Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ಯಾವಾಗ ನಡೆಯಬೇಕು.? ಊಟಕ್ಕೆ ಮೊದ್ಲಾ ಅಥವಾ ನಂತರವೇ.? ತಜ್ಞರು ಹೇಳುವುದೇನು ಗೊತ್ತಾ?

12/07/2025 10:07 PM

ಅಮಂಡಾ ಅನಿಸಿಮೋವಾ ಅವರನ್ನು ಸೋಲಿಸಿ ಇಗಾ ಸ್ವಿಯಾಟೆಕ್ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲುವು

12/07/2025 10:04 PM

ಸೆ.1ರಿಂದ ಅ.1ರವರೆಗೆ ರಾಜ್ಯಾದ್ಯಂತ `ಬಸವ ಸಂಸ್ಕೃತಿ ಅಭಿಯಾನ’: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

12/07/2025 9:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?
KARNATAKA

BIG NEWS: ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?

By kannadanewsnow0918/06/2025 6:20 AM

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಸದಾನಂದ ಎಂಬುವರು ಅನುಮಾನ್ಪದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೊಂದು ಕೊಲೆ ಎಂಬುದಾಗಿ ಅವರ ಸಂಬಂಧಿ ರಶ್ಮಿ ಎಂಬುವರೇ ದೂರು ನೀಡಿದ್ದರು. ಆ ದೂರಿನಲ್ಲಿ ತನ್ನ ಪತಿ ವೆಂಕಟೇಶ್ ಆಚಾರಿ ಹಾಗೂ ಇತರರು ಸೇರಿ ಕೊಲೆ ಮಾಡಿರೋದಾಗಿ ಆರೋಪಿಸಿದ್ದರು. ಆ ಬಗ್ಗೆ ಹಿರಿಯ ಪತ್ರಕರ್ತ ಹಿತಕರ್ ಜೈನ್ ಅವರ ಸಾರಥ್ಯದ ಸುವರ್ಣಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ. ಅದರ ಯಥಾವತ್ತು ಈ ಕೆಳಗೆ ಪ್ರಕಟಿಸಲಾಗಿದೆ ನೀವು ಓದಿ.

ಸಾಗರದ ಶಿವಪ್ಪನಾಯಕ ನಗರದ ನಿವಾಸಿ ಸದಾನಂದ ಆಚಾರಿ ಕೊಲೆ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಗಳ ಸಹಿತ ಗ್ರಾಮಲೆಕ್ಕಿಗನ ವಿರುದ್ಧ ಸಾಗರ ಪಟ್ಟಣ ಪೊಲೀಸ್‌ ಠಾಣೆ ಪಿ.ಎಸ್.ಐ ನಾಗರಾಜ ಟಿ.ಎಂ.ಅವರು ಎಫ್‌ಐಆರ್ ದಾಖಲಿಸಿ ಕಾನೂನು ಜರುಗಿಸಿದ್ದಾರೆ.

ಕಳೆದ ಭಾನುವಾರ ದಿನಾಂಕ 15-06-2025ರಂದು ಸುಮಾರು 7 ಗಂಟೆಯ ಸಮಯದಲ್ಲಿ ಸಾಗರ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಸದಾನಂದ ಆಚಾರಿ ಎಂಬ 46 ವರ್ಷದ ನನ್ನ ಮಾವನನ್ನು ಯಾರೋ ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ ಎಂದು ರಶ್ಮಿ ಕೆ ಎನ್ ಅವರು ನೀಡಿದ ದೂರಿನ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೊಲೆಗೆ ಕಾರಣವನ್ನು ದೂರಿನಲ್ಲಿ ತಿಳಿಸಿರುವಂತ ರಶ್ಮಿಯವರು ದಿನಾಂಕ 14-06-2025ರಂದು ಶನಿವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ರಶ್ಮಿಯವರಿಗೆ ಇವರ ಪತಿ ವೆಂಕಟೇಶ್ ಆಚಾರಿ ಪೋನ್ ಮಾಡಿ ನನ್ನ ಸ್ನೇಹಿತರಾದ ರವೀಂದ್ರ ಕಾಮತ್ ಮತ್ತು ಪ್ರದೀಪ್ ಇವರುಗಳ ಸಹಾಯದಿದಂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ವಿಷಯವನ್ನು ಸದಾನಂದ ಆಚಾರಿಯ ಕೊಲೆ ಪ್ರಕರಣ ದೂರಿನಲ್ಲಿ ವಿವರಿಸಿದ್ದಾರೆ.

