುವರೆಗೆ ನ್ಯಾಯ ಸಿಕ್ಕಿಲ್ಲ. ಗ್ರಾಮೀಣ ಪ್ರದೇಶದಲ್ಲಿ ರೈತರ ಕೃಷಿ ಭೂಮಿಯನ್ನು ಅರಣ್ಯ ಎಂದು ಘೋಷಿಸುತ್ತಿದ್ದಾರೆ. ನಷ್ಟ ಹೊಂದಿದ ರೈತರಿಗೆ ವಿಮೆ ಸಿಕ್ಕಿಲ್ಲ. ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಹೇಳಿದೆ.

ಸಾಗರ ಜಿಲ್ಲೆ ಘೋಷಣೆ ಮಾಡಲು ಒತ್ತಾಯಿಸಿ ಮನವಿ, ಆಗ್ರಹ ನೀಡಿದ್ದನ್ನು ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ. ಸಾಗರ ಜಿಲ್ಲೆ ಘೋಷಣೆಯಾದರೇ 170 ಕಿಲೋಮೀಟರ್ ದೂರದಿಂದ ಓಡಾಡುವ ಜನರಿಗೆ ಸರ್ಕಾರವೇ ಜನರ ಬಳಿಗೆ ಬಂದಂತೆ ಆಗಲಿದೆ. ರಾಜ್ಯದಲ್ಲೇ ಅತೀ ಹೆಚ್ಚು ಪ್ರವಾಸಿ ತಾಣ ಹೊಂದಿರುವ ಸಾಗರವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಕಾರಣವಾಗಲಿದೆ. ಮಲೆನಾಡಿನ ಗುಡ್ಡಗಾಡು ಜನರಿಗೆ, ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶ, ಜೀವನ ಮಟ್ಟವೂ ಹೆಚ್ಚಲಿದೆ ಎಂದಿದೆ.

ಈ ಎಲ್ಲಾ ಕಾರಣದಿಂದಾಗಿ ಡಿಸೆಂಬರ್.17ರ ನಾಳೆ ಸಾಗರ ಜಿಲ್ಲೆಗೆ ಒತ್ತಾಯಿಸಿ ಸಾಗರ ಬಂದ್ ಮಾಡಲಾಗುತ್ತಿದೆ. ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಬಂದ್ ಗೆ ಬೆಂಬಲಿಸಬೇಕು. ಈಗಾಗಲೇ ಹೋಟೆಲ್ ಮಾಲೀಕರ ಸಂಘ, ಸಾಗರ ನಗರ ಬಿಜೆಪಿ, ಟೌನ್ ಫಾಸ್ಟ್ ಪುಡ್ ಸಂಘ, ವಕೀಲರ ಸಂಘ, ರೈತ ಸಂಘಟನೆಗಳು ನಾಳೆಯ ಸಾಗರ ಬಂದ್ ಗೆ ಬೆಂಬಲ ನೀಡಿದ್ದಾವೆ. ಆ ಮೂಲಕ ಸಾಗರ ಜಿಲ್ಲೆ ಹೋರಾಟಕ್ಕೆ ಒತ್ತಾಯಿಸಲಾಗುತ್ತಿದೆ ಎಂಬುದಾಗಿ ಸಾಗರ ಜಿಲ್ಲಾ ಹೋರಾಟ ಸಮಿತಿಯು ತಿಳಿಸಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…

BREAKING: ರಾಜ್ಯದ ಹಲವು ‘DC ಕಚೇರಿ’ಗಳಿಗೆ ‘ಬಾಂಬ್ ಬೆದರಿಕೆ ಇ-ಮೇಲ್’

BREAKING : ಈ ಬಾರಿ ಬೆಂಗಳೂರಲ್ಲೆ ‘IPL’ ಪಂದ್ಯ ಉದ್ಘಾಟನೆ : ‘KSCA’ ಅಧ್ಯಕ್ಷ ವೆಂಕಟೇಶ್ ಪ್ರಸಾದ್

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 11 ತಹಶೀಲ್ದಾರ್ ವರ್ಗಾವಣೆ | Tahashildar Transfer

02/02/2026 8:31 PM1 Min Read

BREAKING: ರಾಜ್ಯದ 3,862 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್ ರೂಂ’ ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ

02/02/2026 8:13 PM2 Mins Read

ಫೆ.5ರಿಂದ ಪಿಜಿ ವೈದ್ಯಕೀಯಕ್ಕೆ ಆಪ್ಷನ್ಸ್ ಎಂಟ್ರಿ ಆರಂಭ: ಕೆಇಎ

02/02/2026 8:12 PM1 Min Read
Recent News

‘ಗೊರಕೆ’ ಸಾಮಾನ್ಯ ಸಮಸ್ಯೆಯಲ್ಲ, ಇದು ದೇಹಕ್ಕೆ ಅಪಾಯದ ಸೂಚನೆ, ಇವುಗಳನ್ನ ತಿನ್ನಿ!

02/02/2026 10:04 PM

BREAKING : ವ್ಯಾಪಾರ ಉದ್ವಿಗ್ನತೆ ನಡುವೆ ‘ಪ್ರಧಾನಿ ಮೋದಿ’ ಜೊತೆ ಅಮೆರಿಕಾ ಅಧ್ಯಕ್ಷ ‘ಟ್ರಂಪ್’ ಮಾತುಕತೆ!

02/02/2026 9:35 PM

ನಿಮ್ಗೆ ಹೊಟ್ಟೆ ನೋವು ಆಗುತ್ತಾ.? ಜಾಗರೂಕರಾಗಿರಿ, ಇದು ಅಪಾಯಕಾರಿ ಕಾಯಿಲೆಯಾಗಿರ್ಬೋದು!

02/02/2026 9:28 PM

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 11 ತಹಶೀಲ್ದಾರ್ ವರ್ಗಾವಣೆ | Tahashildar Transfer

02/02/2026 8:31 PM
State News
KARNATAKA

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 11 ತಹಶೀಲ್ದಾರ್ ವರ್ಗಾವಣೆ | Tahashildar Transfer

By kannadanewsnow0902/02/2026 8:31 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 11 ಮಂದಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ…

BREAKING: ರಾಜ್ಯದ 3,862 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್ ರೂಂ’ ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ

02/02/2026 8:13 PM

ಫೆ.5ರಿಂದ ಪಿಜಿ ವೈದ್ಯಕೀಯಕ್ಕೆ ಆಪ್ಷನ್ಸ್ ಎಂಟ್ರಿ ಆರಂಭ: ಕೆಇಎ

02/02/2026 8:12 PM

JOB ALERT: 10ನೇ ಕ್ಲಾಸ್ ಪಾಸ್ ಆದವರೇ ಗಮನಿಸಿ: ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

02/02/2026 6:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.