ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅಜೆರ್ಬೈಜಾನ್ ಏರ್ಲೈನ್ಸ್ ಅಪಘಾತಕ್ಕೆ ಸಂಬಂಧಿಸಿದಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರ ಕ್ಷಮೆಯಾಚಿಸಿದ್ದಾರೆ. ಈ ದುರಂತದಲ್ಲಿ ಕನಿಷ್ಠ 38 ಜನರು ಸಾವನ್ನಪ್ಪಿದ್ದಾರೆ ಮತ್ತು 29 ಜನರು ಬದುಕುಳಿದಿದ್ದಾರೆ.
ಅದ್ರಂತೆ, ದುರಂತ ಘಟನೆಗೆ ವ್ಲಾಡಿಮಿರ್ ಪುಟಿನ್ ಕ್ಷಮೆಯಾಚಿಸಿದ್ದಾರೆ ಎಂದು ಕ್ರೆಮ್ಲಿನ್ ಹೇಳಿಕೆಯಲ್ಲಿ ತಿಳಿಸಿದೆ. ಉಕ್ರೇನ್ ದಾಳಿಗೊಳಗಾದ ಗ್ರೋಜ್ನಿ ವಿಮಾನ ನಿಲ್ದಾಣದಲ್ಲಿ ಇಳಿಯಲು ವಿಮಾನ ಪ್ರಯತ್ನಿಸಿದೆ ಎಂದು ಪುಟಿನ್ ತಮ್ಮ ಸಹವರ್ತಿಗೆ ತಿಳಿಸಿದ್ದಾರೆ ಎಂದು ಅದು ಹೇಳಿದೆ.
“ರಷ್ಯಾದ ವಾಯುಪ್ರದೇಶದಲ್ಲಿ ಸಂಭವಿಸಿದ ದುರಂತ ಘಟನೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆಯಾಚಿಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಮತ್ತೊಮ್ಮೆ ತಮ್ಮ ಆಳವಾದ ಮತ್ತು ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ” ಎಂದು ಕ್ರೆಮ್ಲಿನ್ ಹೇಳಿಕೆಯಲ್ಲಿ ತಿಳಿಸಿದೆ.
BREAKING : ರಾಜಸ್ಥಾನ ಸರ್ಕಾರದ ಮಹತ್ವದ ಆದೇಶ ; ಗೆಹ್ಲೋಟ್ ಆಡಳಿತದಲ್ಲಿ ರಚನೆಯಾದ ‘9 ಜಿಲ್ಲೆಗಳು’ ರದ್ದು
“ಮನಮೋಹನ್ ಸಿಂಗ್ ಅವ್ರನ್ನ ಕೇಂದ್ರ ಸರ್ಕಾರ ಅವಮಾನಿಸಿದೆ” : ‘ರಾಹುಲ್ ಗಾಂಧಿ’ ಆರೋಪ
SHOCKING : ಪೋಷಕರೇ ಎಚ್ಚರ : 37 ಲಕ್ಷ ಮಕ್ಕಳು `ಹೃದಯಾಘಾತ’ದ ಅಪಾಯದಲ್ಲಿದ್ದಾರೆ.!