ರಾಮನಗರ: ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ ಮಾಡಿರುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಂದು ಲೋಕಾಯುಕ್ತ ಪೊಲೀಸರು ರಾಮನಗರದ ಆರ್ ಟಿಓ ಕಚೇರಿ, ಬ್ರೋಕರ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆಯಲ್ಲಿ ಸಿಕ್ಕ ದಾಖಲೆಗಳನ್ನು ಆಧರಿಸಿ ಆರ್ ಟಿಓ, ಸಿಬ್ಬಂದಿ, ಬ್ರೋಕರ್ ಅರೆಸ್ಟ್ ಮಾಡಿದ್ದಾರೆ.

ರಾಮನಗರ ಆರ್ ಟಿಓ ಅಧಿಕಾರಿ ಶಿವಕುಮಾರ್, ಎಸ್ ಡಿಎ ರಚಿತ್ ರಾಮ್ ಹಾಗೂ ಬ್ರೋಕರ್ ಸತೀಶ್ ಸೇರಿಕೊಂಡು ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ ಮಾಡಿರೋ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು.

ಇಂದು ರಾಮನಗರ ಆರ್ ಟಿ ಓ ಶಿವಕುಮಾರ್, ಎಸ್ ಡಿಎ ರಚಿತ್ ರಾಮ್ ಹಾಗೂ ಬ್ರೋಕರ್ ಸತೀಶ್ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ.

ಅಂದಹಾಗೇ ಆರ್ ಟಿಓ ಶಿವಕುಮಾರ್, ಎಸ್ ಡಿಎ ರಚಿತ್ ರಾಮ್, ಬ್ರೋಕರ್ ಸತೀಶ್ ಸೇರಿಕೊಂಡು ಹಳೆಯ ಟ್ರ್ಯಾಕ್ಟರ್ ಗಳಿಗೆ ಹೊಸ ದಾಖಲೆ ಸೃಷ್ಠಿಸಲಾಗುತ್ತಿತ್ತು. ಸೀಜ್ ಮಾಡಿರುವ ವಾಹನಗಳ ದಾಖಲೆಯನ್ನು ನೀಡಿ, ಮಾರಾಟ ಮಾಡಲಾಗುತ್ತಿತ್ತು. ಹೀಗೆ ಬರೋಬ್ಬರಿ 2 ಸಾವಿರ ಟ್ರ್ಯಾಕ್ಟರ್ ಗಳಿಗೆ ಹೊಸ ದಾಖಲೆ ನೀಡಿ ಮಾರಾಟ ಮಾಡಿ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ವಂಚನೆ ಮಾಡಿರೋ ಆರೋಪ ಕೇಳಿ ಬಂದಿತ್ತು.

‘ರಾಕೇಶ್ ಶೆಟ್ಟಿ’ ವಿರುದ್ಧ ‘ರೌಡಿ ಶೀಟರ್’ ಓಪನ್ ಮಾಡಿ: ‘ಗಿರೀಶ್ ಮಟ್ಟೆಣ್ಣವರ’ ಆಗ್ರಹ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ, ರಾಜೀನಾಮೆ ನೀಡುವವರೆಗೂ ಹೋರಾಟ: ಆರ್‌.ಅಶೋಕ್

Share.
Exit mobile version