ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಸುದ್ದಿ ನೀಡಿದ್ದಾರೆ. ಅಡುಗೆ ಅನಿಲ ಸಿಲಿಂಡರ್’ಗಳ ಬೆಲೆಯನ್ನ 100 ರೂ.ಗಳಷ್ಟು ಕಡಿಮೆ ಮಾಡಲಾಗುವುದು ಎಂದು ಶುಕ್ರವಾರ ಘೋಷಿಸಲಾಯಿತು. ಇದು ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನ ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ಪಿಎಂ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಈ ಘೋಷಣೆ ಬಂದಿದೆ.
ಈ ನಿರ್ಧಾರದಿಂದ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 803 ರೂಪಾಯಿ., ಮುಂಬೈನಲ್ಲಿ 802.50 ರೂಪಾಯಿ., ಕೋಲ್ಕತಾದಲ್ಲಿ 829 ರೂಪಾಯಿ., ಚೆನ್ನೈನಲ್ಲಿ 818.50 ರೂ.ಗೆ ಇಳಿದಿದೆ. ಹೊಸ ಬೆಲೆಗಳು ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದವು. ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಸಿಲಿಂಡರ್ ಬೆಲೆಗಳು ರಾಜ್ಯಗಳಲ್ಲಿ ಬದಲಾಗುತ್ತವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಕುಸಿತದ ಹಿನ್ನೆಲೆಯಲ್ಲಿ ದೇಶೀಯ ಕಡಿತ ಬಂದಿದೆ.
ಮಾರ್ಚ್ 2025ರವರೆಗೆ ‘ಉಜ್ವಲ’ ಸಬ್ಸಿಡಿ.!
“ದೆಹಲಿಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 300 ರೂ.ಗಳ ಸಬ್ಸಿಡಿ ಪಡೆಯುತ್ತಿರುವವರು 503 ರೂ.ಗೆ ಸಿಲಿಂಡರ್ ಪಡೆಯುತ್ತಾರೆ. ಇತರರು ಇದನ್ನ 803 ರೂ.ಗೆ ಪಡೆಯಬಹುದು ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಉಜ್ವಲ ಸಬ್ಸಿಡಿಯನ್ನ ಮಾರ್ಚ್ 2025ರವರೆಗೆ ವಿಸ್ತರಿಸುವ ಪ್ರಸ್ತಾಪಕ್ಕೂ ಅದು ಅನುಮೋದನೆ ನೀಡಿತು. ಅಕ್ಟೋಬರ್ 2023ರಲ್ಲಿಯೇ ಸರ್ಕಾರವು ಸಬ್ಸಿಡಿಯನ್ನ 200 ರೂ.ಗಳಿಂದ 300 ರೂ.ಗೆ ಹೆಚ್ಚಿಸಿತ್ತು. ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅವು ಕಳೆದ 23 ತಿಂಗಳುಗಳಿಂದ ಸ್ಥಿರವಾಗಿ ಉಳಿದಿವೆ.
ಕಳೆದ ಆರು ತಿಂಗಳಲ್ಲಿ ಇದು ಎರಡನೇ ಬಾರಿ.!
ಕಳೆದ ಆರು ತಿಂಗಳಲ್ಲಿ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್’ಗಳ ಬೆಲೆಯನ್ನ ಕಡಿಮೆ ಮಾಡಿರುವುದು ಇದು ಎರಡನೇ ಬಾರಿ. ಕಳೆದ ವರ್ಷ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಕೇಂದ್ರವು ಪ್ರತಿ ಸಿಲಿಂಡರ್ ಬೆಲೆಯನ್ನ 200 ರೂ.ಗಳಷ್ಟು ಕಡಿಮೆ ಮಾಡಿತ್ತು.
‘ಈ ಕಾರಣ’ ಯುವ ಜನರಲ್ಲಿ ‘ಹೃದಯಾಘಾತ’ದ ಅಪಾಯ ಹೆಚ್ಚಿಸುತ್ತದೆ ; ಏನದು.? ಹೇಗೆ ಪರಿಹಾರ.? ನೋಡಿ
ಮಾ.15ರಿಂದ ಕೋಲ್ಕತ್ತಾದ ‘ಅಂಡರ್ ವಾಟರ್ ಮೆಟ್ರೋ’ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತ
ಟೆಸ್ಟ್ ರಕ್ಷಣೆಗೆ ‘BCCI’ ಮಹತ್ವದ ಕ್ರಮ : ‘ಟೆಸ್ಟ್ ಕ್ರಿಕೆಟ್ ಇನ್ಸೆಂಟಿವ್ ಸ್ಕೀಮ್’ ಘೋಷಣೆ