Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಾಮಾನ್ಯ ಕಾರ್ಯಕರ್ತರಿಗೆ ಲಕ್; ದಿಗ್ಗಜರನ್ನು ಬದಿಗೊತ್ತಿ ಹೊಸಬರಿಗೆ ಮಣೆ!

05/03/2026 11:58 AM

ಕರ್ನಾಟಕದಲ್ಲಿ `ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ’ಗೆ ಈ ವಿದ್ಯಾರ್ಹತೆ, ಮಾನದಂಡ ಕಡ್ಡಾಯ !

05/03/2026 11:55 AM

ನಿತೀಶ್ ಕುಮಾರ್ ಹಾದಿಗೆ ಸ್ವಪಕ್ಷೀಯರ ಅಡ್ಡಿ? ರಾಜ್ಯಸಭೆ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಬೆಂಬಲಿಗರಿಂದ ಭಾರಿ ಪ್ರತಿಭಟನೆ!

05/03/2026 11:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಸ್.ಬಂಗಾರಪ್ಪ ಹೆಸರಿನ ‘ಬಂಗಾರ ಪ್ರಶಸ್ತಿ’ ಪ್ರಕಟ: ‘ಸಾಹಿತಿ ಕುಂ.ವೀರಭದ್ರಪ್ಪ’ ಸೇರಿ ಮೂವರಿಗೆ ಪ್ರಶಸ್ತಿ
KARNATAKA

ಎಸ್.ಬಂಗಾರಪ್ಪ ಹೆಸರಿನ ‘ಬಂಗಾರ ಪ್ರಶಸ್ತಿ’ ಪ್ರಕಟ: ‘ಸಾಹಿತಿ ಕುಂ.ವೀರಭದ್ರಪ್ಪ’ ಸೇರಿ ಮೂವರಿಗೆ ಪ್ರಶಸ್ತಿ

By kannadanewsnow0921/10/2024 3:29 PM

ಶಿವಮೊಗ್ಗ: ಎಸ್ ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವಂತ ಬಂಗಾರ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾಹಿತಿ ಕುಂ.ವೀರಭದ್ರಪ್ಪ ಸೇರಿದಂತೆ ಮೂವರು ಸಾಧಕರಿಗೆ ಈ ಪ್ರಶಸ್ತಿಯ ಗರಿಮೆ ಸಂದಿದೆ.

ಇಂದು ಪತ್ರಿಕಾ ಪ್ರಕಟಣೆಯಲ್ಲಿ ಎಸ್ ಬಂಗಾರಪ್ಪ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವಿ ನಾಗರಾಜ ಮೂರ್ತಿ ಅವರು ಮಾಹಿತಿ ಹಂಚಿಕೊಂಡಿದ್ದು, ಬಂಗಾರಪ್ಪ ಅವರನ್ನು ಬಿಟ್ಟು ಕರ್ನಾಟಕ ರಾಜಕೀಯ ಚರಿತ್ರೆಯನ್ನು ಊಹಿಸಲು ಸಾಧ್ಯವಿಲ್ಲ, ಅಂತಹ ಚರಿತ್ರೆ ಕರ್ನಾಟಕ ರಾಜಕೀಯ ಚರಿತ್ರೆ ಆಗುವುದೂ ಇಲ್ಲ. ಈ ನಾಡಿನ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಬಂಗಾರಪ್ಪನವರು ಕರ್ನಾಟಕ ಕಂಡ ಬಹುದೊಡ್ಡ ಸಮಾಜವಾದಿ ಚಿಂತಕರು ಮಾತ್ರವಲ್ಲ, ಸಾಂಸ್ಕೃತಿಕ ವಕ್ತಾರರು ಕೂಡ. ಮುಖ್ಯಮಂತ್ರಿಯಾಗಿ ಅವರು ರೂಪಿಸಿದ ನೂರಾರು ಯೋಜನೆಗಳು ಇಂದಿಗೂ ರಾಷ್ಟ್ರಕ್ಕೆ ಮಾದರಿಯಾಗಿವೆ. ಇಂದು ಬಂಗಾರಪ್ಪ ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ, ಅವರು ಬಿಟ್ಟು ಹೋದ ತತ್ವಾದರ್ಶಗಳು ಸದಾ ನಮ್ಮೊಂದಿಗಿವೆ ಎಂದಿದ್ದಾರೆ.

