ಬೆಂಗಳೂರು: ಬೆಂಗಳೂರಿನಲ್ಲಿ ಆರ್ ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮೋಸ್ಟ್ ವಾಂಟೆಂಡ್ ದರೋಡೆ ಕೋರರಲ್ಲಿ ಒಬ್ಬನಾಗಿದ್ದಂತ ಮೊಹಮ್ಮದ್ ಗೌಸ್ ನಿಯಾಜ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂದಿಸಿದ್ದಾರೆ.
2016ರಲ್ಲಿ ಬೆಂಗಳೂರಿನಲ್ಲಿ ಆರ್ ಎಸ್ ಮುಖಂಡ ರುದ್ರೇಶ್ ಎಂಬುವರನ್ನು ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣವನ್ನು ತನಿಖೆ ನಡೆಸೋದಕ್ಕೆ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು. ಪ್ರಮುಖ ಆರೋಪಿಯಾಗಿದ್ದಂತ ಮೊಹಮ್ಮದ್ ಗೌಸ್ ನಿಯಾಜ್ ಬಂಧನಕ್ಕಾಗಿ ಎನ್ಐಎ ಸುಳಿವು ನೀಡಿದವರಿಗೆ 5 ಲಕ್ಷ ರೂ ಬಹುಮಾನವನ್ನು ಘೋಷಣೆ ಮಾಡಿತ್ತು.
ಇಂತಹ ಆರೋಪಿಯ ಪತ್ತೆಗಾಗಿ ತನಿಖೆ ನಡೆಸಿದಂತ ಎನ್ಐಎ ಇದೀಗ ಆರ್ ಎಸ್ ಎಸ್ ಮುಖಂಡ ರುದ್ರೇಶ್ ಹತ್ಯೆಯ ಆರೋಪಿ ಮೊಹಮ್ಮದ್ ಗೌಸ್ ನಿಯಾಜ್ ನನ್ನು ದಕ್ಷಿಣ ಆಫ್ರಿಕಾದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಬಂಧಿಸುವಲ್ಲಿ ಯಶಸ್ವಿಯಾಗಿರೋದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕೇಂದ್ರ ಸರ್ಕಾರದ ಮದ್ಯಪ್ರವೇಶ: ‘ಗೂಗಲ್ ಪ್ಲೇ ಸ್ಟೋರ್’ನಲ್ಲಿ ‘Naukri, 99acres ಆ್ಯಪ್’ ಮರು ಸೇರ್ಪಡೆ