ಈ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 103(1) ಹಾಗೂ 238, 3(5)ರಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಎ.1 ಆರೋಪಿಯಾಗಿ ಸಾಗರದ ವಿಜಯನಗರದ ವೆಂಕಟೇಶ್ ಆಚಾರಿ, ಎ2 ಆರೋಪಿಯಾಗಿ ಸಾಗರ ಎಸ್ ಎನ್ ನಗರದ ರವೀಂದ್ರ ಕಾಮತ್ ಹಾಗೂ ಎ.3 ಆರೋಪಿಯಾಗಿ ವಿಜಯನಗರದ ಪ್ರದೀಪ್ ಎಂಬುವರ ವಿರುದ್ಧ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಕೊಲೆ ಆರೋಪಿಗಳನ್ನು ಪೊಲೀಸರು ಬಿಟ್ಟು ಕಳುಹಿಸಿದ್ದು ಯಾಕೆ?

ಕೊಲೆ ಪ್ರಕರಣಗಳಲ್ಲಿ ಬಹುತೇಕ ಕೊಲೆಯಾಗಿರುವ ಕುಟುಂಬದವರಿಂದ ಕೊಲೆಯಾಗಿರಬಹುದು ಎಂದು ಅನುಮಾನಾಸ್ಪದ ದೂರು ಪಡೆದು ಎಫ್ಐಆರ್ ಮಾಡುವುದು ಸಹಜವಾಗಿರುತ್ತದೆ. ಆದರೇ ವಿಜಯನಗರದ ರಸ್ತೆ ಅಂಚಿನಲ್ಲಿ ಕೊಲೆಯಾಗಿ ಬಿದ್ದಿರುವ ಸದಾನಂದ ಆಚಾರಿ ಅವರನ್ನು ವೆಂಕಟೇಶ್ ಆಚಾರಿ, ರವೀಂದ್ರ ಕಾಮತ್ ಮತ್ತು ಪ್ರದೀಪ್ ಅವರು ಕೊಲೆ ಮಾಡಿರುತ್ತಾರೆಂದು ಅಧಿಕೃತ ಗಣಕೀಕೃತ ದೂರು ನೀಡಿರುವಾಗ ಜೂನ್.15ರಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಈ ಮೂವರು ಆರೋಪಿಗಳನ್ನು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡು, ಕೇವಲ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಿಟ್ಟು ಮನೆಗೆ ಕಳುಹಿಸಿರುವ ಕುರಿತು ಸಾಗರ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಜೂನ್.14ರಂದು ಕೊಲೆ ಬೆದರಿಕೆ ಹಾಕಿರುವ ಆರೋಪಿ ಗಳು ಜೂನ್.15ರಂದು ಕೊಲೆ ಆರೋಪದಲ್ಲಿ ಸಿಲುಕಿ ಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ಕಳೆದ 15 ದಿನಗಳ ಹಿಂದೆ ಮೇ.31ರಂದು ಸಾಗರದ ಸ್ವಾತಿ ಹೋಟೆಲ್ ನಲ್ಲಿ ಚಹಾ ಕುಡಿಯುತ್ತಿರುವಾಗ ಪತ್ರಕರ್ತ ಮಹೇಶ್ ಹೆಗಡೆ ವಿರುದ್ಧ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕುರಿತು ಪತ್ರಕರ್ತರು ಸಾಗರ ನಗರ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಲ್ಲದೇ, ಆರೋಪಿಗಳಿಂದ ಪ್ರತಿ ದೂರು ಸ್ವೀಕರಿಸಿ ಬೈಸಿಕೊಂಡಿರುವ ಪತ್ರಕರ್ತನ ವಿರುದ್ಧ ಪ್ರತಿ ದೂರು ದಾಖಲಿಸಲು ಮುಂದಾಗಿ ಸುಮಾರು ಮೂರು ತಾಸು ಪತ್ರಕರ್ತರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಂಡಿದ್ದರು.