ಪ್ರತಿವರ್ಷ ಬಂಗಾರಪ್ಪ ವಿಚಾರ ವೇದಿಕೆ ಮತ್ತು ಬಂಗಾರಪ್ಪ ಪ್ರತಿಷ್ಠಾನ ಸಂಯುಕ್ತವಾಗಿ ಅವರ ಜನ್ಮ ದಿನಾಚರಣೆಯನ್ನು ಆಯೋಜಿಸುತ್ತಿದೆ. ವಿಚಾರ ಸಂಕಿರಣ, ಬೃಹತ್‌ ಸಮಾರಂಭದ ಜೊತೆಗೆ ಈ ನಾಡಿನ ಅನನ್ಯ ಚೇತನಗಳಿಗೆ ಬಂಗಾರಪ್ಪ ಅವರ ಹೆಸರಿನಲ್ಲಿ “ಬಂಗಾರ” ಪ್ರಶಸ್ತಿ ನೀಡುತ್ತಿದೆ. ಒಂದು ಲಕ್ಷ ರೂಪಾಯಿ ನಗದು ಮತ್ತು ತಾಮ್ರ ಫಲಕದೊಂದಿಗೆ ಪ್ರಶಸ್ತಿ ಪುರಸ್ಕೃತರವನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಮಾಜ ಸೇವಾ ಕ್ಷೇತ್ರದ ಸಾಧಕಿ ಸುಮಂಗಲಿ ಸೇವಾಶ್ರಮದ ಎಚ್.ಜಿ. ಸುಶೀಲಮ್ಮ ಅವರಿಗೆ “ಸೇವಾ ಬಂಗಾರ” ಪ್ರಶಸ್ತಿ ನೀಡಲಾಗುತ್ತಿದೆ. 2024ರ ಸಾಲಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ “ಸಾಹಿತ್ಯ ಬಂಗಾರ” ಪ್ರಶಸ್ತಿ ನೀಡಲಾಗುತ್ತಿದೆ. ರಂಗಭೂಮಿಯಲ್ಲಿನ ಸೇವೆಗಾಗಿ ಗ್ರಾಮೀಣ ರಂಗಭೂಮಿಯ ಪೌರಾಣಿಕ ನಾಟಕದ ಕಲಾವಿದೆ ಪ್ರತಿಭಾ ನಾರಾಯಣ್ ಅವರಿಗೆ “ಕಲಾಬಂಗಾರ” ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮವನ್ನು ಬಂಗಾರಪ್ಪನವರ ಹುಟ್ಟುಹಬ್ಬದ ದಿನವಾದ 26-10-2024ನೇ ಶನಿವಾರದಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಆಯೋಜಿಸಲಾಗಿದೆ.
ಗೃಹಮಂತ್ರಿಗಳಾದ ಡಾ. ಜಿ.ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಚಿವ ಮಧುಬಂಗಾರಪ್ಪ ಮುಖ್ಯ ಅತಿಥಿಗಳಾಗಿರುತ್ತಾರೆ. ವೇದಿಕೆ ಅಧ್ಯಕ್ಷ ವೇಣುಗೋಪಾಲ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING: ‘LAC’ಯಲ್ಲಿ ಗಸ್ತು ಪುನರಾರಂಭಿಸಲು ‘ಭಾರತ-ಚೀನಾ ಒಪ್ಪಿಗೆ’

BREAKING : ಚನ್ನಪಟ್ಟಣಕ್ಕೆ ಡಿಕೆ ಸುರೇಶ್ ಸ್ಪರ್ಧೆ ಖಚಿತ : ಸುಳಿವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್

Share. Facebook Twitter LinkedIn WhatsApp Email

Related Posts

ಕರ್ನಾಟಕದಲ್ಲಿ `ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ’ಗೆ ಈ ವಿದ್ಯಾರ್ಹತೆ, ಮಾನದಂಡ ಕಡ್ಡಾಯ !

