Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ 56,432 ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಎಂದ ಸಿಎಂ

06/03/2026 6:15 PM

ನಾಳೆ ಬೆಂಗಳೂರಲ್ಲಿ ‘ಏಡ್ಸ್ ನಿಯಂತ್ರಣ’ ಸಂಬಂಧ ‘ಸುರಕ್ಷಾ ಸಂಕಲ್ಪ ಕಾರ್ಯಾಗಾರ’ ಆಯೋಜನೆ

06/03/2026 6:09 PM

13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ: ಆಂಧ್ರ ಸರ್ಕಾರದಿಂದ ಮಹತ್ವದ ಘೋಷಣೆ

06/03/2026 5:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಬೆಂಗಳೂರಲ್ಲಿ ‘ಏಡ್ಸ್ ನಿಯಂತ್ರಣ’ ಸಂಬಂಧ ‘ಸುರಕ್ಷಾ ಸಂಕಲ್ಪ ಕಾರ್ಯಾಗಾರ’ ಆಯೋಜನೆ
KARNATAKA

ನಾಳೆ ಬೆಂಗಳೂರಲ್ಲಿ ‘ಏಡ್ಸ್ ನಿಯಂತ್ರಣ’ ಸಂಬಂಧ ‘ಸುರಕ್ಷಾ ಸಂಕಲ್ಪ ಕಾರ್ಯಾಗಾರ’ ಆಯೋಜನೆ

By kannadanewsnow0906/03/2026 6:09 PM

ಬೆಂಗಳೂರು: ದೇಶಾದ್ಯಂತ ಅನುಷ್ಠಾನಗೊಳ್ಳುತ್ತಿರುವ ‘ಮಿಷನ್ ಏಡ್ಸ್ ಸುರಕ್ಷಾ’ ಯೋಜನೆಯ ಭಾಗವಾಗಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು (NACO) ಬೆಂಗಳೂರಿನಲ್ಲಿ ನಾಳೆ ‘ಸುರಕ್ಷಾ ಸಂಕಲ್ಪ ಕಾರ್ಯಗಾರ’ವನ್ನು ಆಯೋಜಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ NACO ಮಹಾನಿರ್ದೇಶಕರಾದ ಡಾ.ರಾಕೇಶ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಗಾರ ಆಯೋಜಿಸಲಾಗಿದೆ.

ಪ್ರಮುಖ ಉದ್ದೇಶಗಳು: 1ನೇ ಡಿಸೆಂಬರ್‍ 2027 ರ ವೇಳೆಗೆ ಎಚ್‌ಐವಿ ಸಾಂಕ್ರಾಮಿಕದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಮತ್ತು 2030ರ ವೇಳೆಗೆ ಏಡ್ಸ್ ಅನ್ನು ಸಾರ್ವಜನಿಕ ಆರೋಗ್ಯದ ಭೀತಿಯಿಂದ ಮುಕ್ತಗೊಳಿಸುವ ವಿಶ್ವಸಂಸ್ಥೆಯ ಗುರಿಯನ್ನು ತಲುಪಲು ಭಾರತವು ಹೊಂದಿರುವ ಅಂತಾರಾಷ್ಟ್ರೀಯ ಬದ್ಧತೆಯ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಕಾರ್ಯಗಾರವು ಅತ್ಯಂತ ನಿರ್ಣಾಯಕವಾಗಿದೆ.

ದೇಶಾದ್ಯಂತ ಆಯೋಜಿಸಲಾಗುತ್ತಿರುವ 12 ಪ್ರಾದೇಶಿಕ ಕಾರ್ಯಾಗಾರಗಳ ಪೈಕಿ ಬೆಂಗಳೂರಿನ ಆಯೋಜಿಸುತ್ತಿರುವ ಈ ಕಾರ್ಯಕ್ರಮವು ಸರಣಿಯ ಭಾಗವಾಗಿದೆ. ಜಿಲ್ಲಾ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯನ್ನು ಬಲಪಡಿಸುವುದು ಇದರ ಕಾರ್ಯಗಾರದ ಉದ್ದೇಶವಾಗಿದೆ. ಈ ಯೋಜನೆಯಡಿ ದೇಶದ 18 ರಾಜ್ಯಗಳ 219 ಜಿಲ್ಲೆಗಳನ್ನು ಆದ್ಯತೆಯ ಜಿಲ್ಲೆಗಳನ್ನಾಗಿ ಗುರುತಿಸಲಾಗಿದ್ದು, ಕ್ಷಿಪ್ರ ಕ್ರಮಕ್ಕಾಗಿ ಗುರುತಿಸಲಾಗಿದೆ.