ಸದರಿ ಪ್ರಕರಣದಲ್ಲಿ ಪತ್ರಕರ್ತರನ್ನು ನಿಂದಿಸಿದ ಕೊಲೆ ಬೆದರಿಕೆ ಹಾಕಿರುವ ಆರೋಪಿಗಳನ್ನು ರಾಜಕೀಯ, ಆರ್ಥಿಕ ಒತ್ತಡಕ್ಕೆ ಮಣಿದು ಠಾಣೆ ಬೇಲ್ ಆಧಾರದಲ್ಲಿ ಬಿಡುಗಡೆಗೊಳಿಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಆದರೇ ಪೊಲೀಸರು ಸದಾನಂದ ಆಚಾರಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿ ದಿನವಿಡಿ ಇದ್ದ ಆರೋಪಿಗಳನ್ನು ರಾತ್ರಿ ವೇಳೆ ಬಿಡುಗಡೆ ಮಾಡಿ ಕಳುಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ. ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆಯಲು ಪೊಲೀಸರು ಅವಕಾಶ ಕಲ್ಪಿಸಿದ್ದಾರೆ ಎಂದು ಜನ ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ.

ಬ್ರಾಹ್ಮಣ ಶಾಪಕ್ಕೆ ಗುರಿಯಾದ ರಿಯಲ್ ಎಸ್ಟೇಟ್ ದಂಧೆಕೋರರರು!

ವೃತ್ತಿಯಲ್ಲಿ ಪರ್ತಕರ್ತ, ಸಹಕಾರಿ ಬ್ಯಾಂಕೊಂದರ ಮಾಜಿ ಮ್ಯಾನೇಜರ್,ಬಡ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಶಿಕ್ಷಣ ಪಡೆದು ಪಟ್ಟಣ ಸೇರಿ ಪತ್ರಿಕೆಗಳ ವರದಿಗಾರನಾಗಿ ಅಕ್ರಮಗಳ ವಿರುದ್ಧ ಸರಣಿ ಲೇಖನಗಳ ಬರೆಯುವ ಮೂಲಕ ಸಾಗರ ತಾಲ್ಲೂಕು ವರದಿಗಾರನಾಗಿ ರಾಜ್ಯಮಟ್ಟದ ಪತ್ರಿಕೆಯಲ್ಲಿ ದಾಖಲೆಗಳ ಸಹಿತ ಸಮಗ್ರ ವರದಿ ಮೂಲಕವೇ ಅಕ್ರಮಗಳ ಬಯಲಿಗೆ ಎಳೆಯುವ ವೃತ್ತಿನಿಷ್ಠೆ ಪ್ರದರ್ಶಿಸಿರುವುದು ಕೆಲವು ಅಕ್ರಮ ದಂಧೆಕೋರ ರಿಯಲ್ ಎಸ್ಟೇಟ್ ಕುಳಗಳ ನಿದ್ದೆಗೆಡಿಸಿರುವುದು ಕೊಲೆ ಬೆದರಿಕೆಗಳ ಎದುರಿಸುವಂತಾಯಿತು.

