ಹೊಸಪೇಟೆ: ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುವಂತೆ ಆಗಿತ್ತು. ಈ ಕ್ರಸ್ಟ್ ಗೇಟ್ ಅನ್ನು ಹಗಲು ರಾತ್ರಿ ಶ್ರಮವಹಿಸಿ, ಸ್ಟಾಪ್ ಗೇಟ್ ಅಳವಡಿಸಿದಂತ 20 ಪ್ರಮುಖ ಕಾರ್ಮಿಕರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ತಲಾ 50 ಸಾವಿರ ನಗದು ನೀಡಿ, ಸನ್ಮಾನಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರ ಸೂಚನೆ ಮೇರೆಗೆ ಕಂಪ್ಲಿ ಶಾಸಕ ಗಣೇಶ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಮಾಮಿ ನಿಯಾಜ್ ಹಾಗೂ ಮುಖಂಡ ವಿಜಯ ಕುಮಾರ್ ಸ್ವಾಮಿ ಅವರು ಜಿಲ್ಲಾಧಿಕಾರಿಗಳ ಉಪಸ್ಥಿತಿ ಯಲ್ಲಿ ತುಂಗಭದ್ರಾ ಅಣೆಕಟ್ಟೆ ಗೆ ಸ್ಟಾಪ್ ಗೇಟ್ ಅಳವಡಿಕೆ ಕೆಲಸದಲ್ಲಿ ಹಗಲಿರುಳು ಶ್ರಮಿಸಿದ 20 ಪ್ರಮುಖ ಕಾರ್ಮಿಕ ರಿಗೆ ತಲಾ 50 ಸಾವಿರ ರೂ. ನಗದು ನೀಡಿ ಸನ್ಮಾನ ಮಾಡಿದರು.
ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ ಗೊಳಿಸಿ ನಿಮಗೆಲ್ಲ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ ಎಂದು ಸಚಿವರು ಮಾತು ಕೊಟ್ಟಿದ್ದರು.
ಅದರಂತೆ ತಮ್ಮ ಅನುಪಸ್ಥಿತಿ ಯಲ್ಲೂ ಶಾಸಕ ಗಣೇಶ್ ಅವರಿಗೆ ಜವಾಬ್ದಾರಿ ವಹಿಸಿ ವೈಯಕ್ತಿಕ ವಾಗಿ ಹಣ ಕಳುಹಿಸಿಕೊಟ್ಟು ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದಾರೆ.
‘ಅಹ್ಮದಾಬಾದ್’ನ 188 ಪಾಕಿಸ್ತಾನಿ ಹಿಂದೂಗಳಿಗೆ CAA ಅಡಿಯಲ್ಲಿ ‘ಭಾರತೀಯ ಪೌರತ್ವ’ ನೀಡಿದ ಅಮಿತ್ ಶಾ
ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಬಡ್ಡಿ ರಹಿತ 5 ಲಕ್ಷ ರೂ.ವರೆಗೆ ಸಾಲ!