ಬೆಂಗಳೂರು: ರೌಡಿ ಶೀಟರ್ ಶಿವಕುಮಾರ್ ಆಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ 16 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ.
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಂತಹ ಆರೋಪಿಗಳಿಗೆ ಆಗಸ್ಟ್ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ 16 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳಾದಂತ ಕಿರಣ್, ವಿಮಲ್ ರಾಜ್, ಪ್ರದೀಪ್, ಮದನ್, ಅರುಣ್, ಸ್ಯಾಮ್ಯುವೆಲ್, ನವೀನ್ ಕುಮಾರ್, ನರಸಿಂಹ, ಅವಿನಾಶ್, ಮುರುಗೇಶ್, ಸುದರ್ಶನ್, ಶಿವ, ಮನೋಜ್, ಪ್ರಸಾದ್, ಪ್ಯಾಟ್ರಿಕ್ ಗೆ ಆಗಸ್ಟ್.4ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದೇ ಪ್ರಕರಣದಲ್ಲಿ ಜಗದೀಶ್ ಆಲಿಯಾಸ್ ಜಗ್ಗು, ಧನುಷ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
BIG NEWS: ‘SSLC ತೇರ್ಗಡೆ’ಗೆ ಹೊಸ ಮಾನದಂಡ: ಈಗ ಶೇ.33ರಷ್ಟು ಅಂಕ ಪಡೆದ್ರೂ ‘ಪಾಸ್’
ಸಾರ್ವಜನಿಕರಿಗೆ ಅನಗತ್ಯವಾಗಿ ಕಿರುಕುಳ ಕೊಡುವುದನ್ನು ‘ಪೊಲೀಸ್ ಇಲಾಖೆ’ ಸಹಿಸುವುದಿಲ್ಲ: ಸಾಗರ ಡಿವೈಎಸ್ಪಿ ಎಚ್ಚರಿಕೆ