ರಿಯಲ್ ಎಸ್ಟೇಟ್ ದಂದೆಕೋರ ಖದೀಮರ ನಿಂದನೆಗೆ ಬೇಸತ್ತು ಪೊಲೀಸ್ ದೂರು ನೀಡಿದರೂ ಮತ್ತಷ್ಟು ಭಯದ ವಾತವರಣ ಸೃಷ್ಟಿಯಾದಾಗ ಹಗಲು ರಾತ್ರಿ ನಿದ್ರೆ ಮಾಡದೆ ನೊಂದು ದೇವರ ಮನೆಯಲ್ಲಿ ಸಂದ್ಯಾವಂದನೆ ಜಪ ತಪದ ಮೊರೆ ಹೋದ ಪತ್ರಕರ್ತ ಮಹೇಶ್ ಹೆಗಡೆ ಎಂಬ ಬ್ರಾಹ್ಮಣನ ಶಾಪದ ಫಲ ಕೇವಲ 15 ದಿನಗಳ ಅವಧಿಯಲ್ಲಿ ರಿಯಲ್ ಎಸ್ಟೇಟ್ ದಂಧೆಕೋರ ಖದೀಮರ ಮೇಲೆ ಕೊಲೆ ಪ್ರಕರಣ ದಾಖಲಾಗುವಂತಾಗಿರುವುದು ವಿಶೇಷ ಚರ್ಚೆಗೆ ಗ್ರಾಸವೊದಗಿಸಿದೆ.

ಮಚ್ಚಿನೇಟಿನಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆದ ಕಾಮತ್‌ ಗ್ಯಾಂಗ್.!

ಕಳೆದ ಒಂದೆರಡು ತಿಂಗಳ ಹಿಂದೆ ಹೆಣ್ಣಿನ ಸಹವಾಸಕ್ಕೆ ಸೊರಬಕ್ಕೆ ಎಂಟ್ರಿಕೊಟ್ಟಿರುವ ಕಾಮತ್ ಮತ್ತು ಅವನ ಗ್ಯಾಂಗ್ ಆಂಟಿ ಪ್ರೀತ್ಸೆ.. ಪ್ರೀತ್ಸೆ… ಎಂದು ಆಂಟಿ ಸಂಗ ಮಾಡಿ ಲಲ್ಲೆ ಹೊಡೆದು ಸಿಳ್ಳೆ ಹಾಕುತ್ತಿದ್ದಾಗ ಆಂಟಿಯೊಬ್ಬಳ ಪುತ್ರನಿಗೆ ವಿಷಯ ತಿಳಿದು ಮಚ್ಚು ಲಾಂಗ್ ಹಿಡಿದು ಕಾಮತ್‌ ಗ್ಯಾಂಗ್‌ನ್ನು ಬೆನ್ನಟ್ಟಿದ್ದಾಗ ಎದ್ದೇವೋ..ಬಿದ್ದೇವೋ ಎಂದು ವಾಹನ ಹತ್ತಿಕೊಂಡು ಶರವೇಗದಲ್ಲಿ ಸಾಗರದ ದಿಕ್ಕಿಗೆ ಬಂದು ಉಳವಿ ಸಮೀಪ ಅಡ್ಡ ರಸ್ತೆಯಲ್ಲಿ ವಾಹನ ತಿರುಗಿಸಿ ತಪ್ಪಿಸಿಕೊಂಡು ಜೀವ ಉಳಿದರೇ ಬೆಲ್ಲ ಬೇಡಿ ತಿನ್ನಬಹುದು ಎಂಬ ಗಾದೆಯಂತೆ ನಿಟ್ಟುಸಿರು ಬಿಟ್ಟಿದ್ದಾರೆ.

