ಗದಗ: ಬಡ್ಡಿ ದಂಧೆಯಲ್ಲಿ ತೊಡಗಿದ್ದಂತ ಬೆಟಗೇರಿಯ ಯಲ್ಲಪ್ಪ ಮಿಸ್ಕಿನ್ ಅವರ ಮನೆಯ ಮೇಲೆ ಗದಗ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಪತ್ತೆಯಾದಂತ ಹಣ, ಚಿನ್ನಾಭರಣವನ್ನು ಕಂಡಂತ ಪೊಲೀಸರೇ ಶಾಕ್ ಆಗಿದ್ದಾರೆ. ಬಡ್ಡಿ ದಂಧೆಕೋರ ಯಲ್ಲಪ್ಪ ಮಸ್ಕಿ ಮನೆಯಲ್ಲಿ ಬರೋಬ್ಬರಿ 4.90 ಕೋಟಿ ನಗದು ಪತ್ತೆಯಾಗಿದೆ.
ಈ ಕುರಿತಂತೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಕಗೌಡ ಅವರು ಮಾಹಿತಿ ನೀಡಿದ್ದು, ಎರಡು ದಿನಗಳಿಂದ ಬಡ್ಡಿ ವ್ಯವಹಾರ ನಡೆಸುತ್ತಿದ್ದಂತ ಯಲ್ಲಪ್ಪ ಮಿಸ್ಕಿನ್ ಮನೆಯ ಮೇಲೆ ದಾಳಿಯನ್ನು ನಡೆಸಲಾಗಿತ್ತು. 13 ಕಡೆಯಲ್ಲಿ ನಡೆಸಿದಂತ ದಾಳಿಯಲ್ಲಿ 4.90 ಕೋಟಿ ನಗದು, 992 ಗ್ರಾಂ ಚಿನ್ನ ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಇನ್ನೂ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ 650 ಬಾಂಡ್, 4 ಎಟಿಎಂ ಕಾರ್ಡ್, 9 ಬ್ಯಾಂಕ್ ಪಾಸ್ ಬುಕ್ ಸಿಕ್ಕಿವೆ. ಜೊತೆಗೆ ಅಕ್ರಮವಾಗಿ ಸಂಗ್ರಹ ಮಾಡಿದ್ದಂತ 65 ಲೀಟರ್ ಮದ್ಯವನ್ನು ಜಪ್ತಿ ಮಾಡಿರುವುದಾಗಿ ತಿಳಿಸಿದ್ದಾರೆ.
ರಾಜ್ಯದ ‘SC, ST ಸಮುದಾಯ’ದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ‘ಉಚಿತ KAS Mains ತರಬೇತಿ’ಗೆ ಅರ್ಜಿ ಆಹ್ವಾನ
ವಿಶ್ವದ 100 ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ: ಇಲ್ಲಿದೆ ಇತರೆ ದೇಶಗಳ ಪಟ್ಟಿ | Corrupt Countries
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಇನ್ನೆರಡು ದಿನಗಳಲ್ಲಿ ಸ್ಥಳ ಘೋಷಣೆ: ಡಿಸಿಎಂ ಡಿಕೆಶಿ