ಮಂಡ್ಯ: ನಮಗೆ RSS ಮಾತ್ರ ಅಲ್ಲ ಶತ್ರು ಅಸಮಾನತೆಯ ವ್ಯವಸ್ಥೆ ಶತ್ರು. ಪ್ರತಿಯೊಬ್ಬರಿಗೂ ಹೋರಾಟ, ಪಥಸಂಚಲನ, ರ್ಯಾಲಿ ಮಾಡುವ ಹಕ್ಕು ಇದೆ. RSS ಗೆ ಅನುಮತಿ ಇದೆ ಅಂದ್ರೆ ಭೀಮ್ ಆರ್ಮಿ ಗೂ ಇದೆ ಎಂಬುದಾಗಿ ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮನುವಾದಿ ಪಕ್ಷಗಳು ಕಾಂಗ್ರೆಸ್ ನ ಕೆಲವು ಮಿನಿಸ್ಟರ್ ಗಳು ದಲಿತ ಸಂಘಟನೆಗಳನ್ನ ಅವರ ವಯಕ್ತಿಕ ರಾಜಕೀಯ ಲಾಭಕ್ಕೆ ಬಳಿಸಿಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ಅವರು ಬಾಬಾ ಸಾಹೇಬ್ ತರನೇ ದಲಿತರಾಗಿ ಹುಟ್ಟಿರಬಹುದು. ಆದ್ರೆ ಕುವೆಂಪು ಅವರ ಸಿದ್ದಾಂತ ಉಳಿಸುತ್ತಿರುವವರು ನಾವು ಸಮಾನತವಾದಿಗಳು. ಜಾತಿ ರಾಜಕೀಯ ಮಾಡ್ತಾರೆ ಅಷ್ಟೆ. ಪಕ್ಷದವರಿಗೆ ಶತ್ರು ಯಾರು? ಬೇರೆ ಪಕ್ಷದವರು ಎಂದರು.
ದಲಿತ ಸಂಘಟನೆಗೆ ಶತ್ರು ಯಾರು? ಇಡೀ ಅಸಮಾನತೆಯ ಅನ್ಯಾಯದ ವ್ಯವಸ್ಥೆ. ಪ್ರತಿಯೊಬ್ಬರೂ ಅವರದೇ ಹಕ್ಕು ಇದೆ. ನಮಗೆ RSS ಮಾತ್ರ ಅಲ್ಲ ಶತ್ರು ಅಸಮಾನತೆಯ ವ್ಯವಸ್ಥೆ ಶತ್ರು. ನಾವು ಕುವೆಂಪು ಅನುಯಾಯಿಗಳು. ಯಾರು ಸಹ ಸಂವಿಧಾನ ಎತ್ತಿಡುತ್ತಿಲ್ಲ. ನಾವು ಸಂವಿಧಾನ ಕಾಪಾಡುತ್ತಿರುವವರು. ಸಮಸಮಾಜ ನಿರ್ಮಾಣ. ಮಾಡೋದು ನಮ್ಮ ಉದ್ದೇಶವಾಗಿದೆ. ನಿವೇಲ್ಲ ರಾಜಕೀಯ ಲಾಭಕ್ಕೆ ಒಂದು ಸಂಸ್ಥೆ ನಿಷೇಧ ಒಪ್ಪಲ್ಲ. ಸೈದಾಂತಿಕವಾಗಿ ಸೋಲಿಸಿ. ನಿಷೇಧ ಸಂಸ್ಕೃತಿಗಳ ಒಪ್ಪಲ್ಲ. ಆರ್ಟಿಕಲ್ 19 ರ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆ ಆಗಿದೆ ಎಂದು ಹೇಳಿದರು.
BREAKING : ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರ : ರಾಜ್ಯ ಸರ್ಕಾರ & ‘GBA’ ಗೆ ಹೈಕೋರ್ಟ್ ನೋಟಿಸ್ ಜಾರಿ
BREAKING: ಇಂದೋರ್ ನಲ್ಲಿ ಆಸ್ಟ್ರೇಲಿಯಾದ ಮಹಿಳಾ ವಿಶ್ವಕಪ್ ಆಟಗಾರ್ತಿಗಳಿಗೆ ಕಿರುಕುಳ: ಆರೋಪಿ ಬಂಧನ