ಅಂದು ಸೊರಬದ ಆಂಟಿ ಪುತ್ರನ ಗ್ಯಾಂಗ್‌ ಕೈಗೆ ಸಿಲುಕಿದ್ದರೆ ಕೈ ಕಾಲುಗಳ ಸಹಿತ ಜೀವಕ್ಕೆ ಸಂಚಕಾರ ಬರುತ್ತಿತ್ತು.ನಿಯತ್ತಿನ ದುಡುಮೆಯಾಗಿದ್ದರೆ ನಿಯತ್ತಿನ ವಹಿವಾಟು ನಡೆಯುತ್ತಿತ್ತು.ಅಕ್ರಮ ದಾಖಲೆಗಳ ಸೃಷ್ಟಿಸಿ ಅಕ್ರಮ ದಂದೆ ನಡೆಸುವ ಅಕ್ರಮದ ಹಣ ಸಂಪಾದನೆಯ ಮತ್ತಿನ ಪರಿಣಾಮ ಆಂಟಿ ಗೀಂಟಿ ಅಂತ ಹಣದ ಗತ್ತಿನಲ್ಲಿ ಗುಮ್ಮೆನ್ನುವ ಸಿನಿಮಿಯ ಮಾದರಿಯ ಘಟನೆಗಳ ಸುತ್ತಲೂ ತನಿಖೆ ನಡೆಯಬೇಕಿದೆ.

ರವೀಂದ್ರ ಕಾಮತ್‌ನ ಜೀವ ಅಪಾಯದಲ್ಲಿದೆಯಂತೆ..!

ನೀತಿ ನಿಯಮಗಳಿಂದ ಬದುಕುವುದೇ ಕಷ್ಟ. ಹೀಗಿರುವಾಗ ಅಕ್ರಮ ದಂದೆಯ ಹಿನ್ನಲೆಯ ಹಣದ ಮತ್ತಿನಲ್ಲಿ ಶೋಕಿ ಜೀವನದ ಜೊತೆಗೆ ಅಕ್ರಮ ಸಂಬಂದಗಳ ಬದುಕು ಅದೆಷ್ಟು ಸುರಕ್ಷಿತವಾಗಿರಲು ಸಾಧ್ಯ..?ಸೊರಬದ ಒಂದು ಆಂಟಿಯ ಕಥೆ ಉಲ್ಲೇಖಿಸಿದ್ದೇವೆ.ಅಂತಹ ಹತ್ತಾರು ಪ್ರಕರಣಗಳಲ್ಲಿ ನೊಂದ ಕುಟುಂಬದ ಹುಲಿಗಳು ಕಾಮತ್‌ನ ಗ್ಯಾಂಗಿನ ಬೇಟೆಗಾಗಿ ಹಸಿದು ಹಪಹಪಿಸುತ್ತಿವೆ ಎಂಬ ಮಾಹಿತಿ ಪೊಲೀಸರಿಗೂ ಗೊತ್ತಿರದೇ ಇರಲು ಸಾಧ್ಯವೇ..?

ತಾನೇ ಅಪಾಯದಲ್ಲಿದ್ದರೂ ಪತ್ರಕರ್ತ ಮಹೇಶ್ ಹೆಗಡೆ ಮೇಲೆ ಕಾರು ಹತ್ತಿಸುತ್ತೇನೆ ಎಂದು ಧಮಕಿ ಹಾಕುತ್ತಿರುವುದು ಪೊಲೀಸರಿಗೆ ಗೊತ್ತಿಲ್ಲವೇ? ಗೊತ್ತಿದ್ದರೂ ರಾಜಕೀಯ ಹಾಗೂ ಆರ್ಥಿಕ ಶಕ್ತಿ ಆಡಳಿತ ಹಾಗೂ ರಕ್ಷಣಾ ಇಲಾಖೆಯ ನಿಯತ್ತು ಕರ್ತವ್ಯ ನಿಷ್ಠೆಗೆ ಕಡಿವಾಣ ಹಾಕುತ್ತಿದೆ ಎಂಬ ಚರ್ಚೆ ವ್ಯಾಪಕವಾಗಿದೆ.

ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ನೀಡಲು ಸಿದ್ಧತೆ..!

