ಬೆಂಗಳೂರು: ನಗರದಲ್ಲಿ ಸಿನಿಮಾ ಸ್ಟೈಲ್ ನಲ್ಲಿ ರಾಬರಿ ಮಾಡೋದಕ್ಕೆ ಯತ್ನಿಸಿದ್ದಾರೆ. ಸೂಪರ್ ಮಾರ್ಕೆಟ್ ಗೆ ನುಗ್ಗಿ ದರೋಡೆಗೆ ಮುಂದಾದಂತ ದುಷ್ಕರ್ಮಿಗಳ ಯತ್ನ ವಿಫಲವಾಗಿದೆ.
ಬೆಂಗಳೂರಿನ ರಿಚ್ಮಂಡ್ ಟೌನ್ ನ ಸೂಪರ್ ಮಾರ್ಕೆಟ್ ಗೆ ನುಗ್ಗಿ ದರೋಡೆ ಮಾಡೋದಕ್ಕೆ ಸಿನಿಮಾ ಸ್ಟೈಲ್ ನಲ್ಲಿ ನುಗ್ಗಿದ್ದಾರೆ. ದಿನಿಸಿ ಖರೀದಿ ನೆಪದಲ್ಲಿ ತೆರಳಿದ್ದಂತ ಇಬ್ಬರು ಖದೀಮರು ಈ ಕೃತ್ಯ ಎಸಗೋದಕ್ಕೆ ಮುಂದಾಗಿದ್ದಾರೆ. ಸೂಪರ್ ಮಾರ್ಕೆಟ್ ಸಿಬ್ಬಂದಿಗೆ ಚಾಕು ತೋರಿಸಿ ದರೋಡೆ ಯತ್ನ ನಡೆಸಿದ್ದಾರೆ.
ಆದರೇ ಸಿಬ್ಬಂದಿ ಚಾಕು ತೋರಿಸಿದರೂ ಹೆದರದೇ ಮುಂದೆ ಸಾಗಿ ದರೋಡೆ ಕೋರರಲ್ಲಿ ಒಬ್ಬನನ್ನು ಹಿಡಿದುಕೊಂಡಿದ್ದಾರೆ. ಈ ವೇಳೆಯಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಕದ್ದಿದ್ದಂತ ವಸ್ತುಗಳನ್ನು ಬಿಟ್ಟು ಸ್ಥಳದಿಂದ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಈ ಎಲ್ಲಾ ಕೃತ್ಯವು ಸೂಪರ್ ಮಾರ್ಕೆಟ್ ನಲ್ಲಿದ್ದಂತ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಸಾರ್ವಜನಿಕರಿಗೆ ಬಹು ಮುಖ್ಯ ಮಾಹಿತಿ: ಆಧಾರ್ ನೋಂದಣಿ, ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ | Aadhaar Update