ಬೆಂಗಳೂರು: ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿ ಮೆಕ್ ಲಾರೆನ್ ಸೂಪರ್ ಕಾರ್ ಕಾರಿನ ವಿಡಿಯೋ ಸೆರೆಹಿಡಿಯಲು ಯತ್ನಿಸಿದ ಬೈಕ್ ಸವಾರರ ಗುಂಪೊಂದು ಅಪಘಾತಕ್ಕೀಡಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆಯು ಸಾಮಾಜಿಕ ಮಾಧ್ಯಮ ವಿಷಯವನ್ನು ರಚಿಸುವ ಗೀಳಿನಿಂದ ಪ್ರೇರಿತವಾದ ಅಪಾಯಕಾರಿ ಸ್ಟಂಟ್ಗಳ ಅಪಾಯಗಳನ್ನು ಒತ್ತಿಹೇಳುತ್ತದೆ.
ಮಲ್ಯ ರಸ್ತೆಯಲ್ಲಿ ಹೋಗುತ್ತಿದ್ದ ಮೆಕಲಾರೆನ್ಸ್-720 ಕಾರು ಕಂಡು ಬೈಕ್ ಸವಾರರಿಬ್ಬರು ವಾಹನ ಚಲಾಯಿಸುತ್ತಲೇ ವಿಡಿಯೋ ಮಾಡಿಕೊಳ್ಳಲು ಹೋಗಿ ಕೆಳಕ್ಕೆ ಬಿದ್ದಿದ್ದಾರೆ ಈಗ ಈ ವಿಡಿಯೋ ವೈರಲ್ ಆಗಿದೆ. ರಸ್ತೆಯಲ್ಲಿ ಹೋಗುವಾಗ ಹಿಂಬದಿ ಬೈಕ್ ಸವಾರನೋರ್ವ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾನೆ. ಬೈಕ್ ಸವಾರ ಇನ್ನಷ್ಟು ಹತ್ತಿರ ಹೋದಾಗ ಏಕಾಏಕಿ ಕಾರು ಎಡಬದಿಗೆ ಬಂದಿದ್ದರಿಂದ ಬೈಕ್ ತಗುಲಿ ಬಿದ್ದಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
Biker 🏍 who was tailing a McLaren supercar 🏎 on Vittal Mallya road, collided with each other. People are so obsessed with capturing videos of supercars and creating Instagram reels 🤦#RoadSafety #TrafficIncident #Bengaluru pic.twitter.com/6doQEKkqE4
— ThirdEye (@3rdEyeDude) February 6, 2024