ಈಗಾಗಲೇ ಕಂದಾಯ ಇಲಾಖೆಯ ನೌಕರ ವೆಂಕಟೇಶ್ ಹಾಗೂ ಕಾಮತ್,ಪ್ರದೀಪ್ ವಿರುದ್ಧ ಎಫ್‌ಐಆರ್ ಆದರೂ ಆರೋಪಿಗಳಿಗೆ ಕೇವಲ ನೋಟೀಸ್ ನೀಡಿ ಕರೆದಾಗ ಠಾಣೆಗೆ ಬರಬೇಕು ಎಂಬ ಷರತ್ತು ನೀಡಿ ಸಹಿ ಪಡೆದು ಕಳುಹಿಸಿರುವುದು ಅಚ್ಚರಿಯ ಸಂಗತಿಯಾಗಿದೆ.ಜೊತೆಗೆ ದೊಡ್ಡಮಟ್ಟದ ಪ್ರಭಾವ ಮತ್ತು ಆರ್ಥಿಕ ಆಕರ್ಷಣೆ ಹಿನ್ನಲೆಯಲ್ಲಿ ಇನ್ನಿಬ್ಬರು ಅಮಾಯಕರುಗಳನ್ನು ಹಿಡಿದು ಒಬ್ಬನ ವಿರುದ್ಧ ಕೊಲೆ ಕುಣಿಕೆ ಏರ್ಪಡಿಸಿ ಚಾರ್ಜ್‌ ಸೀಟ್ ಹಾಕುವಾಗ ಈಗಿನ ಆರೋಪಿಗಳ ಖುಲಾಸೆ ಮಾಡುವ ಕುರಿತು ಮಾತುಕಥೆಯಾಗಿದೆ ಎಂಬ ಬಲವಾದ ಚರ್ಚೆ ಸಾಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಪೊಲೀಸ್ ಇಲಾಖೆಯ ಗೌರವಕ್ಕೂ ಧಕ್ಕೆಯಾಗುತ್ತಿದೆ ಎನ್ನಲಾಗಿದೆ.

ಶಿವಮೊಗ್ಗ ಎಸ್ಪಿ ಸಾಹೇಬರೇ ಕೊಲೆ ಪ್ರಕರಣ ಪ್ರಾಮಾಣಿಕ ತನಿಖೆಯಾಗಲಿ

ಸಾಗರದ ಸದಾನಂದ ಆಚಾರಿ ಕೊಲೆ ಪ್ರಕರಣ ತಿಪ್ಪೆಸಾರಿಸಬಾರದು.ರಿಯಲ್ ಎಸ್ಟೇಟ್ ದಂದೆಕೋರರು ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕನ ಬೆನ್ನಿಗೆ ಯಾಕೆ ನಿಲ್ಲುತ್ತಾರೆ ಎಂಬ ಕುರಿತು ಬಹುತೇಕ ಸಾರ್ವಜನಿಕರಿಗೂ ಹಾಗೂ ಅಧಿಕಾರಿ,ರಾಜಕಾರಣಿಗಳಿಗೂ ಗೊತ್ತಿರುವ ಗುಟ್ಟುನಕಲಿ ದಾಖಲೆ ಸೃಷ್ಟಿಯಲ್ಲಿ ಸಂಪೂರ್ಣ ಸಹಕಾರ ನೀಡಿದ ಕಂದಾಯ ನಿರೀಕ್ಷಕ ವೆಂಕಟೇಶ್ ಆಚಾರಿಯ ಋಣ ತೀರಿಸಲು ಸದಾನಂದನ ಕೊಲೆಯಂತಹ ಹೀನ ಕೃತ್ಯಕ್ಕೂ ಇಳಿದುಬಿಟ್ಟರೇ..?ಇಂತಹ ಪ್ರಕರಣವನ್ನು ರಾಜ್ಯ ಸರ್ಕಾರದ ಗೃಹ ಇಲಾಖೆಯು ಗಂಬೀರವಾಗಿ ಪರಿಗಣಿಸುವ ಮೂಲಕ ಸಾಗರದಂತಹ ಸಜ್ಜನರ ಕ್ಷೇತ್ರದ ಗೌರವ ಉಳಿಸಬೇಕಿದೆ.