ಕರ್ನಾಟಕದ ಹಿನ್ನಲೆ: ಕರ್ನಾಟಕದಲ್ಲಿ ಪ್ರಸ್ತುತ ವಯಸ್ಕರಲ್ಲಿ ಎಚ್‌ಐವಿ ಹರಡುವಿಕೆಯ ಪ್ರಮಾಣ ಶೇಕಡ 0.44 ರಷ್ಟಿದ್ದು, ಅಂದಾಜು 2,91,348 ಜನರು ಎಚ್‌ಐವಿಯೊಂದಿಗೆ ಜೀವಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಸೋಂಕಿನ ಹರಡುವಿಕೆ ಮತ್ತು ಸಾಂದ್ರತೆಯ ಆಧಾರದ ಮೇಲೆ ರಾಜ್ಯದ 27 ಜಿಲ್ಲೆಗಳನ್ನು ಆದ್ಯತೆಯ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಮೈಸೂರು, ರಾಯಚೂರು, ತುಮಕೂರು, ಚಾಮರಾಜನಗರ, ಕೋಲಾರ, ಮಂಡ್ಯ, ಗದಗ, ಕೊಪ್ಪಳ, ಚಿತ್ರದುರ್ಗ, ಕಲಬುರಗಿ, ಧಾರವಾಡ, ಹಾವೇರಿ, ವಿಜಯನಗರ, ಚಿಕ್ಕಬಳ್ಳಾಪುರ, ಹಾಸನ, ಯಾದಗಿರಿ, ಉಡುಪಿ, ಬೀದರ್, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿವೆ.

ಈ ಕಾರ್ಯಾಗಾರದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರದಾನ ಕಾರ್ಯದರ್ಶಿಗಳಾದ  ಹರ್ಷ್ ಗುಪ್ತಾ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಕರ್ನಾಟಕ ವಿಭಾಗದ ಮಿಷನ್ ನಿರ್ದೇಶಕರು ಮತ್ತು ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಸೊಸೈಟಿಯ (KSAPS) ಯೋಜನಾ ನಿರ್ದೇಶಕರು ಭಾಗವಹಿಸಲಿದ್ದಾರೆ. ಜೊತೆಗೆ, ಈ 27 ಆದ್ಯತೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು ಮತ್ತು NGO ಪಾಲುದಾರರು ಭಾಗವಹಿಸಿ, ಕಾರ್ಯಕ್ರಮದ ಪ್ರಗತಿ ಹಾಗೂ ಅನುಷ್ಠಾನದಲ್ಲಿರುವ ಸವಾಲುಗಳ ಬಗ್ಗೆ ಚರ್ಚಿಸಲಿದ್ದಾರೆ.

ಪ್ರತಿಯೊಂದು ಜಿಲ್ಲೆಗೆ ಪೂರಕವಾದ ನಿರ್ದಿಷ್ಟ ಕಾರ್ಯಯೋಜನೆಗಳನ್ನು ರೂಪಿಸುವ ಗುರಿಯನ್ನು ಕೇಂದ್ರ ಸರ್ಕಾರವು ಹೊಂದಿದ್ದು, ಎಲ್ಲಾ ಜಿಲ್ಲೆಗಳನ್ನು “ಸುರಕ್ಷಿತ್+” ಮಾಡುವ ಮೂಲಕ ಭಾರತವನ್ನು ಏಡ್ಸ್ ಮುಕ್ತವಾಗಿಸುವ ಸಂಕಲ್ಪವನ್ನು ಹೊಂದಲಾಗಿದೆ.

ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ: ಆಂಧ್ರ ಸರ್ಕಾರದಿಂದ ಮಹತ್ವದ ಘೋಷಣೆ

Share. Facebook Twitter LinkedIn WhatsApp Email

Related Posts

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ 56,432 ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಎಂದ ಸಿಎಂ

06/03/2026 6:15 PM4 Mins Read

ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

06/03/2026 5:37 PM1 Min Read

ಕರ್ನಾಟಕ ಬಜೆಟ್ 2026-27: ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ಸುದ್ದಿಗೋಷ್ಠಿಯ ಪ್ರಮುಖ ಹೈಲೈಟ್ಸ್

06/03/2026 5:10 PM6 Mins Read
Recent News

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ 56,432 ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಎಂದ ಸಿಎಂ

06/03/2026 6:15 PM

ನಾಳೆ ಬೆಂಗಳೂರಲ್ಲಿ ‘ಏಡ್ಸ್ ನಿಯಂತ್ರಣ’ ಸಂಬಂಧ ‘ಸುರಕ್ಷಾ ಸಂಕಲ್ಪ ಕಾರ್ಯಾಗಾರ’ ಆಯೋಜನೆ

06/03/2026 6:09 PM

13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ: ಆಂಧ್ರ ಸರ್ಕಾರದಿಂದ ಮಹತ್ವದ ಘೋಷಣೆ

06/03/2026 5:41 PM

ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

06/03/2026 5:37 PM
State News
KARNATAKA

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ 56,432 ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಎಂದ ಸಿಎಂ

By kannadanewsnow0906/03/2026 6:15 PM KARNATAKA 4 Mins Read

ಬೆಂಗಳೂರು; 2026-27 ನೇ ಆಯವ್ಯಯದಲ್ಲಿ ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವ ಜೊತೆಗೆ ವಿತ್ತೀಯ ಶಿಸ್ತನ್ನೂ ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

ನಾಳೆ ಬೆಂಗಳೂರಲ್ಲಿ ‘ಏಡ್ಸ್ ನಿಯಂತ್ರಣ’ ಸಂಬಂಧ ‘ಸುರಕ್ಷಾ ಸಂಕಲ್ಪ ಕಾರ್ಯಾಗಾರ’ ಆಯೋಜನೆ

06/03/2026 6:09 PM

ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

06/03/2026 5:37 PM

ಕರ್ನಾಟಕ ಬಜೆಟ್ 2026-27: ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ಸುದ್ದಿಗೋಷ್ಠಿಯ ಪ್ರಮುಖ ಹೈಲೈಟ್ಸ್

06/03/2026 5:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.