ಹಾವೇರಿ: ಜಿಲ್ಲೆಯ ಹಾನಗಲ್ ಠಾಣೆ ಪೊಲೀಸರಿಂದ ಸಿನಿಮಾವನ್ನೂ ಮೀರಿಸೋ ಮಿಂಚಿನ ಕಾರ್ಯಚಾರಣೆ ನಡೆಸಿ, ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದಂತ 85 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.  

ಹೌದು.. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ನೀಡಿದಂತ ಖಚಿತ ಮಾಹಿತಿಯ ಮೇರೆಗೆ ಹಾನಗಲ್ ಠಾಣೆಯ ಪೊಲೀಸರು, ಅಕ್ರಮವಾಗಿ ಹಣ ಸಾಗಿಸುತ್ತಿದ್ದಂತ ಕಾರು ತಡೆಯೋದಕ್ಕೆ ಕಾಯುತ್ತಿದ್ದರು.

BIGG NEWS: ಮಂಡ್ಯದಲ್ಲಿ ‘ ಭಾವೈಕ್ಯತೆಯ ಗಣೇಶ ಪ್ರತಿಷ್ಠಾಪನೆ ‘ : ಮುಸ್ಲಿಮರೇ ‘ಪ್ರಸಾದ ತಯಾರಿಸಿ ಭಕ್ತರಿಗೆ ‘ ವಿತರಣೆ

ಆದ್ರೇ ಕಾರು ಚಾಲಕ ಪೊಲೀಸರನ್ನು ಕಂಡ ತಕ್ಷಣ ಅವರು ಅಡ್ಡಗಟ್ಟಿ ತಡೆಯೋದಕ್ಕೂ ಯತ್ನಿಸಿದ್ರು ಲೆಕ್ಕಿಸದೇ ಚಾಲನೆ ಮಾಡಿದ್ದಾನೆ. ಈ ವೇಳೆಯಲ್ಲಿ ಕಾರನ್ನು ಹಿಂಬಾಲಿಸಿ ತೆರಳಿದಂತ ಪೊಲೀಸರು, ಕಾರಿನ ಚಾಲಕನನ್ನು ನಿಲ್ಲಿಸುವಂತೆ ಕಾರಿನ ಸಹಿತ ಹಿಡಿದ್ರೂ, ಮತ್ತೆ ಜೋರಾಗಿ ಕಾರು ಚಾಲಕ ಕಾರನ್ನು ಚಲಾಯಿಸಿದ್ದಾನೆ.

ಈ ವೇಳೆಯಲ್ಲಿ ಪೊಲೀಸರು ಕಾರಿನಿಂದ ಬಿದ್ದರೂ ಮತ್ತೆ ತಮ್ಮ ಕಾರ್ಯಾಚರಣೆ ಬಿಟ್ಟಿಲ್ಲ. ಸಿನಿಮಾ ಸ್ಟೈಲ್ ಅನ್ನು ಮೀರಿಸುವಂತೆ ಕಾರ್ ಚೇಸ್ ಮಾಡಿ, ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ 85 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.

BREAKING NEWS : ಸುಳ್ಯದಲ್ಲಿ ಅನ್ಯಕೋವಿನ ವಿದ್ಯಾರ್ಥಿಗೆ ಕಾಲೇಜಿನಲ್ಲಿ ಹಿಗ್ಗಾಮುಗ್ಗಾ ಥಳಿತ : 7 ವಿದ್ಯಾರ್ಥಿಗಳ ವಿರುದ್ಧ ಕೇಸ್‌ ದಾಖಲು

ಆರೋಪಿಗಳಾದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್ (31 ವರ್ಷ), ಇಮ್ರಾನ್ ಖಾನ್ (27 ವರ್ಷ) ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್ (23 ವರ್ಷ) ಮತ್ತು ಸಯ್ಯದ ಅಮೀನ್ (29 ವರ್ಷ) ಬಂಧಿಸಿದ್ದಾರೆ.

ಎಸ್ಪಿ ಹನುಮಂತರಾಯ ನೀಡಿದ ಮಾಹಿತಿ ಮೇರೆಗೆ, ಹಾನಗಲ್ ಸಿಪಿಐ ಶಿವಶಂಕರ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIGG NEWS : ಹಾವೇರಿಯಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಖದೀಮರು : 85 ಲಕ್ಷ ಹಣ ಜಪ್ತಿ ಮಾಡಿ ಪೊಲೀಸರು

Share.
Exit mobile version