Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಾಂಗ್ಲಾದೇಶದ ಮಧ್ಯಂತರ ನಾಯಕ ಸ್ಥಾನಕ್ಕೆ ‘ರೆಹಮಾನ್ ಯೂನಸ್’ ರಾಜೀನಾಮೆ

16/02/2026 10:02 PM

BIGG NEWS : ಭಾರತ-ಬ್ರೆಜಿಲ್ 10 ವರ್ಷಗಳ ವೀಸಾಗಳಿಗೆ ಅನುಮೋದನೆ ; ದೀರ್ಘಾವಧಿಯ ಪ್ರವೇಶ ಈಗ ಸುಲಭ!

16/02/2026 9:57 PM

BREAKING : ಫೆ.25-26ರಂದು ಪ್ರಧಾನಿ ಮೋದಿ ಇಸ್ರೇಲ್’ಗೆ ಭೇಟಿ ; ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಘೋಷಣೆ!

16/02/2026 9:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಯಮಬಾಹಿರವಾಗಿ ಗುಜರಾತ್ ವಾಹನಗಳಿಗೆ FC ಕೊಟ್ಟ RTO ಅಧಿಕಾರಿ ಸಸ್ಪೆಂಡ್: ಸಚಿವ ರಾಮಲಿಂಗಾರೆಡ್ಡಿ
KARNATAKA

ನಿಯಮಬಾಹಿರವಾಗಿ ಗುಜರಾತ್ ವಾಹನಗಳಿಗೆ FC ಕೊಟ್ಟ RTO ಅಧಿಕಾರಿ ಸಸ್ಪೆಂಡ್: ಸಚಿವ ರಾಮಲಿಂಗಾರೆಡ್ಡಿ

By kannadanewsnow0921/01/2026 6:08 PM

ಬೆಂಗಳೂರು: ನಿಯಮ ಬಾಹಿರವಾಗಿ ಗುಜರಾಜ್ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದಂತ ಹಿರಿಯ ಮೋಟಾರು ವಾಹನ ನಿರೀಕ್ಷಕರನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚನೆಯ ಮೇರೆಗೆ ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.

ಹೌದು.. ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆಯ ಮೇರೆಗೆ ಅಮಾನತುಗೊಳಿಸಲಾಗಿದೆ. ನಿಸಾರ್ ಆಹಮ್ಮದ್, ಹಿರಿಯ ಮೋಟಾರು ವಾಹನ ನಿರೀಕ್ಷಕರು ಇವರು ಗುಜರಾತ್ ರಾಜ್ಯದ ವಾಹನಗಳಿಗೆ ನಿಯಮಬಾಹಿರವಾಗಿ Fitness Certificate ನೀಡಿದ್ದು ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತು ಮಾಡಿ ಆಯುಕ್ತರು ಸಾರಿಗೆ ಇಲಾಖೆ ಆದೇಶ ಹೊರಡಿಸಲಾಗಿದೆ.

ಗುಜರಾತ್ ರಾಜ್ಯದ ಸಾರಿಗೆ ಕಛೇರಿಯ ಇ-ಡಿಟೆಕ್ಷನ್ ತಂಡವು ವಾಹನ ಇ-ಡಿಟೆಕ್ಷನ್ ಪೋರ್ಟಲ್‌ ನ ಲ್ಲ್ಲಿ ಲಭ್ಯವಿರುವ ಡೇಟಾವನ್ನು ಪರಿಶೀಲಿಸಿ 41 ವಾಹನಗಳನ್ನು ಕರ್ನಾಟಕ ರಾಜ್ಯದ ಆರ್ ಟಿ ಒ ಕಚೇರಿಗಳಲ್ಲಿ ತಪಾಸಣೆ ಮಾಡಿ ನಮೂನೆ-38 (ಎ) (Fitness Certificate0 ನೀಡಿದ ನಂತರ, ಅದೇ ದಿನ ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಸದರಿ ವಾಹನಗಳು ಹಾದುಹೋಗಿವೆ ಎಂದು ಹಾಗೂ ಅವುಗಳನ್ನು ನಿಸಾರ್ ಅಹಮದ್ ಇವರು ಅನುಮೋದಿಸಿರುವುದಾಗಿ ಉಪ ನಿರ್ದೇಶಕರು, ಸಾರಿಗೆ ಆಯುಕ್ತರ ಕಛೇರಿ, ಗಾಂಧಿನಗರ, ಗುಜರಾತ್ ರವರು ತಿಳಿಸಿರುತ್ತಾರೆ.

ಈ ವಿಷಯವು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ ಆಯುಕ್ತರು ಸಾರಿಗೆ ಇಲಾಖೆ ರವರಿಗೆ ಕ್ರಮಕೈಗೊಳ್ಳಲು ಸೂಚಿಸಿದರು. ಅದರಂತೆ, ಆಯುಕ್ತರು ರವರು ಬೆಂಗಳೂರು ನಗರ ವಿಭಾಗದ ಜಂಟಿ ಸಾರಿಗೆ ಆಯುಕ್ತರು ಅವರಿಗೆ ವರದಿ ನೀಡಲು ಸೂಚಿಸಿದರು‌.

ಸದರಿ ವರದಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬೆಂಗಳೂರು (ಕೇಂದ್ರ) ದಲ್ಲಿರುವ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ನಿಸ್ಸಾರ್ ಅಹಮದ್ ರವರು ವಾಹನಗಳಿಗೆ ನಮೂನೆ-38(ಎ) ರಲ್ಲಿ ಅರ್ಹತಾ ಪತ್ರ ನವೀಕರಣ ಮಾಡಿರುವುದಾಗಿ ಇಲಾಖೆ ವಾಹನ್ 4.0 ತಂತ್ರಾಂಶದನ್ವಯ ದೃಢಪಟ್ಟಿರುತ್ತದೆ ಹಾಗೂ ಸದರಿ 41 ವಾಹನಗಳು ಅದೇ ದಿನ ಅಂದರೆ ತಪಾಸಣೆ ನಡೆಸಿದ ದಿನಾಂಕದಂದು ಗುಜರಾತ್ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗಿರುವುದು ಸಹ ಕಂಡುಬಂದಿರುತ್ತದೆ.

