ಬೆಂಗಳೂರು: ನಗರದಲ್ಲಿ ನೀರು ಸೋರಿಕೆ ತಡೆಯೋದಕ್ಕೆ ಜಲಮಂಡಳಿಯಿಂದ ಕ್ರಾಂತಿಕಾರಕ ಹಜ್ಜೆ ಇರಿಸಲಾಗಿದೆ.ಬ್ಲೂ ಪ್ರೋರ್ಸ್ ವಿಶೇಷ ದಳ ಆರಂಭ ಮಾಡಲಾಗುತ್ತಿದೆ. ಅಲ್ಲದೇ ರೋಬೋಟಿಕ್ ಮತ್ತು ಎಐ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ.
ನೀರಿನ ಸೋರಿಕೆ ತಡೆಯಲು ಮತ್ತು ಅನಧಿಕೃತ ನೀರು ಹಾಗೂ ಒಳಚರಂಡಿ (ಸೀವೇಜ್) ಸಂಪರ್ಕಗಳನ್ನು ಪತ್ತೆ ಹಚ್ಚಲು ಬೆಂಗಳೂರು ಜಲಮಂಡಳಿ ವಿನೂತನ ಕಾರ್ಯಕ್ರಮ ರೂಪಿಸಿದೆ.
ಬಿಡಬ್ಲ್ಯೂಎಸ್‌ಎಸ್‌ಬಿ ತನ್ನ ಪ್ರತಿಯೊಂದು ಉಪವಿಭಾಗಕ್ಕೆ ಒಂದು ವಿಶೇಷ ‘ಬ್ಲೂ ಫೋರ್ಸ್’ ತಂಡವನ್ನು ರಚಿಸಿದೆ. ಈ ವಿಶೇಷ ದಳವು ಈ ವಾರದಿಂದಲೇ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
ಅಕ್ರಮ ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆಹಚ್ಚುವುದು, ಅನಧಿಕೃತವಾಗಿ ನೀರು ಸೋರುವಿಕೆ ಮತ್ತು ಬೈಪಾಸ್ ಸಂಪರ್ಕಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ನೀರಿನ ಸೋರಿಕೆಯಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟವನ್ನು ತಡೆಗಟ್ಟುವುದು ಮತ್ತು ನೀರಿನ ನ್ಯಾಯಯುತ ವಿತರಣೆ ಖಚಿತಪಡಿಸುವುದು ಈ ವಿಶೇಷ ದಳದ ಉದ್ದೇಶವಾಗಿದೆ.
ಸೋರಿಕೆಯ ನಿಖರ ಸ್ಥಳವನ್ನು ಪತ್ತೆಹಚ್ಚಲು ಮತ್ತು ಅನಗತ್ಯ ರಸ್ತೆ ತೋಡುವಿಕೆಗೆ ಕಡಿವಾಣ ಹಾಕಲು ರೋಬೋಟಿಕ್ ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
SHOCKING: ಜಡ್ಜ್ ಎದುರಲ್ಲೇ ಮಾರಕಾಸ್ತ್ರದಿಂದ ಮಹಿಳೆಯ ಕೊಲೆಗೆ ಯತ್ನ, ಆರೋಪಿ ಅರೆಸ್ಟ್
ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ `ಟಾಯ್ಲೆಟ್ ಸೀಟ್’ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!








