ಚಿಕ್ಕಬಳ್ಳಾಪುರ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಿಜೆಪಿ ಮುಖಂಡ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ ಸುಧಾಕರ್ ಆಪ್ತ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ಮನೆ ಮೇಲೆ ದಾಳಿ ಮಾಡಿದ್ದರು. ಈ ದಾಳಿಯ ವೇಳೆಯಲ್ಲಿ 4.82 ಕೋಟಿ ಹಣ ಜಪ್ತಿ ಮಾಡಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿಕೊಂಡ ಬಳಿಕ ಬೆಂಗಳೂರು ಉತ್ತರ ತಾಲೂಕಿನ ಚುನಾವಣಾ ನೋಡೆಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಬಿಜೆಪಿ ಅಭ್ಯರ್ಥಿ ಸುಧಾಕರ್ ವಾಟ್ಸಪ್ ಕರೆ ಮಾಡಿ, “ಗೋವಿಂದಪ್ಪ ಅವರಿಗೆ ಸಹಾಯ ಮಾಡಿ, ಅಲ್ಲದೆ ಹಣವನ್ನು ವಾಪಸು ಕೊಡಿಸುವಂತೆ” ಹೇಳಿದ್ದರು. ಅಲ್ಲದೆ ಗೋವಿಂದಪ್ಪ ಕೂಡ ಮುನೀಶ್ ಮೌದ್ಗಿಲ್ ಅವರಿಗೆ ವಾಟ್ಸಪ್ ಮೂಲಕ “Please Help will we great full to you” ಎಂದು ಸಂದೇಶ ಕಳುಹಿಸಿದ್ದರು.
The FST of Chikkaballapura seized cash worth 4.8 Crores. An FIR also has been lodged by the SST team of Chikkaballapura Constituency against K Sudhakar, BJP Candidate on 25.04.2024 at Madanayakanahally Police Station.
— Chief Electoral Officer, Karnataka (@ceo_karnataka) April 26, 2024
ಈ ವಿಚಾರವನ್ನು ಸಾಕ್ಷಿ ಸಮೇತ ಮುನೀಶ್ ಮೌದ್ಗಿಲ್ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನೀಡಿದ್ದರು. ಬಳಿಕ ಎಸ್ಎಸ್ಟಿ ತಂಡದ ಮುಖ್ಯಸ್ಥ ದಶರಥ್ .ವಿ. ಕಂಬಾರ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಧಾಕರ್ ವಿರುದ್ಧ ಅನುಚಿತ ಪ್ರಭಾವ, ಲಂಚ ಮತ್ತು ಭ್ರಷ್ಟಾಚಾರದ ಪ್ರಯತ್ನ ಮಾಡಿದ್ದಕ್ಕಾಗಿ RP ಕಾಯಿದೆ 1951ರ ಅಡಿಯಲ್ಲಿ ಸೆಕ್ಷನ್ 171ಇ (ಲಂಚ ಸ್ವೀಕಾರ), 171ಎಫ್ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರುವಿಕೆ) 171ಬಿ (ಮತದಾರರಿಗೆ ಹಣದ ಆಮಿಷ), 171ಸಿ (ಚುನಾವಣೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಸ್ತಕ್ಷೇಪ) ಆರೋಪದಡಿ ಎಫ್ಐಆರ್ ದಾಖಲಾಗಿದೆ.
The FIR No.0355/2024 is booked u/s 123 of RP Act and 171(B,C,E,F) of the IPC for bribery and undue influence on electors.
— Chief Electoral Officer, Karnataka (@ceo_karnataka) April 26, 2024
ಇನ್ಮುಂದೆ ವರ್ಷಕ್ಕೆ ಎರಡು ಬಾರಿ ‘CBSE’ ಬೋರ್ಡ್ ಪರೀಕ್ಷೆ : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