ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಸದಾನಂದ ಆಚಾರಿ ಎನ್ನುವವರ ಕೊಲೆ ಪ್ರಕರಣ ನಡೆದಿತ್ತು. ಈ ಸಂಬಂಧ ಈಗಾಗಲೇ ವಿಎ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿ ರವೀಂದ್ರ ಕಾಮತ್ ಹಾಗೂ ಪ್ರದೀಪ್ ವಿರುದ್ಧ ಕೇಸ್ ದಾಖಲಾಗಿತ್ತು, ಈ ಬೆನ್ನಲ್ಲೇ ವೆಂಕಟೇಶ್ ಆಚಾರಿ ಮೊದಲ ಪತ್ನಿ ವಿರುದ್ಧವೂ FIR ದಾಖಲಾಗಿದೆ.
ಈ ಕುರಿತಂತೆ ವೆಂಕಟೇಶ್ ಆಚಾರಿಯ ಅವರ 2ನೇ ಪತ್ನಿ ರಶ್ಮಿ ದಿನಾಂಕ 16-06-2025ರಂದು ಸಂಜೆ 6.30ರ ವೇಳೆಗೆ ಸಾಗರ ಪೇಟೆ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅದರಲ್ಲಿ ದಿನಾಂಕ 15-06-2025ರಂದು ಸೋದರ ಮಾವ ಸದಾನಂದ ಅವರನ್ನು ಗಂಡ ವೆಂಕಟೇಶ್ ಆಚಾರಿ, ಎಸ್ ಎನ್ ನಗರದ ರವೀಂದ್ರ ಕಾಮತ್ ಮತ್ತು ವಿಜಯನಗರದ ಪ್ರದೀಪ್ ಅವರು ಸೇರಿ ಕೊಲೆ ಮಾಡಿರುತ್ತಾರೆ ದೂರು ದಾಖಲಾಗಿರುತ್ತದೆ ಎಂದಿದ್ದಾರೆ.
ಇನ್ನೂ ದಿನಾಂಕ 16-06-2025ರಂದು ಮಧ್ಯಾಹ್ನ 3 ಗಂಟೆಗೆ ಪಿರ್ಯಾದಿದಾರರಾದ ರಶ್ಮಿ ಸಾಗರ ಟೌನ್ ಹಳೇ ಖಾಸಗಿ ಬಸ್ ನಿಲ್ದಾಣ ಮುಂದೆ ಬಿಹೆಚ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾದಿ ಗಂಡನ ಮೊದಲನೆಯ ಹೆಂಡತಿಯಾದ ಮಂಜುಳಾ ಕೋಂ ವೆಂಕಟೇಶ್ ಆಚಾರಿ, ಚಿತ್ರದುರ್ಗ ವಾಸ ಅವರು ಪಿರ್ಯಾದಿಯನ್ನು ನೋಡಿ, ಹತ್ತಿರ ಹೋಗಿ ಅಡ್ಡ ಹಾಕಿ ಏ ಬೇವರ್ಸಿ ಮುಂಡೆ ನನ್ನ ಗಂಡನ ಮೇಲೆ ಕೇಸು ಕೊಟ್ಟು ಅವರನ್ನು ಹಾಳು ಮಾಡುತ್ತೀಯ. ನಾನು ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತ ಜೀವ ಬೆದರಿಕೆ ಹಾಕಿದ್ದಾರೆ. ಮಂಜುಳಾ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವೆಂಕಟೇಶ್ ಆಚಾರಿ 2ನೇ ಪತ್ನಿ ರಶ್ಮಿ ನೀಡಿದಂತ ದೂರು ಆಧರಿಸಿ ಮೊದಲ ಪತ್ನಿ ಮಂಜುಳಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 126(2), 352, 351(2) ರಡಿ ಎಫ್ಐಆರ್ ದಾಖಲಾಗಿದೆ.
BIG NEWS: ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?
ಜೂನ್.20ರಂದು ಬೆಂಗಳೂರಿನ ಈ ಏರಿಯಾದಲ್ಲಿ ಕರೆಂಟ್ ಇರೋದಿಲ್ಲ | Power Cut