ಈ ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ನಮೂನೆ-38(ಎ) ನ್ನು ನಿಯಮಬಾಹಿರವಾಗಿ ಅನುಮೋದಿಸಿರುವುದು ಕಂಡುಬಂದಿರುತ್ತದೆ. ಇದರಿಂದಾಗಿ ಮೋಟಾರು ವಾಹನಗಳ ಕಾಯ್ದೆ ಮತ್ತು ನಿಯಮಗಳನ್ನು ಉಲಂಘಿಸಿದ್ದು, ವಾಹನಗಳನ್ನು ಭೌತಿಕವಾಗಿ ಪರಿಶೀಲನೆ ಮಾಡದೇ ಅನುಮೋದಿಸುವ ಮೂಲಕ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಆದ್ದರಿಂದ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ.

BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ

ಭವಿಷ್ಯದ ನಗರ ಬೆಂಗಳೂರಿಗೆ ಬನ್ನಿ, ಬಂಡವಾಳ ಹೂಡಿಕೆ ಮಾಡಿ: ದಾವೋಸ್ ನಲ್ಲಿ ಉದ್ಯಮಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನ

Share. Facebook Twitter LinkedIn WhatsApp Email

Related Posts

‘ನಂದಿನಿ ಉತ್ಪನ್ನ’ಗಳನ್ನು ‘FSSAI’ ಎಲ್ಲಾ ಸುರಕ್ಷತಾ ಮಾನದಂಡ ಪಾಲಿಸಿ ತಯಾರಿಕೆ: KMF ಸ್ಪಷ್ಟನೆ | Nandini Products

16/02/2026 9:19 PM1 Min Read

BREAKING: ಈಸೂರು ದಂಗೆಯ ಕೊನೆಯ ಕೊಂಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಕೆ.ದೇವೇಂದ್ರಪ್ಪ ನಿಧನ

16/02/2026 8:25 PM1 Min Read

ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ

16/02/2026 8:19 PM1 Min Read
Recent News

BREAKING : ಬಾಂಗ್ಲಾದೇಶದ ಮಧ್ಯಂತರ ನಾಯಕ ಸ್ಥಾನಕ್ಕೆ ‘ರೆಹಮಾನ್ ಯೂನಸ್’ ರಾಜೀನಾಮೆ

16/02/2026 10:02 PM

BIGG NEWS : ಭಾರತ-ಬ್ರೆಜಿಲ್ 10 ವರ್ಷಗಳ ವೀಸಾಗಳಿಗೆ ಅನುಮೋದನೆ ; ದೀರ್ಘಾವಧಿಯ ಪ್ರವೇಶ ಈಗ ಸುಲಭ!

16/02/2026 9:57 PM

BREAKING : ಫೆ.25-26ರಂದು ಪ್ರಧಾನಿ ಮೋದಿ ಇಸ್ರೇಲ್’ಗೆ ಭೇಟಿ ; ಪ್ರಧಾನಿ ‘ಬೆಂಜಮಿನ್ ನೆತನ್ಯಾಹು’ ಘೋಷಣೆ!

16/02/2026 9:51 PM

ನಿಮ್ಗೆ ಗೊತ್ತಾ.? ‘ಎಂ.ಎಸ್ ಧೋನಿ’ಗೆ ಪ್ರತಿ ತಿಂಗಳು 70,000 ರೂ. ಪಿಂಚಣಿ ; ‘BCCI’ ನೀಡುವ ನಿವೃತ್ತಿ ಸೌಲಭ್ಯಗಳಿವು.!

16/02/2026 9:42 PM
State News
KARNATAKA

‘ನಂದಿನಿ ಉತ್ಪನ್ನ’ಗಳನ್ನು ‘FSSAI’ ಎಲ್ಲಾ ಸುರಕ್ಷತಾ ಮಾನದಂಡ ಪಾಲಿಸಿ ತಯಾರಿಕೆ: KMF ಸ್ಪಷ್ಟನೆ | Nandini Products

By kannadanewsnow0916/02/2026 9:19 PM KARNATAKA 1 Min Read

ಬೆಂಗಳೂರು: ನಂದಿನಿ ಉತ್ಪನ್ನಗಳನ್ನು ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡ ಪ್ರಾಧಿಕಾರದ ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪಾಲಿಸಿ ತಯಾರಿಸಲಾಗುತ್ತಿದೆ. ಸಾಮಾಜಿಕ…

BREAKING: ಈಸೂರು ದಂಗೆಯ ಕೊನೆಯ ಕೊಂಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಕೆ.ದೇವೇಂದ್ರಪ್ಪ ನಿಧನ

16/02/2026 8:25 PM

ಪತ್ರಕರ್ತರಿಗೆ ಸರ್ಕಾರಿ ನಿವೇಶನ ಹಂಚಿಕೆಯ ವೇಳೆ ಶೇ.5ರಷ್ಟು ಮೀಸಲಾತಿ ನೀಡಿ: ಸಿಎಂಗೆ KUWJ ಮನವಿ

16/02/2026 8:19 PM

ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ತಪ್ಪದೇ ಹೀಗೆ ಮಾಡಿ, ನಿಮ್ಮ ಸಮಸ್ಯೆಗಳೆಲ್ಲ ದೂರ ಗ್ಯಾರಂಟಿ

16/02/2026 8:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.