Share. Facebook Twitter LinkedIn WhatsApp Email

Related Posts

ಸೆ.1ರಿಂದ ಅ.1ರವರೆಗೆ ರಾಜ್ಯಾದ್ಯಂತ `ಬಸವ ಸಂಸ್ಕೃತಿ ಅಭಿಯಾನ’: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

12/07/2025 9:55 PM2 Mins Read

BIG NEWS: ಮಹಾರಾಷ್ಟ್ರದಲ್ಲಿ ಕೂಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ 843 ಮಹಿಳೆಯರು ಗರ್ಭಕೋಶ ತೆಗೆಸಿದ್ದಾರೆ: ಸಚಿವ ಸಂತೋಷ್ ಲಾಡ್

12/07/2025 9:10 PM1 Min Read

ನವೆಂಬರ್ ನಲ್ಲಿ ಕ್ರಾಂತಿ- ಮಹಾಕ್ರಾಂತಿ ಏನೇನು ಆಗಲಿದೆಯೋ ಕಾದುನೋಡಿ: ಬಿವೈ ವಿಜಯೇಂದ್ರ

12/07/2025 9:04 PM2 Mins Read
Recent News

ನೀವು ಯಾವಾಗ ನಡೆಯಬೇಕು.? ಊಟಕ್ಕೆ ಮೊದ್ಲಾ ಅಥವಾ ನಂತರವೇ.? ತಜ್ಞರು ಹೇಳುವುದೇನು ಗೊತ್ತಾ?

12/07/2025 10:07 PM

ಅಮಂಡಾ ಅನಿಸಿಮೋವಾ ಅವರನ್ನು ಸೋಲಿಸಿ ಇಗಾ ಸ್ವಿಯಾಟೆಕ್ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲುವು

12/07/2025 10:04 PM

ಸೆ.1ರಿಂದ ಅ.1ರವರೆಗೆ ರಾಜ್ಯಾದ್ಯಂತ `ಬಸವ ಸಂಸ್ಕೃತಿ ಅಭಿಯಾನ’: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

12/07/2025 9:55 PM

ನೀವು ಈ ಲಕ್ಷಣಗಳನ್ನ ಅನುಭವಿಸುತ್ತಿದ್ದೀರಾ.? ಇವು ‘ಬ್ರೈನ್ ಸ್ಟ್ರೋಕ್’ನ ಚಿಹ್ನೆಗಳು.. ಹುಷಾರಾಗಿರಿ!

12/07/2025 9:42 PM
State News
KARNATAKA

ಸೆ.1ರಿಂದ ಅ.1ರವರೆಗೆ ರಾಜ್ಯಾದ್ಯಂತ `ಬಸವ ಸಂಸ್ಕೃತಿ ಅಭಿಯಾನ’: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ

By kannadanewsnow0912/07/2025 9:55 PM KARNATAKA 2 Mins Read

ಬೆಂಗಳೂರು: ರಾಜ್ಯ ಸರಕಾರವು ಬಸವಣ್ಣನನ್ನು `ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ…

BIG NEWS: ಮಹಾರಾಷ್ಟ್ರದಲ್ಲಿ ಕೂಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ 843 ಮಹಿಳೆಯರು ಗರ್ಭಕೋಶ ತೆಗೆಸಿದ್ದಾರೆ: ಸಚಿವ ಸಂತೋಷ್ ಲಾಡ್

12/07/2025 9:10 PM

ನವೆಂಬರ್ ನಲ್ಲಿ ಕ್ರಾಂತಿ- ಮಹಾಕ್ರಾಂತಿ ಏನೇನು ಆಗಲಿದೆಯೋ ಕಾದುನೋಡಿ: ಬಿವೈ ವಿಜಯೇಂದ್ರ

12/07/2025 9:04 PM

BREAKING: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಚಾಕೊಲೇಟ್ ಆಸೆ ತೋರಿಸಿ ಬಾಲಕಿ ಮೇಲೆ ಕಾಮುಕ ಅತ್ಯಾಚಾರ

12/07/2025 8:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.