ಕಲಬುರ್ಗಿ: 300 ಗಣವೇಷಧಾರಿಗಳು, 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಮಂದಿಯಿಂದ ಕಲಬುರ್ಗಿಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನ ಆರಂಭಗೊಂಡಿದೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚನಕ್ಕೆ ಜಿಲ್ಲಾಡಳಿತ ಆರಂಭದಲ್ಲಿ ಅವಕಾಶ ನೀಡಿರಲಿಲ್ಲ. ಹೀಗಾಗಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಕೋರ್ಟ್ ಅರ್ಜಿ ವಿಚಾರಣೆ ನಡೆಸಿ, ಸೂಕ್ತ ನಿರ್ಧಾರ ಕೈಗೊಂಡು, ಪಥಸಂಚಲನಕ್ಕೆ ಅನುಮತಿಸುವಂತೆ ನಿರ್ದೇಶಿಸಿತ್ತು.
ಈ ಹಿನ್ನಲೆಯಲ್ಲಿ ಚಿತ್ತಾಪುರ ತಾಲ್ಲೂಕು ಆಡಳಿತವು ಆರ್ ಎಸ್ ಎಸ್ ಪಥಸಂಚಲನಕ್ಕೆ ಅನುಮತಿಸಿ ಆದೇಶಿಸಿತ್ತು. ಜೊತೆ ಜೊತೆಗೆ 300 ಕಾರ್ಯಕರ್ತರು, 50 ಬ್ಯಾಂಡ್ ನವರು ಸೇರಿದಂತೆ 350 ಜನರಿಗೆ ಮಾತ್ರವೇ ಅವಕಾಶ ನೀಡುವಂತ ಷರತ್ತು ವಿಧಿಸಲಾಗಿತ್ತು.
ಈ ಷರತ್ತಿನಂತೆ ಕಲಬುರ್ಗಿಯಲ್ಲಿ 300 ಗಣಧಾರಿಗಳು, 50 ಬ್ಯಾಂಡ್ ನವರೊಂದಿಗೆ ಆರ್ ಎಸ್ ಎಸ್ ಪಥಸಂಚಲನವು ಚಿತ್ತಾಪುರದಲ್ಲಿ ನಡೆಯುತ್ತಿದೆ.
SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!