05/03/2026 11:55 AM3 Mins Read

ಗದಗದಲ್ಲಿ ಭೀಕರ ಅಪಘಾತ : ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವು, 8 ಜನರಿಗೆ ಗಾಯ!

05/03/2026 11:30 AM1 Min Read

ರಾಜ್ಯದಲ್ಲಿ ಅಮಾನವೀಯ ಘಟನೆ : ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಆಸೆ ತೋರಿಸಿ, ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ!

05/03/2026 11:19 AM1 Min Read
Recent News

ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಾಮಾನ್ಯ ಕಾರ್ಯಕರ್ತರಿಗೆ ಲಕ್; ದಿಗ್ಗಜರನ್ನು ಬದಿಗೊತ್ತಿ ಹೊಸಬರಿಗೆ ಮಣೆ!

05/03/2026 11:58 AM

ಕರ್ನಾಟಕದಲ್ಲಿ `ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ’ಗೆ ಈ ವಿದ್ಯಾರ್ಹತೆ, ಮಾನದಂಡ ಕಡ್ಡಾಯ !

05/03/2026 11:55 AM

ನಿತೀಶ್ ಕುಮಾರ್ ಹಾದಿಗೆ ಸ್ವಪಕ್ಷೀಯರ ಅಡ್ಡಿ? ರಾಜ್ಯಸಭೆ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಬೆಂಬಲಿಗರಿಂದ ಭಾರಿ ಪ್ರತಿಭಟನೆ!

05/03/2026 11:45 AM

ವಿಶ್ವಕ್ಕೆ ನಡುಕ ಹುಟ್ಟಿಸಿದ ಅಮೇರಿಕಾದ ‘ಡೂಮ್ಸ್‌ಡೇ’ ಕ್ಷಿಪಣಿ ಪರೀಕ್ಷೆ: ಇರಾನ್ ಸಂಘರ್ಷದ ನಡುವೆಯೇ ನ್ಯೂಕ್ಲಿಯರ್ ಸಾಮರ್ಥ್ಯದ ಮಿನಿಟ್‌ಮನ್-3 ಉಡಾವಣೆ!

05/03/2026 11:39 AM
State News
KARNATAKA

ಕರ್ನಾಟಕದಲ್ಲಿ `ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಾತಿ’ಗೆ ಈ ವಿದ್ಯಾರ್ಹತೆ, ಮಾನದಂಡ ಕಡ್ಡಾಯ !

By kannadanewsnow5705/03/2026 11:55 AM KARNATAKA 3 Mins Read

ಬೆಂಗಳೂರು: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರವು ಕಟ್ಟುನಿಟ್ಟಿನ…

ಗದಗದಲ್ಲಿ ಭೀಕರ ಅಪಘಾತ : ಮರಕ್ಕೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವು, 8 ಜನರಿಗೆ ಗಾಯ!

05/03/2026 11:30 AM

ರಾಜ್ಯದಲ್ಲಿ ಅಮಾನವೀಯ ಘಟನೆ : ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಆಸೆ ತೋರಿಸಿ, ಶೌಚಾಲಯ ಸ್ವಚ್ಛಗೊಳಿಸಿದ ಮುಖ್ಯ ಶಿಕ್ಷಕ!

05/03/2026 11:19 AM

ಹಾವೇರಿ : ಕರ್ತವ್ಯ ಲೋಪ ಹಿನ್ನಲೆ, ಗುತ್ತಲ ಠಾಣೆ PSI ಸಸ್ಪೆಂಡ್ ಮಾಡಿ ಆದೇಶ

05/03/2026 11:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.