ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಆಗಸ್ಟ್ 2023ರಿಂದ ಈವರೆಗೆ ಬರೋಬ್ಬರಿ 1.22 ಕೋಟಿ ಮಹಿಳೆಯರಿಗೆ 30,285 ಕೋಟಿ ಧನಸಹಾಯ ನೀಡಲಾಗಿದೆ.
ಈ ಬಗ್ಗೆ ರಾಜ್ಯ ವಾರ್ತಾ ಇಲಾಖೆಯಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ರಾಜ್ಯ ಸರ್ಕಾರ ಸ್ತ್ರೀ ಸ್ವಾಲಂಬನೆಯತ್ತ ದಿಟ್ಟ ಹೆಜ್ಜೆ ಇರಿಸಲಾಗಿದೆ ಎಂದಿದೆ. ಅಲ್ಲದೇ ಗೃಹ ಲಕ್ಷ್ಮಿ ಯೋಜನೆಯಡಿ ಆಗಸ್ಟ್ 2023ರಿಂದ ಈವರೆಗೆ ಪ್ರತಿ ಮನೆಯ ಯಜಮಾನಿಯ ಖಾತೆಗೆ ಮಾಸಿಕ 2000 ರೂ.ನಂತೆ 1.22 ಕೋಟಿ ಮಹಿಳೆಯರಿಗೆ ಒಟ್ಟು 30,285 ಕೋಟಿ ಧನಸಹಾಯ ನೀಡಲಾಗಿದೆ ಎಂದಿದೆ.
ಇದಲ್ಲದೇ ಆರೋಗ್ಯ ಪುಷ್ಟಿ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 102 ತಾಲ್ಲೂಕುಗಳಲ್ಲಿ ಜಾರಿಗೊಳಿಸಿದ್ದು, ಅರ್ಹ ವಿವಾಹಿತ ಮಹಿಳೆಯರಿಗೆ ಪೌಷ್ಟಿಕ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಮಾಜಿ ದೇವದಾಸಿಯರಿಗೆ ಉತ್ಪನ್ನಗಳ ಮಾರಾಟಕ್ಕಾಗಿ ಸವದತ್ತಿಯಲ್ಲಿ 48 ಮಾರಾಟ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿ ಎಂದು ತಿಳಿಸಲಾಗಿದೆ.
ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ#GuaranteeSarkar #KarnatakaGovt@CMofKarnataka@siddaramaiah pic.twitter.com/uIJZfE5Dnc
— DIPR Karnataka (@KarnatakaVarthe) November 8, 2024