ತುಮಕೂರು: ಜಿಲ್ಲೆಯ ಬಟವಾಡೆಯ ಬಳಿಯಲ್ಲಿ ಕಾರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ 8 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಿಂದ ತುಮಕೂರಿನ ಕಡೆಗೆ ಸಾಗುತ್ತಿದ್ದಂತ ಕಾರೊಂದನ್ನು ತಡೆದಂತ ಚುನಾವಣಾ ಚೆಕ್ ಪೋಸ್ಟ್ ಅಧಿಕಾರಿಗಳು, ಕಾರನ್ನು ತಪಾಸಣೆ ನಡೆಸಿದಂತ ವೇಳೆಯಲ್ಲಿ 8 ಲಕ್ಷ ಹಣ ಪತ್ತೆಯಾಗಿದೆ.
ಕಾರಿನಲ್ಲಿದ್ದಂತ ತಸೀನಾ, ಬಾನು, ಅನ್ಸರ್ ಎಂಬುವರ ವ್ಯಾನಿಟಿ ಬ್ಯಾಗ್ ಅನ್ನು ಪರಿಶೀಲಿಸಿದಂತ ಪೊಲೀಸರು ಶಾಕ್ ಆಗಿದ್ದಾರೆ. ಅವರ ವ್ಯಾನಿಟಿ ಬ್ಯಾಗ್ ನಲ್ಲಿ ಬರೋಬ್ಬರಿ 8 ಲಕ್ಷ ಹಣ ದೊರೆತಿದೆ.
ಈ ಬಗ್ಗೆ ಅವರನ್ನು ಚುನಾವಣಾಧಿಕಾರಿಗಳು ಪ್ರಶ್ನಿಸಿದ್ದಾರೆ. ದೊರೆತ ಹಣಕ್ಕೆ ಸೂಕ್ತ ಉತ್ತರ, ದಾಖಲೆ ನೀಡದ ಪರಿಣಾಮ ಹಣವನ್ನು ಸೀಜ್ ಮಾಡಿದ್ದಾರೆ. ಈ ಸಂಬಂಧ ತುಮಕೂರು ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು