ಬೆಂಗಳೂರು: ಇಂದು ಸಿಎಂ ಸಿದ್ಧರಾಮಯ್ಯ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಪ್ರಚಾರ ಮಾಡುತ್ತಿದ್ದವೇಳೆಯಲ್ಲಿ ಭದ್ರತಾ ವೈಫಲ್ಯ ಉಂಟಾಗಿತ್ತು. ರಿಯಾಜ್ ಎಂಬಾತ ಗನ್ ಇಟ್ಟುಕೊಂಡು ಸಿಎಂ ಸಿದ್ಧರಾಮಯ್ಯ ಅವರಿಗೆ ಹಾರ ಹಾಕಿದ್ದನು. ಈ ಸಂಬಂಧ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರಿನ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಸೂಚನೆ ಮೇರೆಗೆ ಸಿಎಂ ಸಿದ್ಧರಾಮಯ್ಯ ಅವರಿಗೆ ಗನ್ ಇಟ್ಟುಕೊಂಡು ಹಾರ ಹಾಕಿದಂತ ರಿಯಾಜ್ ಎಂಬಾತನನ್ನು ವಿಚಾರಣೆ ನಡೆಸಲಾಗುತ್ತಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಅವರು ಸಿಎಂ ಸಿದ್ಧರಾಮಯ್ಯಗೆ ಗನ್ ಇಟ್ಟುಕೊಂಡು ಹಾರ ಹಾಕಿದಂತ ರಿಯಾಜ್ ನನ್ನು ತೀವ್ರವಾಗಿ ವಿಚಾರಣೆ ಮಾಡುತ್ತಿದ್ದಾರೆ.
ಅಂದಹಾಗೆ ಲೋಕಸಭಾ ಚುನಾವಣೆ ಘೋಷಣೆಯ ನಂತ್ರ ಗನ್ ಲೈಸೆನ್ಸ್ ಹೊಂದಿದ್ದಂತವರು ವಾಪಾಸು ಸರೆಂಡರ್ ಮಾಡೋದಕ್ಕೆ ಸೂಚಿಸಲಾಗಿತ್ತು. ಆದ್ರೇ ಜೀವ ಭಯವಿದೆ ಎಂಬುದಾಗಿ ಹೇಳಿದ್ದಂತ ರಿಯಾಜ್ ಗನ್ ಇಟ್ಟುಕೊಳ್ಳೋದಕ್ಕೆ ಅನುಮತಿಯನ್ನು ಪಡೆದಿದ್ದನು.
ಝಡ್ ಪ್ಲಸ್ ಭದ್ರತೆಯನ್ನು ಹೊಂದಿರುವಂತ ಸಿಎಂ ಸಿದ್ಧರಾಮಯ್ಯ ಅವರ ಬಳಿಗೆ ಗನ್ ಹೊಂದಿದಂತ ವ್ಯಕ್ತಿಗಳು ಹೋಗುವುದು ಅಪರಾಧವಾಗಿದೆ. ಹೀಗಿದ್ದೂ ಇಂದು ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದಂತ ವೇಳೆಯಲ್ಲಿ ಕ್ಯಾಂಟರ್ ಏರಿ ಸಿಎಂ ಸಿದ್ಧರಾಮಯ್ಯ ಅವರಿಗೆ ಹಾರವನ್ನು ರಿಯಾಜ್ ಹಾಕಿದ್ದನು. ಇದು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುವಂತೆ ಮಾಡಿತ್ತು.
ದೇಶದಲ್ಲಿ ಪ್ರಥಮ: ಶ್ರವಣದೋಷವುಳ್ಳ ವಕೀಲರ ವಾದ ಆಲಿಸಿದ ‘ಕರ್ನಾಟಕ ಹೈಕೋರ್ಟ್’