ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೊಂಡು ಇಂದಿಗೆ ವರ್ಷದ ಸಂಭ್ರಮವಾಗಿದೆ. ಇಂತಹ ಯೋಜನೆಗೆ ಮನೆಯ ಯಜಮಾನಿಯರಿಗೆ 25 ಸಾವಿರ ಕೋಟಿ ಜಮೆ ಮಾಡಲಾಗಿದೆ.
ಈ ಕುರಿತಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದರು, ಬಡವರ ಪಾಲಿನ ನಂದಾದೀಪವಾದ ʼಗೃಹಲಕ್ಷ್ಮಿʼ ಯೋಜನೆಗೆ ವರ್ಷ ತುಂಬಿದೆ. ಈ ಒಂದು ವರ್ಷದಲ್ಲಿ ಮನೆಯ ಯಜಮಾನಿಯರಿಗೆ ₹25,248 ಕೋಟಿ ಜಮೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಆರ್ಥಿಕ ಸಬಲರಾಗಿದ್ದು ಮಾತ್ರವಲ್ಲದೇ, ಕುಟುಂಬ ನಿರ್ವಹಣೆಗೂ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಬಡವರ ಪಾಲಿನ ನಂದಾದೀಪವಾದ ʼಗೃಹಲಕ್ಷ್ಮಿʼ ಯೋಜನೆಗೆ ವರ್ಷ ತುಂಬಿದೆ. ಈ ಒಂದು ವರ್ಷದಲ್ಲಿ ಮನೆಯ ಯಜಮಾನಿಯರಿಗೆ ₹25,248 ಕೋಟಿ ಜಮೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಆರ್ಥಿಕ ಸಬಲರಾಗಿದ್ದು ಮಾತ್ರವಲ್ಲದೇ, ಕುಟುಂಬ ನಿರ್ವಹಣೆಗೂ ಸಹಕಾರಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.#gruhalakshmi… pic.twitter.com/eHYSY8GiJa
— DIPR Karnataka (@KarnatakaVarthe) August 31, 2024
ಅಂದಹಾಗೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮನೆಯ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು ರೂ.2000 ನೀಡಲಾಗುತ್ತಿದೆ. ಈ ಯೋಜನೆಯಿಂದ ಬಂದಂತ ಹಣದಿಂದ ಯಜಮಾನಿ ಮಹಿಳೆಯರು ಕೆಲವರು ಟಿವಿ ಖರೀದಿಸಿದ್ದರೇ, ಮತ್ತೆ ಕೆಲವರು ಫ್ರಿಡ್ಜ್ ಖರೀದಿಸಿದ್ದಾರೆ. ಮಗದೊಬ್ಬರು ಅಂಗಡಿಯನ್ನೇ ಹಾಕಿದ್ದಾರೆ. ಇದಕ್ಕೆ ಮೀರಿದಂತೆ ಮಹಾತಾಯಿಯೊಬ್ಬರು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿ, ಸಂಭ್ರಮಿಸಿದ್ದರು.
BREAKING : ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಜಾಮೀನು ಅರ್ಜಿ ವಿಚಾರಣೆ ಮಧ್ಯಾಹ್ನ 2.30 ಕ್ಕೆ ಮುಂದೂಡಿಕೆ
ದಾವಣಗೆರೆಯಲ್ಲಿ ಜೈಲು ಶಿಕ್ಷೆಯ ಭಯದಿಂದ ‘ಕೋರ್ಟ್’ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