ಮಂಡ್ಯ : ಮದ್ದೂರು ಪಟ್ಟಣದ ಶಿವಪುರದ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದರ ಜತೆಗೆ ಜಿಲ್ಲೆಗೆ ತೃತೀಯ ಹಾಗೂ ಮದ್ದೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಶಾಲೆಯ ವಿದ್ಯಾರ್ಥಿನಿ ಎಸ್.ಖುಷಿ 625 ಕ್ಕೆ 619 ಅಂಕಗಳು ಶೇ. 99.04 ಹಾಗೂ ಗಗನ್ಎಸ್. ಗೌಡ 619 ಅಂಕಗಳನ್ನು ಪಡೆದು ಶೇ. 99.04 ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಮದ್ದೂರು ತಾಲೂಕಿಗೆ ಪ್ರಥಮ ಸ್ಥಾನವನ್ನು ಶಾಲೆಗೆ ತಂದುಕೊಟ್ಟಿದ್ದಾರೆ. ಜತೆಗೆ
ಇಂಪನ ಎಂ.ಕುಮಾರ್ 603, ಎ.ತನ್ವಿಕ 601 ಹಾಗೂ ಡಿ.ಎಸ್.ಧ್ರುವಗೌಡ 600 ಅಂಕಗಳನ್ನು ಪಡೆದು ತೇರ್ಗಡೆಯಾಗುವ ಮೂಲಕ ತಾಲೂಕಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 158 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 154 ವಿದ್ಯಾರ್ಥಿಗಳು ಉತೀರ್ಣರಾಗಿ ಶೇ.98 ರಷ್ಟು ಫಲಿತಾಂಶ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿ 46 , ಪ್ರಥಮ ದರ್ಜೆಯಲ್ಲಿ 70 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಶ್ರೇಣಿಯಲ್ಲಿ 38 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಉತ್ತಮ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಾದ ಗಗನ್ ಎಸ್ ಗೌಡ ಹಾಗೂ ಖುಷಿ ರವರ ಬಗ್ಗೆ ಶಾಲೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ ಹಾಗೂ ಕಾರ್ಯದರ್ಶಿ ಅನಂತೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಸಕ ಹೆಚ್.ಡಿ ರೇವಣ್ಣ ಬಂಧನದಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ: ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
Rain in Bengaluru: ಬೆಂಗಳೂರಲ್ಲಿ ಮತ್ತೆ ವರುಣನ ಆರ್ಭಟ: ‘ಟ್ರಾಫಿಕ್ ಜಾಮ್’ನಿಂದ ವಾಹನ ಸವಾರರು ಪರದಾಟ